newsfirstkannada.com

ಕನ್ನಡಿಗರಿಗೆ ಗುಡ್​ನ್ಯೂಸ್​​; ಮತ್ತೆ ಸೀರಿಯಲ್​ಗೆ ಕಮ್​ಬ್ಯಾಕ್​ ಮಾಡಿದ ನಟಿ ಅಂಜನಾ ಶ್ರೀನಿವಾಸ್

Share :

Published April 13, 2024 at 6:11am

  ಕನ್ನಡ, ತೆಲುಗು, ತಮಿಳು ಇಂಡಸ್ಟ್ರಿಯಲ್ಲಿ ಹೆಸರು ಮಾಡಿದ ನಟಿ

  ದಶಕ ಕಳೆದರೂ ರುಕ್ಮಿಣಿಯನ್ನು ಮರೆತ್ತಿಲ್ಲ ವೀಕ್ಷಕ ಪ್ರಭುಗಳು

  ವೀಕ್ಷಕರ ಮನಸ್ಸಲ್ಲಿ ಅಚ್ಚಳಿಯದ ಛಾಪು ಮೂಡಿಸಿದ್ದ ನಟಿ ಅಂಜನಾ

ಕೃಷ್ಣ-ರುಕ್ಮಿಣಿ ಟೈಟಲ್​ ಹೇಳಿದ ತಕ್ಷಣ ಥಟ್ ಅಂತ ನೆನಪಾಗುವುದು ಆ ಕಥೆ. ಕೂಡಲೇ ಕಲಾವಿದರು ಒಂದು ಕ್ಷಣ ಕಣ್ಮುಂದೆ ಬರುತ್ತಾರೆ. ಇವತ್ತಿಗೂ ಆ ಸೀರಿಯಲ್​ ವೀಕ್ಷಕರ ಮನದಲ್ಲಿ ಹಚ್ಚ ಹಸಿರಾಗಿ ಉಳಿದುಕೊಂಡಿದೆ. ಡಾರ್ಲಿಂಗ್​ ಕೃಷ್ಣ ಅವರು ಸಿನಿಮಾ ಇಂಡಸ್ಟ್ರಿಯಲ್ಲಿ ದೊಡ್ಡ ಹೆಸರು ಮಾಡ್ತಿರೋ ನಟ.

ಇದನ್ನೂ ಓದಿ: VIDEO: ಪ್ರೇಮಿಗಾಗಿ ಪಾಕ್ ಬಿಟ್ಟು ಬಂದ ಸೀಮಾ ಹೈದರ್‌ ಮೇಲೆ ಹಲ್ಲೆ ಮಾಡಿದ್ರಾ ಸಚಿನ್‌? ಏನಿದು ಟ್ವಿಸ್ಟ್‌!

ನಮ್ಮ ಕಣ್ಮುಂದೆನೇ ಇದ್ದಾರೆ. ಆದ್ರೇ ನಾಯಕಿ ಎಲ್ಲಿಗೆ ಹೋದ್ರು? ಎಂಬ ಪ್ರಶ್ನೆ ಸೀರಿಯಲ್​ ಅಭಿಮಾನಿಗಳನ್ನು ಕಾಡಿರುತ್ತದೆ. ಆದರೆ ವೇಗದ ಬದುಕಲ್ಲಿ ತಡಕಾಡೋ ಪ್ರಯತ್ನ ಮಾಡಿರಲ್ಲ. ಸದ್ಯ ಫ್ಯಾನ್ಸ್ ಖುಷಿಪಡೋ ವಿಚಾರ ಇದೆ. ನಿಮ್ಮ ನೆಚ್ಚಿನ ರುಕ್ಮಿಣಿ ಕನ್ನಡಕ್ಕೆ ಮರಳಿದ್ದಾರೆ. ಹೌದು, ರುಕ್ಮಿಣಿ ಪಾತ್ರದ ಮೂಲಕ ಕನ್ನಡದ ಭರವಸೆ ನಟಿಯಾಗಿದ್ದವರು ಅಂಜನಾ ಶ್ರೀನಿವಾಸ್​. ದಶಕ ಕಳೆದರೂ ವೀಕ್ಷಕರು ರುಕ್ಮಿಣಿಯನ್ನು ಮರೆತ್ತಿಲ್ಲ. ವೀಕ್ಷಕರ ಮನಸ್ಸಲ್ಲಿ ಅಚ್ಚಳಿಯದ ಛಾಪು ಮೂಡಿಸಿದ್ದ ನಟಿ ಇವರು.

ಕೃಷ್ಣ-ರುಕ್ಮಿಣಿ ಸೀರಿಯಲ್​ ಯಶಸ್ಸಿನ ನಂತರ ಪಕ್ಕದ ರಾಜ್ಯಗಳಿಗೆ ಪ್ರಯಾಣ ಬೆಳಿಸಿದ್ರು ನಟಿ ಅಂಜನಾ. ತೆಲುಗು, ತಮಿಳು ಇಂಡಸ್ಟ್ರಿಯಲ್ಲಿ ಹೆಸರು ಮಾಡಿದ್ದಾರೆ. ಹಲವು ರಿಯಾಲಿಟಿ ಶೋಗಳು ಸೇರಿದಂತೆ ಯಶಸ್ವಿ ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ. ಸದ್ಯ ಸ್ಟಾರ್​ ಸುವರ್ಣ ವಾಹಿನಿಯಲ್ಲಿ ಹೊಸ ಸೀರಿಯಲ್​ ಬರ್ತಿದೆ. ಜಾನಕಿ ಸಂಸಾರ ಫಸ್ಟ್​ ಪ್ರೋಮೋ ಬಿಡುಗಡೆಯಾಗಿದೆ. ಮುಖ್ಯ ಪಾತ್ರದಲ್ಲಿ ಕುಲವಧು, ಯಾರೇ ನೀ ಮೂಹಿನಿ, ಗೃಹಪ್ರವೇಶ ಖ್ಯಾತಿಯ ನಟ ಸೂರಜ್​ ಹೊಳಲು ಹಾಗೂ ಅಂಜನಾ ಶ್ರೀನಿವಾಸ ಜೋಡಿಯಾಗಿದ್ದಾರೆ. ನಮ್ಮ ಲಚ್ಚಿ ಖ್ಯಾತಿಯ ರಿಯಾ ಪಾತ್ರಧಾರಿ ಪುಟಾಣಿ ಶ್ರೀದಿಶಾ, ಗುಂಡ್ಯಾನ್ ಹೆಂಡತಿ ಖ್ಯಾತಿಯ ಸಮೀಪ್​ ಆಚಾರ್ಯ ಕೂಡ ಇದ್ದಾರೆ. ಒಟ್ಟಿನಲ್ಲಿ ತುಂಬು ಕುಟುಂಬದ ಏಳುಬೀಳುಗಳನ್ನ ಕಟ್ಟಿಕೊಡಲಿದೆ ಜಾನಕಿ ಸಂಸಾರ. ರಿಲೀಸ್​ ಆದ ಪ್ರೋಮೋ ವಿಶೇಷವಾಗಿದ್ದು, ಅಂಜನಾ ಅವರು ಸೀರಿಯಲ್​ನ ಸ್ಪೆಷಲ್ ಅಟ್ರ್ಯಾಕ್ಷನ್​ ಆಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕನ್ನಡಿಗರಿಗೆ ಗುಡ್​ನ್ಯೂಸ್​​; ಮತ್ತೆ ಸೀರಿಯಲ್​ಗೆ ಕಮ್​ಬ್ಯಾಕ್​ ಮಾಡಿದ ನಟಿ ಅಂಜನಾ ಶ್ರೀನಿವಾಸ್

https://newsfirstlive.com/wp-content/uploads/2024/04/new-serial1.jpg

Load More