newsfirstkannada.com

ಮದರ್ಸ್ ಡೇ ದಿನವೇ ಇಬ್ಬರು ಮುದ್ದಾದ ಮಕ್ಕಳನ್ನು ಅಗಲಿದ ಕಿರುತೆರೆ ನಟಿ ಪವಿತ್ರ ಜಯರಾಂ

Share :

Published May 12, 2024 at 3:55pm

Update May 12, 2024 at 3:51pm

  ಚಿಕ್ಕ ವಯಸ್ಸಿನಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ನಟಿ ಪವಿತ್ರಾ ಜಯರಾಂ

  ಅಮ್ಮನನ್ನು ಕಳೆದುಕೊಂಡು ಇಬ್ಬರು ಮಕ್ಕಳ ಆಕ್ರಂದನ ಮುಗಿಲು ಮುಟ್ಟಿದೆ

  ನಟಿ ಪವಿತ್ರಾ ಜಯರಾಮ್ ನಿಧನಕ್ಕೆ ಕಂಬನಿ ಮಿಡಿದ ಕಿರುತೆರೆ ಕಲಾವಿದರು

ಇವತ್ತು ಪ್ರತಿಯೊಬ್ಬ ಮಕ್ಕಳಿಗೂ ತುಂಬಾ ವಿಶೇಷವಾದ ದಿನ. ಮದರ್ಸ್ ಡೇ ಸ್ಪೆಷಲ್ ದಿನದಂದು ಎಲ್ಲ ಮಕ್ಕಳು ತಮ್ಮ ತಾಯಿ ಜೊತೆ ಕಾಲ ಕಳೆಯಲು ಇಷ್ಟ ಪಡುತ್ತಾರೆ. ಆದರೆ ಮದರ್ಸ್ ಡೇ ದಿನವೇ ಇಬ್ಬರು ಮಕ್ಕಳು ತನ್ನ ತಾಯಿಯನ್ನೇ ಕಳೆದುಕೊಂಡು ದುಃಖದಲ್ಲಿದ್ದಾರೆ.

ಇದನ್ನೂ ಓದಿ: ರಾಧಾ ರಮಣ ಸೀರಿಯಲ್ ನಟಿ ಪವಿತ್ರಾ ಜಯರಾಂ ನಿಧನ; ಅಸಲಿಗೆ ಆಗಿದ್ದೇನು?

ಹೌದು, ಕನ್ನಡದ ರೋಬೋ ಫ್ಯಾಮಿಲಿ, ಜೋಕಾಲಿ, ನೀಲಿ, ರಾಧಾ ರಮಣ ಸೇರಿದಂತೆ ಹಲವಾರು ಧಾರಾವಾಹಿಯಲ್ಲಿ ನಟಿಸಿ ಜನಪ್ರಿಯರಾಗಿದ್ದ ನಟಿ ಪವಿತ್ರ ಜಯರಾಂ ಮೃತಪಟ್ಟಿದ್ದಾರೆ. ಇಂದು ಮುಂಜಾನೆ ಹೈದರಾಬಾದ್ ಸಮೀಪದ ಮೆಹಬೂಬ್ ನಗರದಲ್ಲಿ ನಟಿ ಪವಿತ್ರ ಜಯರಾಂ ಅವರು ಪ್ರಯಾಣಿಸುತ್ತಿದ್ದ ಕಾರು ಭೀಕರ ಅಪಘಾತಕ್ಕೀಡಾಗಿದೆ. ಈ ಅಪಘಾತದಲ್ಲಿ ನಟಿ ಪವಿತ್ರಾ ಜಯರಾಂ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಘಟನೆಯಲ್ಲಿ ನಟಿಯ ಸಂಬಂಧಿ ಅಪೇಕ್ಷಾ, ಚಾಲಕ ಶ್ರೀಕಾಂತ್ ಮತ್ತು ಸಹ ನಟ ಚಂದ್ರಕಾಂತ್ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ. ಕೂಡಲೇ ಗಂಭೀರವಾಗಿ ಗಾಯಗೊಂಡ ಅವರನ್ನು ಪೊಲೀಸ್​ ಅಧಿಕಾರಿಗಳು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಇದನ್ನೂ ಓದಿ: ತಂದೆ ಜೊತೆ ಕಾರು ವಾಶ್ ಮಾಡುತ್ತಿದ್ದಾಗ ಅನಾಹುತ.. ಬೆಂಗಳೂರಲ್ಲಿ 5 ವರ್ಷದ ಬಾಲಕ ದಾರುಣ ಸಾವು

ಚಿಕ್ಕ ವಯಸ್ಸಿನಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಮೃತ ನಟಿ ಪವಿತ್ರಾಗೆ ಓರ್ವ ಮಗಳು ಮತ್ತು ಓರ್ವ ಮಗನಿದ್ದಾನೆ. ತಾಯಿಯನ್ನು ಕಳೆದುಕೊಂಡ ಇಬ್ಬರು ಮಕ್ಕಳ ಆಕ್ರಂದನ ಮುಗಿಲು ಮುಟ್ಟಿದೆ. ಇನ್ನು, ನಟಿಯ ನಿಧನದ ವಿಚಾರ ತಿಳಿಯುತ್ತಿದ್ದಂತೆ ಕನ್ನಡ ಮತ್ತು ತೆಲುಗು ಕಿರುತೆರೆಯ ನಟ ನಟಿಯರು ಕಂಬನಿ ಮಿಡಿದಿದ್ದಾರೆ. ಅಭಿಮಾನಿಗಳು ಕೂಡ ನಟಿ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿ ಬೇಸರ ಹೊರ ಹಾಕುತ್ತಿದ್ದಾರೆ.

ನಟಿ​ಗೆ ಅತಿ ಹೆಚ್ಚು ಜನಪ್ರಿಯತೆ ತಂದು ಕೊಟ್ಟ ತ್ರಿನಯನಿ ಸೀರಿಯಲ್​

ನಟಿ ಪವಿತ್ರಾ ಜಯರಾಮ್ ಅವರು ತೆಲುಗು ಕಿರುತೆರೆಯಲ್ಲಿ ಬ್ಯುಸಿಯಾಗಿದ್ದರು. ತೆಲುಗು ತ್ರಿನಯನಿ ಧಾರವಾಹಿಯ ಮೂಲಕ ಅತಿ ಹೆಚ್ಚು ವೀಕ್ಷಕರಿಗೆ ಚಿರಪರಿಚಿತರಾಗಿದ್ದರು. ಈ ಧಾರಾವಾಹಿಯಲ್ಲಿ ಖಳನಾಯಕಿ ತಿಲೋತ್ತಮ ಪಾತ್ರದಲ್ಲಿ ಅದ್ಭುತವಾಗಿ ನಟಿಸುತ್ತಿದ್ದರು. ಈ ಧಾರಾವಾಹಿಯು ಕನ್ನಡಕ್ಕೆ ಡಬ್ ಆಗಿತ್ತು. ಜೀ ಕನ್ನಡ ವಾಹಿನಿಯಲ್ಲಿ ತ್ರಿನಯನಿ ಧಾರಾವಾಹಿ ಕನ್ನಡ ವರ್ಷನ್ ಪ್ರಸಾರವಾಗುತ್ತಿತ್ತು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮದರ್ಸ್ ಡೇ ದಿನವೇ ಇಬ್ಬರು ಮುದ್ದಾದ ಮಕ್ಕಳನ್ನು ಅಗಲಿದ ಕಿರುತೆರೆ ನಟಿ ಪವಿತ್ರ ಜಯರಾಂ

https://newsfirstlive.com/wp-content/uploads/2024/05/pavithra-jayaram3.jpg

Load More