newsfirstkannada.com

VIDEO: ಅಯೋಧ್ಯೆ ರಾಮಮಂದಿರದಲ್ಲಿ ನೃತ್ಯ ಮಾಡಲಿದ್ದಾರೆ ಡ್ರೀಮ್ ಗರ್ಲ್; ಹೇಮಾ ಮಾಲಿನಿ ಹೇಳಿದ್ದೇನು?

Share :

Published January 15, 2024 at 3:53pm

  ಡ್ರೀಮ್ ಗರ್ಲ್ ಖ್ಯಾತಿಯ ನಟಿ ಹೇಮಾ ಮಾಲಿನಿಯಿಂದ ನೃತ್ಯ ಪ್ರದರ್ಶನ

  ರಾಮಾಯಣ ಆಧಾರಿತ ನೃತ್ಯ ನಾಟಕವನ್ನು ಮಾಡಲಿರೋ ಬಿಜೆಪಿ ನಾಯಕಿ

  ರಾಮ ಲಲ್ಲಾ ಮೂರ್ತಿ ಪ್ರತಿಷ್ಠಾಪನೆಯ ಕಾರ್ಯಕ್ರಮಕ್ಕೆ ಹಲವು ಗಣ್ಯರು ಭಾಗಿ

ಬಿಜೆಪಿ ನಾಯಕಿ, ಬಾಲಿವುಡ್‌ನ ಡ್ರೀಮ್ ಗರ್ಲ್ ಖ್ಯಾತಿಯ ಹೇಮಾ ಮಾಲಿನಿ ಅದ್ಭುತವಾಗಿ ಅಭಿನಯಿಸುವುದಲ್ಲದೇ ಚೆನ್ನಾಗಿ ನೃತ್ಯ ಮಾಡುತ್ತಾರೆ. ಬಿಜೆಪಿ ನಾಯಕಿಯಾಗಿರೋ ಹೇಮಾ ಮಾಲಿನಿ ಅವರು ಅಯೋಧ್ಯೆಯ ರಾಮಮಂದಿರ ಲೋಕಾರ್ಪಣೆಯ ವಿಶೇಷ ಸಂದರ್ಭದಲ್ಲಿ ರಾಮಾಯಣ ಆಧಾರಿತ ನೃತ್ಯ ನಾಟಕವನ್ನು ಮಾಡಲಿದ್ದಾರಂತೆ. ಈ ಸಂತಸದ ವಿಚಾರವನ್ನು ಖುದ್ದು ಹೇಮಾಮಾಲಿನಿ ಅವರೇ ಹಂಚಿಕೊಂಡಿದ್ದಾರೆ.

ರಾಮಜನ್ಮಭೂಮಿಯಲ್ಲಿ ಶ್ರೀರಾಮ ಮಂದಿರ ಉದ್ಘಾಟನೆಯ ಸಕಲ ಸಿದ್ಧತೆಗಳು ಜೋರಾಗಿದೆ. ಜನವರಿ 22ರಂದು ರಾಮಮಂದಿರ ಲೋಕಾರ್ಪಣೆ ಆಗುತ್ತಿದ್ದು, ಅಯೋಧ್ಯೆ ಇಡೀ ವಿಶ್ವದ ಗಮನ ಸೆಳೆದಿದೆ. ಇದರ ಮಧ್ಯೆ ಹೇಮಾ ಮಾಲಿನಿ ಅವರು ವಿಶೇಷ ನೃತ್ಯ ಪ್ರದರ್ಶನಕ್ಕೆ ಸಜ್ಜಾಗಿದ್ದಾರೆ.

ಇದನ್ನು ಓದಿ: ಅಯೋಧ್ಯೆಯ ಅದ್ಭುತ ಫೋಟೋಗಳು.. ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನಿಂದ ಇಂದು ಮಹತ್ವದ ಮಾಹಿತಿ

ಇದೇ ಮೊದಲ ಬಾರಿಗೆ ನಾನು ಅಯೋಧ್ಯೆಗೆ ಬರುತ್ತಿದ್ದೇನೆ. ಜಗತ್ ಗುರು ಪದ್ಮವಿಭೂಷಣ ರಾಮಭದ್ರಾಚಾರ್ಯರ 75ನೇ ಜನ್ಮದಿನದಂದು ಅಯೋಧ್ಯೆಯಲ್ಲಿ ಅಮೃತ ಮಹೋತ್ಸವವನ್ನು ಆಯೋಜಿಸಲಾಗಿದೆ ಎಂದು ಹೇಮಾ ಮಾಲಿನಿ ಹೇಳಿದ್ದಾರೆ. ಇದೇ ಜನವರಿ 17ರಂದು ನಡೆಯೋ ನೃತ್ಯ ಪ್ರದರ್ಶನದಲ್ಲಿ ರಾಮಾಯಣ ಮತ್ತು ಮಾ ದುರ್ಗದ ವಿಶೇಷ ಸಂಚಿಕೆಯನ್ನು ಆಧರಿಸಲಿದೆ ಎನ್ನಲಾಗಿದೆ.

ಹೇಮಾ ಮಾಲಿನಿ ಅನೇಕ ಚಿತ್ರಗಳಲ್ಲಿನ ಅಭಿನಯಿಸಿ ಪ್ರಖ್ಯಾತಿ ಗಳಿಸಿದವರು. ಈಗ ನಟಿ-ರಾಜಕಾರಣಿ ಹೇಮಾ ಮಾಲಿನಿ ಅಯೋಧ್ಯೆ ರಾಮಮಂದಿರದಲ್ಲಿ ನೃತ್ಯ ಮಾಡುವುದಾಗಿ ಹೇಳಿದ್ದು ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ಅಯೋಧ್ಯೆ ರಾಮಮಂದಿರದಲ್ಲಿ ನೃತ್ಯ ಮಾಡಲಿದ್ದಾರೆ ಡ್ರೀಮ್ ಗರ್ಲ್; ಹೇಮಾ ಮಾಲಿನಿ ಹೇಳಿದ್ದೇನು?

https://newsfirstlive.com/wp-content/uploads/2024/01/hema-malini-1.jpg

Load More