newsfirstkannada.com

ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ಪ್ರಕರಣ.. ಪ್ರಧಾನಿ ಮೋದಿಗೆ ರಾಹುಲ್‌ ಗಾಂಧಿ ಖಡಕ್ ಪ್ರಶ್ನೆ; ಹೇಳಿದ್ದೇನು?

Share :

Published May 1, 2024 at 3:09pm

    ‘ಎಂದಿನಂತೆ ಮಹಿಳೆಯರ ದೌರ್ಜನ್ಯ ಪ್ರಕರಣದ ಬಗ್ಗೆ ಮೋದಿ ಮೌನ’

    ಮೋದಿ ಮೌನ ದೇಶಾದ್ಯಂತ ಅಪರಾಧಿಗಳ ನೈತಿಕ ಶಕ್ತಿಯನ್ನು ಹೆಚ್ಚಿಸುತ್ತಿದೆ

    ಇಷ್ಟು ದೊಡ್ಡ ಹಗರಣದ ಅಪರಾಧಿ ದೇಶದಿಂದ ಪರಾರಿಯಾಗಿದ್ದು ಹೇಗೆ?

ಬೆಂಗಳೂರು: ಹಾಸನ ಅಶ್ಲೀಲ ಪೆನ್‌ಡ್ರೈವ್ ಪ್ರಕರಣದಲ್ಲಿ ಸಂಸದ ಪ್ರಜ್ವಲ್ ರೇವಣ್ಣ ಅವರು ವಿದೇಶಕ್ಕೆ ಹೋಗಿದ್ದಾರೆ. ಪ್ರಜ್ವಲ್ ರೇವಣ್ಣ ಅವರು ದೇಶ ಬಿಟ್ಟು ಹೋದ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರನ್ನು ಕಾಂಗ್ರೆಸ್ ಪ್ರಶ್ನಿಸುತ್ತಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ಕಿಡಿಕಾರಿದ್ದಾರೆ.

ಇದನ್ನೂ ಓದಿ: BREAKING: ಪ್ರಜ್ವಲ್ ರೇವಣ್ಣ ಇರೋ ಜಾಗ ಕೊನೆಗೂ ಪತ್ತೆ; ಈ ದಿನ ಬೆಂಗಳೂರಿಗೆ ವಾಪಸ್? 

ಸೋಷಿಯಲ್ ಮೀಡಿಯಾ Xನಲ್ಲಿ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ ಅವರು ಕರ್ನಾಟಕದಲ್ಲಿ ಮಹಿಳೆಯರ ದೌರ್ಜನ್ಯ ಪ್ರಕರಣದ ಬಗ್ಗೆ ಎಂದಿನಂತೆಯೇ ಪ್ರಧಾನಿ ಮೋದಿ ಅವರು ಮೌನವಹಿಸಿದ್ದಾರೆ. ಈ ಬಗ್ಗೆ ಪ್ರಧಾನಿ ಮೋದಿ ಉತ್ತರಿಸಬೇಕು ಎಂದು ರಾಹುಲ್ ಗಾಂಧಿ ಒತ್ತಾಯಿಸಿದ್ದಾರೆ.

ಅಶ್ಲೀಲ ಪೆನ್‌ಡ್ರೈವ್ ಪ್ರಕರಣದ ಬಗ್ಗೆ ಗೊತ್ತಿದ್ದು ಮಹಿಳೆಯರನ್ನು ಶೋಷಣೆ ಮಾಡುವವನ ಪರ ಪ್ರಚಾರ ನಡೆಸಿದ್ದು ಏಕೆ? ಇಷ್ಟು ದೊಡ್ಡ ಹಗರಣದ ಅಪರಾಧಿ ದೇಶದಿಂದ ಪರಾರಿಯಾಗಿದ್ದು ಹೇಗೆ? ಪ್ರಧಾನಿ ಮೋದಿಯವರ ಮೌನ ದೇಶಾದ್ಯಂತ ಅಪರಾಧಿಗಳ ನೈತಿಕ ಶಕ್ತಿಯನ್ನು ಹೆಚ್ಚಿಸುತ್ತಿದೆ. ಮೋದಿ ಅವರ ರಾಜಕೀಯ ಪರಿವಾರದ ಭಾಗವಾಗುವುದು ಅಪರಾಧಿಗಳ ಸುರಕ್ಷೆಯ ಗ್ಯಾರಂಟಿ ನೀಡುತ್ತಿದೆಯೇ? ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸವಾಲು ಹಾಕಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ಪ್ರಕರಣ.. ಪ್ರಧಾನಿ ಮೋದಿಗೆ ರಾಹುಲ್‌ ಗಾಂಧಿ ಖಡಕ್ ಪ್ರಶ್ನೆ; ಹೇಳಿದ್ದೇನು?

https://newsfirstlive.com/wp-content/uploads/2024/05/Rahul-Gandhi-On-Prajwal-Revanna.jpg

Load More