newsfirstkannada.com

ನಟಿ ಜ್ಯೋತಿ ರೈ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋ ವೈರಲ್​​.. ಅಸಲಿ ಕತೆ ಏನು?

Share :

Published May 11, 2024 at 6:13am

  ಮಾರ್ಫಿಂಗ್ ಮಾಡಿರುವರ ವಿರುದ್ಧ ಕ್ರಮಕ್ಕೆ ಜ್ಯೋತಿ ರೈ ಆಗ್ರಹ

  ಸ್ಯಾಂಡಲ್​ವುಡ್​ ಅಂಗಳದಲ್ಲಿ ಸಂಚಲನ ಮೂಡಿಸಿದ ಅಶ್ಲೀಲ ಭೂತ

  ನಟಿ ಜ್ಯೋತಿ ರೈ ಅವರದ್ದು ಎನ್ನಲಾದ ಖಾಸಗಿ ವಿಡಿಯೋ ವೈರಲ್?

ಅಶ್ಲೀಲ ಭೂತದ ಭಯ ರಾಜ್ಯವನ್ನ ದಂಗಾಗಿಸಿದೆ. ರಾಜಕೀಯ ರಂಗದ ಬಳಿಕ ಸಿನಿಮಾ ರಂಗಕ್ಕೂ ಅಶ್ಲೀಲ ಆರೋಪದ ಲೇಪನವಾಗಿದೆ. ಕಿರುತೆರೆ ನಟಿಯೊಬ್ಬರದ್ದೂ ಎನ್ನಲಾದ ಅಶ್ಲೀಲ ವಿಡಿಯೋಗಳು ಚಂದನವನದಲ್ಲಿ ಸದ್ದು ಮಾಡತೊಡಗಿವೆ. ಘಟನೆ ಸಂಬಂಧ ನಟಿ ಕಾನೂನು ಸಮರವನ್ನ ಸಹ ಸಾರಿದ್ದಾರೆ.

ಇದನ್ನೂ ಓದಿ: ನಿಶ್ಚಿತಾರ್ಥ ಮುಗಿಸಿ ಮನೆಗೆ ಹೋಗಿದ್ದ.. ವಾಪಸ್ ಬಂದು ಕತ್ತೇ ಕತ್ತರಿಸಿದ; ಅಷ್ಟಕ್ಕೂ ಗುಡ್ಡದಲ್ಲಿ ನಡೆದಿದ್ದೇನು?

ಸಂಸದ ಪ್ರಜ್ವಲ್​ ರೇವಣ್ಣರದ್ದೂ ಎನ್ನಲಾದ ಅಶ್ಲೀಲ ವಿಡಿಯೋ ಹಾಸನದ ಹಾದಿ ಬೀದಿಯಲ್ಲಿ ರಾಜ್ಯ ರಾಜಕೀಯದ ಮರ್ಯಾದೆಯನ್ನ ಹರಾಜು ಹಾಕಿದೆ. ಆರೋಪ-ಪ್ರತ್ಯಾರೋಪಗಳ ಹಗ್ಗಜಗ್ಗಾಟ ರಾಜ್ಯ ರಾಜಕೀಯವನ್ನ ರಣರಂಗವಾಗಿಸಿದೆ. ದಿಗ್ಗಜರ ಕಾದಟಕ್ಕೆ ಕಾರಣವಾಗಿರೋ ಈ ಅಶ್ಲೀಲ ಭೂತ ಸದ್ಯ ಚಂದನವನದ ಬೆನ್ನು ಬಿದ್ದಿದೆ. ಖ್ಯಾತ ಕಿರುತೆರೆ ನಟಿ ಜ್ಯೋತಿ ರೈ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋಗಳು ಸಾಮಾಜಿ ಜಾಲತಾಣದಲ್ಲಿ ವೈರಲ್ ಆಗ್ತಿವೆ. ಕೆಲವು ದಿನಗಳ ಹಿಂದೆ ಯೂಟ್ಯೂಬರ್ ಓರ್ವ ತನ್ನ X ಖಾತೆಯಲ್ಲಿ ಜ್ಯೋತಿ ರೈ ಅವರ ಖಾಸಗಿ ವೀಡಿಯೊಗಳನ್ನು ಹಂಚಿಕೊಂಡಿದ್ದಾನೆ. ಈ ವೇಳೆ ಜ್ಯೋತಿ ರೈ ಅವರ ಹ್ಯಾಶ್‌ಟ್ಯಾಗ್ ಕೂಡ ಟ್ರೆಂಡಿಂಗ್ ಆಗಿದೆ. ತಮ್ಮ ಫೋಟೋಗಳನ್ನ ಹರಿಬಿಟ್ಟವರ ವಿರುದ್ಧ ನಟಿ ಜ್ಯೋತಿ ರೈ ಕಾನೂನು ಸಮರ ಸಾರಿದ್ದಾರೆ. ಘಟನೆ ಸಂಬಂಧ ಸೈಬರ್ ಕ್ರೈಂ ವಿಭಾಗಕ್ಕೆ ಜ್ಯೋತಿ ದೂರು ನೀಡಿದ್ದಾರೆ. ಮಾರ್ಫಿಂಗ್ ಮಾಡಿರುವ ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ನಟಿ ಜ್ಯೋತಿ ರೈ ಮನವಿ ಮಾಡಿದ್ದಾರೆ. ನನ್ನ ಮಾನ ಹಾಗೂ ಕುಟುಂಬದ ಗೌರವ ಅಪಾಯದಲ್ಲಿದೆ. ಸರಿಯಾದ ಕ್ರಮ ತೆಗೆದುಕೊಳ್ಳದಿದ್ದರೆ ನನ್ನ ಜೀವನದಲ್ಲಿ ಸರಿಪಡಿಸಲಾಗದ ಹಾನಿ ಉಂಟಾಗುತ್ತದೆ ಎಂದು ದೂರಿನಲ್ಲಿ ನಟಿ ಕಳವಳ ವ್ಯಕ್ತಪಡಿಸಿದ್ದಾರೆ.‌

ಸೋಶಿಯಲ್ ಮೀಡಿಯಾದಲ್ಲಿ ಹರಿದಾಡ್ತಿರೋ ಅಶ್ಲೀಲ ವಿಡಿಯೋ ಹಾಗೂ ಫೋಟೋಗಳ ಬಗ್ಗೆ ನಟಿ ಜ್ಯೋತಿ ರೈ ಮೌನತಾಳಿದ್ದಾರೆ. ವಿಡಿಯೋ ವೈರಲ್​ ಬಳಿಕ ತಮ್ಮದೇ ಇನ್‌ಸ್ಟಾಗ್ರಾಂನಲ್ಲಿ ಎರಡನೇ ಪತಿ ಸುಕು ಪೂರ್ವಜ್‌ ಜತೆಗಿನ ಫೋಟೋ ಶೇರ್‌ ಮಾಡಿ ಹಾರ್ಟ್‌ ಎಮೋಜಿ ಹಾಕಿ ಸ್ಟೋರಿ ಪೋಸ್ಟ್‌ ಮಾಡಿದ್ದಾರೆ.. ಇದನ್ನ ಸುಕು ಪೂರ್ವಜ್‌ ಸಹ ಶೇರ್​ ಮಾಡಿ ಹಾರ್ಟ್​ ಎಮೋಜಿ ನೀಡಿದ್ದಾರೆ. ಈ ಮೂಲಕ ಘಟನೆಯಿಂದ ತಮ್ಮ ಸಾಂಸಾರಿಕ ಜೀವನದ ಮೇಲೆ ಯಾವುದೇ ಪರಿಣಾಮ ಬೀರಿಲ್ಲ ಅನ್ನೋ ಸಂದೇಶವನ್ನ ನಟಿ ರವಾನಿಸಿದ್ದಾರೆ. ಒಟ್ಟಿನಲ್ಲಿ ಅತ್ತ ಹಾಸನ ಅಶ್ಲೀಲ ವಿಡಿಯೋಗಳು ಸದ್ದು ಮಾಡ್ತಿದ್ರೆ ಇತ್ತ ಸ್ಯಾಂಡಲ್​ವುಡ್​ನಲ್ಲಿ ಜ್ಯೋತಿ ರೈ ಅವರದ್ದು ಎನ್ನಲಾದ ಅಶ್ಲೀಲ ದೃಶ್ಯಗಳು ವೈರಲ್​ ಪ್ರಪಂಚದಲ್ಲಿ ಗುಲ್ಲೆಬ್ಬಿಸಿವೆ. ಈ ವಿಡಿಯೋಗಳನ್ನ ವೈರಲ್ ಮಾಡುವ ಮೊದಲು ಅವರ ಜೀವನದ ಮೇಲೆ ಯಾವ ರೀತಿ ಪರಿಣಾಮ ಆಗುತ್ತೆ ಅನ್ನೊದನ್ನ ಕೂಡ ಕಿಡಿಗೇಡಿಗಳು ತಿಳಿದುಕೊಳ್ಳಬೇಕು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನಟಿ ಜ್ಯೋತಿ ರೈ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋ ವೈರಲ್​​.. ಅಸಲಿ ಕತೆ ಏನು?

https://newsfirstlive.com/wp-content/uploads/2024/05/JyothiRai.jpg

Load More