newsfirstkannada.com

ರಾಘವ್ ಚಡ್ಡಾಗೆ ಪರಿಣಿತಿ ಚೋಪ್ರಾ 2ನೇ ಪತ್ನಿನಾ? ಮೊದಲ ಹೆಂಡತಿ, ಮಕ್ಕಳ ಬಗ್ಗೆ ಹೇಳಿದ್ದೇನು?

Share :

Published May 1, 2024 at 5:03pm

    ರಾಘವ್ ಚಡ್ಡಾ ಯಾರು, ಏನು ಕೆಲಸ, ವಯಸ್ಸು ಎಷ್ಟು ಅನ್ನೋದು ಗೊತ್ತಿರಲಿಲ್ಲ!

    ಕಳೆದ ವರ್ಷ ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಪರಿಣಿತಿ ಚೋಪ್ರಾ

    ಲೋಕಸಭಾ ಚುನಾವಣೆಯಲ್ಲಿ ಹೊತ್ತಲ್ಲಿ ಪಕ್ಷದ ಪ್ರಚಾರದಲ್ಲಿ ಸಂಸದ ನಾಪತ್ತೆ ಏಕೆ?

ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಮತ್ತು AAP ಸಂಸದ ರಾಘವ್ ಚಡ್ಡಾ ಒಂದಲ್ಲಾ ಒಂದು ವಿಚಾರಕ್ಕೆ ಸುದ್ದಿಯಲ್ಲಿ ಇರುವಂತಹ ಸ್ಟಾರ್​ ದಂಪತಿ. ಕಳೆದ ವರ್ಷ ಸೆಪ್ಟೆಂಬರ್ 24ರಂದು ನಟಿ ಪರಿಣಿತಿ ಚೋಪ್ರಾ ಮತ್ತು ರಾಘವ್ ಚಡ್ಡಾ ಬಹಳ ಅದ್ಧೂರಿಯಾಗಿ ಮದುವೆಯಾದರು. ಮದುವೆಯಾಗಿ ಇನ್ನೂ ಒಂದು ವರ್ಷ ಕಳೆದಿಲ್ಲ. ಮತ್ತೆ ಈ ಜೋಡಿ ಸಖತ್​ ಸುದ್ದಿಯಲ್ಲಿದ್ದಾರೆ.

ಇದನ್ನೂ ಓದಿ: ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ಪ್ರಕರಣ.. ಪ್ರಧಾನಿ ಮೋದಿಗೆ ರಾಹುಲ್‌ ಗಾಂಧಿ ಖಡಕ್ ಪ್ರಶ್ನೆ; ಹೇಳಿದ್ದೇನು?

ನಟಿ ಪರಿಣಿತಿ ಚೋಪ್ರಾ ಅವರು ಪತಿ ರಾಘವ್ ಚಡ್ಡಾ ಅವರೊಂದಿಗೆ ಲವ್​ನಲ್ಲಿ ಬಿದ್ದಿದ್ದು ಹೇಗೆ ಎಂಬುದರ ಬಗ್ಗೆ ಮಾಹಿತಿ ಬಿಚ್ಚಿಟ್ಟಿದ್ದಾರೆ. ಇದೇ ವಿಚಾರವಾಗಿ ಸಂದರ್ಶನವೊಂದರಲ್ಲಿ ಮಾತಾಡಿದ ಅವರು, ನಾನು ಮತ್ತು ರಾಘವ್ ಚಡ್ಡಾ ಅವರು ಮೊದಲ ಬಾರಿಗೆ ಲಂಡನ್‌ನಲ್ಲಿ ಭೇಟಿಯಾದೆವು. ಆಗ ಈತ ಯಾರು, ಏನು ಕೆಲಸ ಮಾಡುತ್ತಾನೆ, ವಯಸ್ಸು ಎಷ್ಟಿರಬಹುದು ಅಂತ ಗೊತ್ತಿರಲಿಲ್ಲ. ಆಗ ನನಗೆ ಇವನನ್ನೇ ನಾನು ಮದುವೆಯಾಗಬೇಕು ಎಂದು ಮನಸ್ಸು ಹೇಳುತ್ತಿತ್ತು.

ಅವರಿಗೆ ಮದುವೆಯಾಗಿದೆಯೋ, ಮಕ್ಕಳಿದ್ದಾರೋ ಅದು ನನಗೆ ಗೊತ್ತಿಲ್ಲ. ಒಟ್ಟಾರೆ ನಾನು ಅವರನ್ನೇ ಮದುವೆ ಆಗಬೇಕು ಅಂತಾ ಅನಿಸಿತ್ತು. ಅವರು ನನ್ನ ಕುಳಿತುಕೊಂಡಾಗ ನಾನು ಅವನನ್ನೇ ನೋಡುತ್ತಿದ್ದೆ ಎಂದು ಪರಿಣಿತಿ ಚೋಪ್ರಾ ಹೇಳಿಕೊಂಡಿದ್ದಾರೆ. ಆದರೆ ನಟಿಯ ಮಾತನ್ನು ಕೇಳಿದ ಅಭಿಮಾನಿಗಳು ಅವರ ಮಾತನ್ನು ತಪ್ಪಾಗಿ ಕಲ್ಪನೆ ಮಾಡಿಕೊಂಡು ಈಗಾಗಲೇ ರಾಘವ್ ಚಡ್ಡಾ ಅವರಿಗೆ ಮದುವೆ ಆಗಿದೆ. ಮಕ್ಕಳಿದ್ದಾರೆ ಅಂತಾ ಭಾವಿಸಿಕೊಂಡು ರಾಘವ್ ಚಡ್ಡಾಗೆ ಪರಿಣಿತಿ ಚೋಪ್ರಾ ಎರಡನೇ ಹೆಂಡತಿನಾ ಅಂತ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ಹೊತ್ತಲ್ಲಿ ಪಕ್ಷದ ಪ್ರಚಾರದಲ್ಲಿ ರಾಘವ್ ಚಡ್ಡಾ ಕಾಣಿಸಿಕೊಂಡಿರಲಿಲ್ಲ. ಹೀಗಾಗಿ ಕೆಲವರಲ್ಲಿ ರಾಘವ್ ಚಡ್ಡಾ ಏಕೆ ಕಾಣಿಸಿಕೊಳ್ಳುತ್ತಿಲ್ಲ ಎಂಬ ಪ್ರಶ್ನೆ ಕೇಳಿದ್ದರು. ಈ ಬಗ್ಗೆ ಪ್ರತ್ರಿಕ್ರಿಯೆ ನೀಡಿದ AAP ನಾಯಕ ಮತ್ತು ದೆಹಲಿ ಸಚಿವ ಸೌರವ್ ಭಾರದ್ವಾಜ್ ಅವರು, ರಾಘವ್ ಚಡ್ಡಾ ಕಣ್ಣಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಈ ಕಣ್ಣಿನ ಸಮಸ್ಯೆಯಿಂದ ತೀವ್ರವಾಗಿ ನೋವಿಗೆ ಒಳಗಾಗಿದ್ದು, ಈ ಸಂಬಂಧ ಲಂಡನ್​ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶೀಘ್ರದಲ್ಲೇ ಚೇತರಿಸಿಕೊಳ್ಳುತ್ತಾರೆ. ಬಳಿಕ ದೆಹಲಿಯಲ್ಲಿ ಪಕ್ಷದ ಪ್ರಚಾರದಲ್ಲಿ ಭಾಗಿಯಾಗಲಿದ್ದಾರೆ ಎಂದು ಹೇಳಿದ್ದಾರೆ. ಇನ್ನು, ಈ ವಿಚಾರ ತಿಳಿಯುತ್ತಿದ್ದಂತೆ ನೆಟ್ಟಿಗರು ರಾಘವ್ ಚೆಡ್ಡಾ ಶೀಘ್ರವೇ ಗುಣಮುಖರಾಗಲಿ ಎಂದು ಪ್ರಾರ್ಥಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಾಘವ್ ಚಡ್ಡಾಗೆ ಪರಿಣಿತಿ ಚೋಪ್ರಾ 2ನೇ ಪತ್ನಿನಾ? ಮೊದಲ ಹೆಂಡತಿ, ಮಕ್ಕಳ ಬಗ್ಗೆ ಹೇಳಿದ್ದೇನು?

https://newsfirstlive.com/wp-content/uploads/2024/05/ragav-and-parinithi1.jpg

Load More