/newsfirstlive-kannada/media/post_attachments/wp-content/uploads/2024/07/Renukaswamy-Murder-Case.jpg)
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್ ಇಡೀ ರಾಜ್ಯದಲ್ಲಿ ಅತಿ ದೊಡ್ಡ ಸಂಚಲನ ಸೃಷ್ಟಿಸಿದೆ. ದರ್ಶನ್ ಬಂಧನವಾದ ಬಳಿಕ ಈ ಪ್ರಕರಣದ ಬಗ್ಗೆ ಸಾಕಷ್ಟು ಆಯಾಮಗಳಲ್ಲಿ ಚರ್ಚೆಯಾಗುತ್ತಿದೆ. ಈ ಬಗ್ಗೆ ಸ್ಯಾಂಡಲ್‌ವುಡ್ ನಟ, ನಟಿಯರು ತಮ್ಮದೇ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.
ನಟಿ ಮಮತಾ ರಾವತ್ ಅವರು ರೇಣುಕಾಸ್ವಾಮಿ ಕೊಲೆ ಪ್ರಕರಣದ ಕುರಿತಂತೆ ನ್ಯೂಸ್ ಫಸ್ಟ್‌ಗೆ ಪ್ರತಿಕ್ರಿಯೆ ನೀಡಿದ್ದಾರೆ. ನನಗೂ ರೇಣುಕಾಸ್ವಾಮಿ ಅವರದ್ದು ಎನ್ನಲಾದ ಸೋಷಿಯಲ್ ಮೀಡಿಯಾ ಅಕೌಂಟ್‌ನಿಂದ ಕೆಟ್ಟ ಮೆಸೇಜ್ ಬಂದಿದೆ. ಮಧ್ಯರಾತ್ರಿ ಸಮಯದಲ್ಲಿ ವಿಡಿಯೋ ಕಾಲ್ ಕೂಡ ಬಂದಿದೆ ಎಂದಿದ್ದಾರೆ.
ಈ ಸಮಾಜದಲ್ಲಿ ಕೆಟ್ಟ, ಕೆಟ್ಟ ಮೆಸೇಜ್ ಮಾಡುವವರ ದೊಡ್ಡ ದಂಡೇ ಇದೆ. ಬ್ಲಾಕ್ ಮಾಡುತ್ತಾ ಹೋದ್ರೆ ಎಷ್ಟು ಅಂತ ಬ್ಲಾಕ್ ಮಾಡ್ತೀರಾ? ಬರೀ ಕೆಟ್ಟ, ಕೆಟ್ಟ ಶಬ್ದಗಳಲ್ಲೇ ಕಮೆಂಟ್ ಹಾಕುತ್ತಾರೆ. ಅಸಭ್ಯ-ಅಶ್ಲೀಲವಾಗಿ ಯಾಕೆ ಮೆಸೇಜ್ ಮಾಡ್ಬೇಕು? ಕಂಪ್ಲೆಂಟ್ ಕೊಟ್ಟಿರುವ ಎಷ್ಟು ಜನರಿಗೆ ಶಿಕ್ಷೆ ಆಗಿದೆ ಎಂದು ಮಮತಾ ರಾವತ್ ಅವರು ಪ್ರಶ್ನಿಸಿದ್ದಾರೆ.
ಇನ್ನು, ರಾಜ್ಯದಲ್ಲಿ ನಟ ದರ್ಶನ್ ಅವರ ಪ್ರಕರಣ ಒಂದೇ ಉದಾಹರಣೆ ಅಲ್ಲ. ಈ ರೀತಿ ಮೆಸೇಜ್ ಮಾಡಿ ತೊಂದರೆ ಕೊಡುತ್ತಿರುವ ಸಾಕಷ್ಟು ಕೇಸ್‌ಗಳು ಇವೆ. ಪೊಲೀಸರು ಎಲ್ಲಾ ಕೇಸ್‌ಗಳನ್ನು ಒಂದೇ ರೀತಿ ತನಿಖೆ ಮಾಡಬೇಕು.
ಇದನ್ನೂ ಓದಿ: VIDEO: ಕೊಲೆ ಕೇಸಲ್ಲಿ ಜೈಲು ಸೇರಿದ ನಟ ದರ್ಶನ್ ಬಗ್ಗೆ ಪ್ರಕಾಶ್ ರಾಜ್ ಏನಂದ್ರು?
ಸಿನಿಮಾ ನಟಿಯರು, ಸೆಲೆಬ್ರಿಟಿಗಳೂ ಅಂತಾನೇ ಅಲ್ಲ. ಸಾಮಾನ್ಯ ಹುಡುಗಿಯರಿಗೂ ಇಂತಹ ಕೆಟ್ಟ ಅನುಭವ ಆಗ್ತಿದೆ. ಯಾರೂ ಹೇಳಲ್ಲ... ಕಂಪ್ಲೆಂಟ್ ಕೊಡಲ್ಲ ಅಷ್ಟೇ. ಇಂಥ ಘಟನೆಗಳು ನೋಡಿದ್ರೆ ಮನೆಯಲ್ಲಿ ಭಯ ಪಡ್ತಾರೆ. ರೇಣುಕಾಸ್ವಾಮಿ ಕೇಸ್ ತನಿಖೆ ಆಗ್ತಿದೆ. ಇನ್ಮುಂದೆ ರೇಣುಕಾಸ್ವಾಮಿ ಅವರ ರೀತಿ ಮೆಸೇಜ್ ಮಾಡೋರನ್ನ ತಡೆಯಬೇಕು ಎಂದು ಮಮತಾ ರಾವತ್ ಅವರು ಆಗ್ರಹಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ