newsfirstkannada.com

ಕ್ಯಾನ್ಸರ್‌ ಕೊನೆಯ ಹಂತದಲ್ಲಿ ಬಾಲಿವುಡ್​ ನಟಿ ಹೋರಾಟ; ಫ್ಯಾನ್ಸ್​ಗೆ ಹಿನಾ ಖಾನ್ ಹೇಳಿದ್ದೇನು?

Share :

Published July 5, 2024 at 3:41pm

Update July 5, 2024 at 3:55pm

  ಅತಿ ಚಿಕ್ಕ ವಯಸ್ಸಿಗೆ ಬಿಗ್‌ಬಾಸ್ ಮಾಜಿ ಸ್ಪರ್ಧಿಗೆ ಜೀವಕ್ಕೆ ಆಪತ್ತು

  ತಮ್ಮ ಕೂದಲನ್ನು ದಾನ ಮಾಡಿ ಮಾದರಿಯಾದ ನಟಿ ಹಿನಾ ಖಾನ್

  ಆದಷ್ಟು ಬೇಗ ನೀವು ಗುಣಮುಖರಾಗುತ್ತೀರಿ ಎಂದ ಅಭಿಮಾನಿಗಳು

ಕೆಲವು ದಿನಗಳ ಹಿಂದೆಯಷ್ಟೇ ಕಿರುತೆರೆ ನಟಿ, ಬಿಗ್‌ಬಾಸ್ ಮಾಜಿ ಸ್ಪರ್ಧಿ ಹಿನಾ ಖಾನ್ ಅವರು ಕ್ಯಾನ್ಸರ್ ರೋಗಕ್ಕೆ ತುತ್ತಾಗಿದ್ದೇನೆ ಅಂತ ಖಚಿತ ಪಡಿಸಿದ್ದರು. ಇದೇ ವಿಚಾರವನ್ನು ಕೇಳಿದ ಅಭಿಮಾನಿಗಳು ಫುಲ್​ ಶಾಕ್​ಗೆ ಒಳಗಾಗಿದ್ದರು. ಜೊತೆಗೆ ನಟಿ ಹಿನಾ ಖಾನ್ ಅವರ ಆರೋಗ್ಯದಲ್ಲಿ ಬೇಗ ಸುಧಾರಣೆ ಕಾಣಲಿ ಅಂತ ಹಾರೈಸಿ, ಪ್ರಾರ್ಥಿಸುತ್ತಿದ್ದಾರೆ.

ಇದನ್ನೂ ಓದಿ: ಖ್ಯಾತ ಕಿರುತೆರೆ ನಟಿ ಹಿನಾ ಖಾನ್ ಜೀವಕ್ಕೆ ಅಪಾಯ.. ಶೀಘ್ರ ಗುಣಮುಖರಾಗಲು ಪ್ರಾರ್ಥನೆ; ಏನಾಯ್ತು?

ನಟಿ, ಮಾಡೆಲ್‌ ಆಗಿ ಸಾಕಷ್ಟು ಮಿಂಚುತ್ತಿದ್ದ ಹಿನಾಖಾನ್ ಅವರಿಗೆ ಸದ್ಯ 36 ವರ್ಷ ವಯಸ್ಸು. ಬಿಗ್‌ಬಾಸ್ ಸೇರಿದಂತೆ ಹಲವು ರಿಯಾಲಿಟಿ ಶೋಗಳಲ್ಲಿ ಭಾಗಿಯಾಗಿದ್ದ ಕಿರುತೆರೆ ನಟಿ ಹಿನಾ ಖಾನ್ ಅವರು ಕ್ಯಾನ್ಸರ್ ರೋಗಕ್ಕೆ ತುತ್ತಾಗಿದ್ದಾರೆ. ಹಿನಾ ಖಾನ್‌ ಅವರ ಸ್ತನ ಕ್ಯಾನ್ಸರ್‌ 3ನೇ ಹಂತದಲ್ಲಿದ್ದು, ಇದೇ ವೇಳೆ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಮತ್ತೊಂದು ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ. ಶೇರ್ ಮಾಡಿಕೊಂಡ ವಿಡಿಯೋದಲ್ಲಿ ತಮ್ಮ ಕೂದಲನ್ನು ದಾನ ಮಾಡುವ ಮೂಲಕ ಅಭಿಮಾನಿಗಳಿಗೆ ಮಾದರಿ ಸಂದೇಶ ನೀಡಿದ್ದಾರೆ.

ಇನ್ನು, ಕ್ಯಾನ್ಸರ್​ ರೋಗಕ್ಕೆ ತುತ್ತಾದ ರೋಗಿಗಳಲ್ಲಿ ಸಹಜವಾಗಿಯೇ ಕೂದಲು ಉದುರುತ್ತದೆ. ಹೀಗಾಗಿ ತಮ್ಮ ಹೇರ್ ಸುಮ್ಮನೇ ಉದುರ ವ್ಯರ್ಥವಾಗುವ ಬದಲು ಅಗತ್ಯ ಇದ್ದವರಿಗೆ ಬಳಕೆಯಾಗಲಿ ಅನ್ನೋದು ನಟಿ ಹೀನಾ ಅವರ ಆಸೆಯಾಗಿತ್ತು. ಹೀಗಾಗಿ ಅವರ ಆಸೆಯಂತೆ ನಟಿ ಹೀನಾ ತಮ್ಮ ಕೂದಲು ದಾನ ಮಾಡಿದ್ದಾರೆ. ಇದೇ ವಿಡಿಯೋವನ್ನು ಇನ್​ಸ್ಟಾಗ್ರಾಮ್​ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಸದ್ಯ ಇದೇ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ. ಇದೇ ವಿಡಿಯೋ ನೋಡಿದ ಅಭಿಮಾನಿಗಳು ಆದಷ್ಟು ಬೇಗ ನೀವು ಗುಣಮುಖರಾಗುತ್ತೀರಿ ಅಂತ ಧೈರ್ಯ ತುಂಬುವಂತಹ ಕೆಲಸ ಮಾಡುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕ್ಯಾನ್ಸರ್‌ ಕೊನೆಯ ಹಂತದಲ್ಲಿ ಬಾಲಿವುಡ್​ ನಟಿ ಹೋರಾಟ; ಫ್ಯಾನ್ಸ್​ಗೆ ಹಿನಾ ಖಾನ್ ಹೇಳಿದ್ದೇನು?

https://newsfirstlive.com/wp-content/uploads/2024/07/hina-khan1.jpg

Load More