ನಟಿಯಾಗಿ ಮಿಂಚಲು ಸಜ್ಜಾದ ‘ವೀರ ಮದಕರಿ’ ಚಿತ್ರದ ಬಾಲನಟಿ ಜೆರುಶಾ ಕ್ರಿಸ್ಟೋಫರ್; ಯಾವ ಸಿನಿಮಾ?

author-image
Veena Gangani
Updated On
ನಟಿಯಾಗಿ ಮಿಂಚಲು ಸಜ್ಜಾದ ‘ವೀರ ಮದಕರಿ’ ಚಿತ್ರದ ಬಾಲನಟಿ ಜೆರುಶಾ ಕ್ರಿಸ್ಟೋಫರ್; ಯಾವ ಸಿನಿಮಾ?
Advertisment
  • ಡ್ಯಾನ್ಸ್, ರಿಯಾಲಿಟಿ ಶೋಗಳ ಮೂಲಕ ಗುರುತಿಸಿಕೊಂಡಿದ್ದ ನಟಿ
  • ‘ವೀರ ಮದಕರಿ’ಯಲ್ಲಿ ಕಿಚ್ಚ ಸುದೀಪ್ ಮಗಳಾಗಿ ನಟಿ ಅಭಿನಯ
  • ಸ್ಯಾಂಡಲ್​ವುಡ್​ ಸ್ಟಾರ್​ ನಿರ್ದೇಶಕನ ಚಿತ್ರಕ್ಕೆ ಸಹಿ ಹಾಕಿದ ನಟಿ ಜೆರುಶಾ

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಚಿತ್ರದಲ್ಲಿ ಬಾಲ ನಟಿಯಾಗಿ ನಟಿಸಿದ್ದ ಜೆರುಶಾ ಕ್ರಿಸ್ಟೋಫರ್ ಸಖತ್​ ಸುದ್ದಿಯಲ್ಲಿದ್ದಾರೆ. ‘ವೀರ ಮದಕರಿ’ ಚಿತ್ರದಲ್ಲಿ ಸುದೀಪ್ ಮಗಳಾಗಿ ನಟಿಸಿದ್ದ ನಟಿ ಜೆರುಶಾ ಕ್ರಿಸ್ಟೋಫರ್ ಹೊಸ ಕನ್ನಡ ಸಿನಿಮಾದಲ್ಲಿ ಕಾಣಿಸಿಕೊಳ್ಳಲು ಸಜ್ಜಾಗಿದ್ದಾರೆ.

ಇದನ್ನೂ ಓದಿ:‘ವೀರ ಮದಕರಿ’ಯಲ್ಲಿ ಕಿಚ್ಚ ಸುದೀಪ್ ಮಗಳಾಗಿ ನಟಿಸಿದ್ದ ಈ ನಟಿ ಇಂದು ಸ್ಟಾರ್ ಹೀರೋಯಿನ್.. ಯಾರಿವಳು ಸುಂದರಿ..?

publive-image

ಸ್ಯಾಂಡಲ್​ವುಡ್​ ಸ್ಟಾರ್​ ನಿರ್ದೇಶಕ ಮಹೇಶ್ ಬಾಬು ಅವರು ಇದೀಗ ಬಾಲನಟಿ ಜೆರುಶಾ ಕ್ರಿಸ್ಟೋಫರ್​ನನ್ನು ನಾಯಕಿಯಾಗಿ ತೆರೆ ಮೇಲೆ ತರುತ್ತಿದ್ದಾರೆ. ಡ್ಯಾನ್ಸ್, ರಿಯಾಲಿಟಿ ಶೋಗಳ ಹಾಗೂ ಬಾಲ ನಟಿಯಾಗಿ ಈಗಾಗಲೇ ಪ್ರೇಕ್ಷಕರ ಗಮನ ಸೆಳೆದಿದ್ದಾರೆ. ಸ್ಮೈಲ್ ಗುರು ರಕ್ಷಿತ್‌ಗೆ ಜೋಡಿಯಾಗಿ ಜೆರುಶಾ ಕ್ರಿಸ್ಟೋಫರ್ ಮಿಂಚಲಿದ್ದಾರೆ. ಮಹೇಶ್ ಬಾಬು ನಿರ್ದೇಶನದ ಮೂಲಕ ಬೆಳ್ಳಿತೆರೆಗೆ ಪದಾರ್ಪಣೆ ಮಾಡಲು ಸಿದ್ಧತೆ ನಡೆಸಿಕೊಳ್ಳುತ್ತಿದ್ದಾರೆ.

publive-image

ಅಂದಹಾಗೆ ತೆಲುಗಿನ ‘ವಿಕ್ರಮಾರ್ಕುಡು’ ರಿಮೇಕ್ ಚಿತ್ರ ವೀರ ಮದಕರಿ. ಕಿಚ್ಚ ಸುದೀಪ್ ಹಾಗೂ ರಾಗಿಣಿ ದ್ವಿವೇದಿ ಅಭಿನಯದ ‘ವೀರ ಮದಕರಿ’ 2009ರಲ್ಲಿ ತೆರೆಕಂಡಿತ್ತು. ಅಂದು ಸುದೀಪ್ ಚಿತ್ರದಲ್ಲಿ ಮಗಳಾಗಿ ನಟಿಸಿದ್ದ ನಟಿ, ಇಂದು ಹೀರೋಯಿನ್ ಆಗಿ ಮಿಂಚುತ್ತಿದ್ದಾರೆ. ಈ ನೂತನ ಚಿತ್ರಕ್ಕೆ ಚೇತನ್ ಮತ್ತು ಅನುರಾಗ್ ಬಂಡವಾಳ ಹೂಡಲಿದ್ದಾರೆ. ಈ ಚಿತ್ರಕ್ಕೆ ಅನೂಪ್ ಸೀಳಿನ್ ಅವರು ಸಂಗೀತ ಸಂಯೋಜನೆ ಮತ್ತು ಸತ್ಯ ಛಾಯಾಗ್ರಾಹಣ ಇರಲಿದೆ. ನಟ ರಕ್ಷಿತ್‌ ಹಾಗೂ ನಟಿ ಜೆರುಶಾ ಕ್ರಿಸ್ಟೋಫರ್ ಅವರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment