newsfirstkannada.com

VIDEO: ‘ತೇಜಸ್ವಿ ಸೂರ್ಯ ಮೀನು ತಿಂತಾರೆ, ಗೂಂಡಾಗಿರಿ ಮಾಡ್ತಾರೆ’- ಕಂಗನಾ ಶಾಕಿಂಗ್​ ಹೇಳಿಕೆ!

Share :

Published May 5, 2024 at 6:21am

  ವಿರೋಧ ಪಕ್ಷದ ನಾಯಕರನ್ನು ಟೀಕಿಸುವ ಭರದಲ್ಲಿ ನಟಿ ಕಂಗನಾ ಎಡವಟ್ಟು

  ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರೋ ನಟಿ ಕಂಗನಾ

  ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯ್ತು ನಟಿ ಕಂಗನಾ ಮಾತಿನ ವಿಡಿಯೋ

ಬಾಲಿವುಡ್​ನ ಖ್ಯಾತ ನಟಿ ಕಂಗನಾ ರಣಾವತ್ ಅವರು ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ. ಹೀಗೆ ಭಾಷಣದ ವೇಳೆ ವಿರೋಧ ಪಕ್ಷದ ನಾಯಕರನ್ನು ಟೀಕಿಸುವ ಭರದಲ್ಲಿ ಎಡವಟ್ಟುವೊಂದನ್ನು ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ಕಾದು ಕಾದು ಕೊನೆಗೂ ಅರೆಸ್ಟ್​ ಮಾಡಿದ SIT ಅಧಿಕಾರಿಗಳು; ರೇವಣ್ಣ ಸಿಕ್ಕಿಬಿದ್ದಿದ್ದೇ ರೋಚಕ!

ಹೌದು, ಮಂಡಿ ಲೋಕಸಭಾ ಕ್ಷೇತ್ರದ ಸರ್ಕಾಘಾಟ್ ವಿಧಾನಸಭಾ ಕ್ಷೇತ್ರದ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತಾಡಿದ  ನಟಿ ಕಂಗನಾ ರಣಾವತ್, ಸಂಸದ ತೇಜಸ್ವಿ ಸೂರ್ಯ ಅವರು ಮೀನು ತಿಂತಾರೆ, ಗೂಂಡಾಗಿರಿ ಮಾಡ್ತಾರೆ ಎಂದು ಹೇಳಿದ್ದಾರೆ. ಆದರೆ ಆರ್​ಜೆಡಿ ಮುಖ್ಯಸ್ಥ ತೇಜಸ್ವಿ ಯಾದವ್ ಅವರನ್ನು ಟೀಕಿಸುವ ಭರದಲ್ಲಿ ಕರ್ನಾಟಕದ ಸಂಸದ ತೇಜಸ್ವಿ ಸೂರ್ಯ ಅವರ ಬಗ್ಗೆ ಮಾತಾಡಿದ್ದಾರೆ.

ಹೀಗೆ ತೇಜಸ್ವಿ ಯಾದವ್ ಹೆಸರು ಹೇಳುವ ಬದಲು ಸಂಸದ ತೇಜಸ್ವಿ ಸೂರ್ಯ ಎಂದ ಹೇಳಿ ಫಜೀತಿಗೆ ಸಿಕ್ಕಿಹಾಕಿಕೊಂಡಿದ್ದಾರೆ. ಇದರ ಜೊತೆಗೆ ರಾಹುಲ್​ ಗಾಂಧಿ ಅವರೂ ಎಲ್ಲಿಗೆ ಬರುತ್ತಾರೆ. ಎಲ್ಲಿಗೆ ಹೋಗುತ್ತಾರೆ ಎಂಬುವುದು ಅವರಿಗೇ ಗೊತ್ತಿಲ್ಲ ಅಂತ ವ್ಯಂಗ್ಯವಾಗಿ ಮಾತಾಡಿದ್ದಾರೆ. ಸದ್ಯ ನಟಿ ಕಂಗನಾ ರಣಾವತ್ ಆಡಿದ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ. ವಿಡಿಯೋ ನೋಡಿದ ಅನೇಕರು ನಟಿ ಕಂಗನಾ ಏನೂ ಹೇಳುತ್ತಿದ್ದಾರೆ ಅಂತಾ ಅವರಿಗೆ ಗೊತ್ತಾಗುತ್ತಿಲ್ಲ ಅಂತಾ ಕಮೆಂಟ್ ಮಾಡುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ‘ತೇಜಸ್ವಿ ಸೂರ್ಯ ಮೀನು ತಿಂತಾರೆ, ಗೂಂಡಾಗಿರಿ ಮಾಡ್ತಾರೆ’- ಕಂಗನಾ ಶಾಕಿಂಗ್​ ಹೇಳಿಕೆ!

https://newsfirstlive.com/wp-content/uploads/2024/05/kangana.jpg

Load More