newsfirstkannada.com

ಸದ್ದಿಲ್ಲದೆ ನಿಶ್ಚಿತಾರ್ಥ ಮಾಡಿಕೊಂಡ ಗಿಣಿರಾಮ ಸೀರಿಯಲ್​ ನಟಿ ನಯನಾ ನಾಗರಾಜ್​; ಹುಡುಗ ಯಾರು?

Share :

Published March 2, 2024 at 7:51pm

  ಗಿಣಿರಾಮ ಧಾರಾವಾಹಿಯಲ್ಲಿ ಮಹತಿಯ ಪಾತ್ರದಲ್ಲಿ ಮಿಂಚಿದ್ದ ನಟಿ

  ಗುರು ಹಿರಿಯರ ಸಮ್ಮುಖದಲ್ಲಿ ನಟಿ ನಯನಾ ನಾಗರಾಜ್​ ಎಂಗೇಜ್ಮೆಂಟ್

  ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಯ್ತು ನಿಶ್ಚಿತಾರ್ಥದ ವಿಡಿಯೋ

ಕನ್ನಡ ಕಿರುತೆರೆಯ ಜನಪ್ರಿಯ ಸೂಪರ್​ ಹಿಟ್​​ ಧಾರಾವಾಹಿ ಗಿಣಿರಾಮ. ಉತ್ತರ ಕರ್ನಾಟಕ ಭಾಷೆಯ ಸೊಗಡನ್ನ ಹೊಂದಿದ್ದ ಗಿಣಿರಾಮ ಸೀರಿಯಲ್​ ನಟಿ ನಯನಾ ನಾಗರಾಜ್​ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಹೌದು, ನಟಿ ನಯನಾ ನಾಗರಾಜ್​ ಗುರು ಹಿರಿಯರ ಸಮ್ಮುಖದಲ್ಲಿ ಸರಳವಾಗಿ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ.

ಇದನ್ನು ಓದಿ: ಮುಕ್ತಾಯ ಹಂತದಲ್ಲಿ ಜನಪ್ರಿಯ ‘ಗಿಣಿರಾಮ’ ಧಾರಾವಾಹಿ! ಕಾರಣವೇನು..?

ನಟಿ ನಯನಾ ನಾಗರಾಜ್ ಅವರು ಸುಹಾಸ್ ಶಿವಣ್ಣ ಎಂಬುವವರ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ನಿಶ್ಚಿತಾರ್ಥದ ವಿಡಿಯೋವನ್ನು ಇನ್​ಸ್ಟಾಗ್ರಾಮ್ ಖಾತೆಯಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ಇನ್ನೂ ಈ ವಿಡಿಯೋ ನೋಡಿದ ಅಭಿಮಾನಿಗಳು ನಟಿ ನಯನಾ ನಾಗರಾಜ್​ ಅವರಿಗೆ ಶುಭ ಕೋರುತ್ತಿದ್ದಾರೆ.

ನಟಿ ನಯನಾ ನಾಗರಾಜ್ ಗಿಣಿರಾಮ ಧಾರಾವಾಹಿಯಲ್ಲಿ ಮಹತಿಯ ಪಾತ್ರ ನಿಭಾಯಿಸುತ್ತಿದ್ದರು. ಬಿಗ್​ಬಾಸ್​ ಸೀಸನ್​ 8 ಮುಗಿದ ಬಳಿಕ ಮಿನಿ ಸೀಸನ್​ನಲ್ಲಿ ನಯನ ನಾಗರಾಜ್ ಕಾಲಿಟ್ಟಿದ್ದರು. ಈ ಮೊದಲು ನಟಿ ನಯನ ನೈಜ ಘಟನೆಗಳಿಂದ ಪ್ರೇರಿತವಾದ ಕ್ರೈಂ ಕತೆ ಶಾಂತಂ ಪಾಪಂ ಮೂಲಕ ವೀಕ್ಷಕರ ಮನಸ್ಸನ್ನು ಗೆದ್ದಿದ್ದರು. ಇದಾದ ಬಳಿಕ ಪಾಪ ಪಾಂಡು, ಗಿಣಿರಾಮ ಸೀರಿಯಲ್​ ಮೂಲಕ ಸಾಕಷ್ಟು ಜನಪ್ರಿಯತೆ ಪಡೆದುಕೊಂಡರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸದ್ದಿಲ್ಲದೆ ನಿಶ್ಚಿತಾರ್ಥ ಮಾಡಿಕೊಂಡ ಗಿಣಿರಾಮ ಸೀರಿಯಲ್​ ನಟಿ ನಯನಾ ನಾಗರಾಜ್​; ಹುಡುಗ ಯಾರು?

https://newsfirstlive.com/wp-content/uploads/2024/03/nayana-nagarj.jpg

Load More