ಲಕ್ಷ್ಮೀ ನಿವಾಸ ಸೀರಿಯಲ್‌ಗೆ ದೊಡ್ಡ ಟ್ವಿಸ್ಟ್‌.. ಏಕಾಏಕಿ ಹೊರ ಬಂದ್ರಾ ನಟಿ ಚಂದನಾ?

author-image
Veena Gangani
Updated On
ಯಾಕೋ ಜಾನುಗೆ ಅಷ್ಟು ಹಿಂಸೆ ಕೊಡ್ತೀಯಾ? ನಟ ಜಯಂತ್​ಗೆ ಅಜ್ಜಿ ಖಡಕ್​ ಕ್ಲಾಸ್​
Advertisment
  • ತೆರೆಗೆ ಬಂದ ಕೆಲವೇ ದಿನಗಳಲ್ಲಿ ವೀಕ್ಷಕರನ್ನ ಸಂಪಾದಿಸಿಕೊಂಡ ಸೀರಿಯಲ್
  • ವಿಭಿನ್ನದ ಜೊತೆಗೆ ವೀಕ್ಷಕರಿಗೆ ಟ್ವಿಸ್ಟ್​ ಮೇಲೆ ಟ್ವಿಸ್ಟ್ ನೀಡುತ್ತಿದೆ ಲಕ್ಷ್ಮೀ ನಿವಾಸ
  • ಜಾನು ಪಾತ್ರದ ಮೂಲಕ ವೀಕ್ಷಕರ ಮನಸ್ಸು ಗೆದ್ದಿರೋ ಬಿಗ್​ಬಾಸ್​ ಬೆಡಗಿ

ಕನ್ನಡ ಕಿರುತೆರೆಯಲ್ಲೇ ಲಕ್ಷ್ಮೀ ನಿವಾಸ ಧಾರಾವಾಹಿ ವಿಭಿನ್ನವಾಗಿ ಮೂಡಿ ಬರ್ತಿದೆ. ಪ್ರತಿ ಪಾತ್ರಕ್ಕೂ ಅದರದ್ದೇ ಆದ ತೂಕ, ವ್ಯಕ್ತಿತ್ವ ಇದ್ದು, ನಿರ್ದೇಶಕರು ಅದನ್ನು ಅಚ್ಚುಕಟ್ಟಾಗಿ ಪ್ರೆಸೆಂಟ್​ ಮಾಡುತ್ತಿದ್ದಾರೆ. ಹೀಗಾಗಿನೇ ಅಪಾರ ವೀಕ್ಷಕರನ್ನ ಸಂಪಾದಿಸಿದೆ ಸೀರಿಯಲ್​. ಆದ್ರೆ ಸೀರಿಯಲ್​​ ಸೆಟ್​ನಿಂದ ಬಂದ ಸುದ್ದಿಯೊಂದು ಈಗ ತೀವ್ರ ಚರ್ಚೆಗೆ ಗ್ರಾಸವಾಗಿದೆ.

publive-image

ಇದನ್ನೂ ಓದಿ:ಹಾಸನ ಅಷ್ಟೇ ಅಲ್ಲ.. ಎಲ್ಲೆಲ್ಲಿ ಪೆನ್​ಡ್ರೈವ್ ಹಂಚಿದ್ದಾರೆ ಗೊತ್ತಾ? ಪ್ರೂಫ್​ ಸಮೇತ HDK ಶಾಕಿಂಗ್ ಹೇಳಿಕೆ

ಹೌದು, ಜಾನು ಪಾತ್ರದ ಮೂಲಕ ಸೀರಿಯಲ್​ ಪ್ರಿಯರ ಮನಸ್ಸು ಗೆದ್ದಿರೋ ನಟಿ ಚಂದನಾ ಲಕ್ಷ್ಮೀ ನಿವಾಸದಿಂದ ಹೊರ ಬರ್ತಿದ್ದಾರೆ. ಇನ್ಮುಂದೆ ಜಾನ್ವಿ ಪಾತ್ರಕ್ಕೆ ಬಣ್ಣ ಹಚ್ಚಲ್ಲ ಅಂತಿದ್ದಾರೆ ಎಂಬ ಸುದ್ದಿ ಇಲ್ಲಿಂದ ಅಲ್ಲಿ ಅಲ್ಲಿಂದ ಇಲ್ಲಿ ಸುಳಿದಾಡ್ತಿದೆ. ಈ ಸುದ್ದಿ ನಿಜನಾ ಅಂತಾ ಪ್ರಶ್ನೆ ಮಾಡೋ ಸಮಯಕ್ಕೆ ಸರಿಯಾಗೆ ಚಂದನಾನೇ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಒಂದು ಪೋಸ್ಟ್​ ಹರಿಬಿಟ್ಟಿದ್ದಾರೆ. ಈ ವದಂತಿಗೆ ಫುಲ್​ಸ್ಟಾಪ್‌​ ಇಟ್ಟಿದ್ದಾರೆ.

publive-image

ಈ ಬಗ್ಗೆ ಚಂದನಾ ಹೇಳಿದ್ದು ಹೀಗೆ, ನಾನು ಲಕ್ಷೀ ನಿವಾಸ ಬಿಡ್ತಿದ್ದೀನಿ ಎಂಬ ಬಗ್ಗೆ ರೂಮರ್ಸ್​ ಹರಿದಾಡ್ತಿವೆ. ನನ್ನ ಅಭಿಮಾನಿಗಳಿಗೆ ಹಾಗೂ ವೀಕ್ಷಕರಿಗೆ ಕೇಳಿಕೊಳ್ಳುವುದು ಏನಂದ್ರೇ ಈ ಸುದ್ದಿಯನ್ನ ನಂಬಬೇಡಿ. ನಾನು ಸೀರಿಯಲ್​ ಬಿಡುತ್ತಿಲ್ಲ. ಹೀಗೆ ನಿಮ್ಮ ಪ್ರೀತಿ ನನ್ನ ಹಾಗೂ ಜಾನ್ವಿ ಪಾತ್ರದ ಮೇಲೆ ತೋರಿಸಿ ಎಂದು ಸ್ಪಷ್ಟನೆ ನೀಡಿದ್ದಾರೆ.

publive-image

ಅಷ್ಟಕ್ಕೂ ಇಂತಹದೊಂದು ಸುದ್ದಿ ಹರಿದಾಡೋಕೆ ಕಾರಣ ಏನು?

ಮೂಲಗಳ ಪ್ರಕಾರ ಫ್ಯಾನ್ಸ್ ತುಂಬಾ ಇಷ್ಟಪಟ್ಟು ಸೀರಿಯಲ್ ನೋಡ್ತಿದ್ದಾರೆ. ಅದ್ರಲ್ಲೂ ಜಯಂತ್​ ಪಾತ್ರ ಅದ್ಭುತವಾಗಿ ಮೂಡಿ ಬರ್ತಿದೆ. ಇದೊಂದು ವಿಭಿನ್ನ ಪ್ರಯೋಗ. ಪತ್ನಿ ಜಾನ್ವಿನ ಸದಾ ಅನುಮಾನಿಸೋ ಸೈಕೋ ಜಯಂತ್​ ಪಾತ್ರ ತೆರೆ ಮೇಲೆ ಬಂದ್ರೆ ವೀಕ್ಷಕರು ಉಸಿರು ಬಿಗಿ ಹಿಡಿದು ವೀಕ್ಷಣೆ ಮಾಡುತ್ತಿದ್ದಾರೆ. ಜಯಂತ್​ ಎಂಟ್ರಿಗೆ ಎಷ್ಟು ಪಾಸಿಟಿವ್​ ಆಗಿ ರೆಸ್ಪಾನ್ಸ್​ ಬಂದಿತ್ತೋ ಅಷ್ಟೇ ಆ ಪಾತ್ರವನ್ನ ದ್ವೇಷ ಮಾಡೋವಷ್ಟು ವೀಕ್ಷಕರ ಮನಸ್ಸಿನ ಆಳಕ್ಕೆ ಇಳಿದಿದೆ.

publive-image

ಇದನ್ನೂ ಓದಿ:ಮೈಸೂರಲ್ಲಿ ಒಂದೇ ಕುಟುಂಬದ ನಾಲ್ವರ ಸಾವು.. ಕಾರಣವೇನು ಅಂತ ಗೊತ್ತಾದ್ರೆ ಶಾಕ್ ಆಗ್ತೀರಾ!

ನಟ ದೀಪಕ್​, ಜಯಂತ್​ ಪಾತ್ರವನ್ನ ಅದ್ಭುತವಾಗಿ ಅಭಿನಯಿಸುತ್ತಿದ್ದಾರೆ. ಹಲವು ಜನ ಚಂದನಾಗೆ ಈ ಜಾನ್ವಿ ಪಾತ್ರದಿಂದ ಹೊರ ಬನ್ನಿ ಮೇಡಂ​ ಅಂತ ಕಾಮೆಂಟ್​ ಮಾಡುತ್ತಾ ಇರ್ತಾರೆ. ಪಾತ್ರಗಳನ್ನ ನಿಜ ಜೀವನಕ್ಕೆ ಕನೆಕ್ಟ್ ಮಾಡ್ಕೊಂಡು ನೋಡ್ತಿರೋದ್ರಿಂದ ಈ ರೀತಿಯ ಸುದ್ದಿ ಹರಡಿರಬಹುದು. ಒಟ್ಟಿನಲ್ಲಿ ಚಂದನಾ ತಾವೇ ನೇರವಾಗಿ ಈ ವಿಚಾರಕ್ಕೆ ಸ್ಪಷ್ಟನೆ ನೀಡಿ ರೂಮರ್ಸ್​ಗೆ ತೆರೆ ಎಳೆದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment