2ನೇ ಮಗುವಿಗೆ ಜನ್ಮ ನೀಡಿದ ಬೆನ್ನಲ್ಲೇ ಪ್ರತ್ಯಕ್ಷರಾದ ನಟಿ ಪ್ರಣಿತಾ ಸುಭಾಷ್; ಫ್ಯಾನ್ಸ್​ ಫುಲ್ ಶಾಕ್!

author-image
Veena Gangani
Updated On
2ನೇ ಮಗುವಿಗೆ ಜನ್ಮ ನೀಡಿದ ಬೆನ್ನಲ್ಲೇ ಪ್ರತ್ಯಕ್ಷರಾದ ನಟಿ ಪ್ರಣಿತಾ ಸುಭಾಷ್; ಫ್ಯಾನ್ಸ್​ ಫುಲ್ ಶಾಕ್!
Advertisment
  • ನಟಿ ಶೇರ್ ಮಾಡಿಕೊಂಡ ಫೋಟೋ ನೋಡಿ ಫ್ಯಾನ್ಸ್​ ಏನಂದ್ರು ಗೊತ್ತಾ?
  • ಪೊರ್ಕಿ ಸಿನಿಮಾದ ಮೂಲಕ ಹೆಚ್ಚು ಖ್ಯಾತಿ ಪಡೆದಿದ್ದ ಪ್ರಣಿತಾ ಸುಭಾಷ್
  • ಇನ್​ಸ್ಟಾದಲ್ಲಿ ಫುಲ್ ಆ್ಯಕ್ಟಿವ್ ಆಗಿರುತ್ತಾರೆ ಬಹುಭಾಷಾ ನಟಿ ಪ್ರಣಿತಾ

ಬಹುಭಾಷಾ ನಟಿ ಪ್ರಣಿತಾ ಸುಭಾಷ್ ಅವರ ಮನೆಯಲ್ಲಿ ಸಂಭ್ರಮ ಮೊಳಗಿದೆ. ನಟಿ ಪ್ರಣಿತಾ ಸುಭಾಷ್ ತಮ್ಮ ಎರಡನೇ ಮಗುವನ್ನು ಬರಮಾಡಿಕೊಂಡಿದ್ದಾರೆ. ಸಿನಿಮಾಗಳಿಗೆ ಬ್ರೇಕ್ ನೀಡಿದ ನಟಿ ಮುದ್ದಾದ ಮಗುವಿನ ಆರೈಕೆಯಲ್ಲಿ ಕಾಲ ಕಳೆಯುತ್ತಿದ್ದಾರೆ.

ಇದನ್ನೂ ಓದಿ: 2ನೇ ಮಗುವನ್ನು ಬರಮಾಡಿಕೊಂಡ ಪೊರ್ಕಿ ನಟಿ ಪ್ರಣಿತಾ; ಗಂಡಾ, ಹೆಣ್ಣಾ ಹೇಳಿ ನೋಡೋಣ..

publive-image

ಆದರೆ ಇದೀಗ ನಟಿಯ ಹೊಸ ವಿಡಿಯೋ ನೋಡಿದ ಅಭಿಮಾನಿಗಳು ಶಾಕ್ ಆಗಿದ್ದಾರೆ. ಸೆಪ್ಟೆಂಬರ್ 5ರಂದು ಗಂಡು ಮಗುವಿಗೆ ಜನ್ಮ ನೀಡಿದ್ದರು. ಎರಡನೇ ಮಗುವಿಗೆ ಜನ್ಮ ನೀಡಿದ ನಟಿ ವಿಶ್ರಾಂತಿ ಪಡೆಯುತ್ತಿದ್ದಾರೆ ಎಂದು ಅಭಿಮಾನಿಗಳು ಅಂದುಕೊಂಡಿದ್ದರು. ಆದರೆ ದಿಢೀರ್ ಅಂತ ಗಣೇಶನ ಪೂಜೆ ಮಾಡುತ್ತಾ ಕಾಣಿಸಿಕೊಂಡಿದ್ದಾರೆ.

publive-image

ಗಣೇಶ ಹಬ್ಬದ ನಿಮಿತ್ತ ನಟಿ ಪ್ರಣಿತಾ ಸುಭಾಷ್ ತಮ್ಮ ಇನ್​ಸ್ಟಾಗ್ರಾಮ್​ ವಿಡಿಯೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. ಆ ವಿಡಿಯೋದಲ್ಲಿ ನಟಿ ಆರಾಮದಾಯಕವಾಗಿ ಗಣೇಶನಿಗೆ ಪೂಜೆ ಸಲ್ಲಿಸಿದ್ದಾರೆ. ಇದನ್ನೇ ನೋಡಿದ ಅಭಿಮಾನಿಗಳು ನೀವು ಇಷ್ಟು ಬೇಗ ರಿಕವರಿ ಆದ್ರಾ?? ಅದು ಹೇಗೆ ಸಾಧ್ಯ? ನೀವು ಆಸ್ಪತ್ರೆಯಲ್ಲಿ ಇಲ್ವಾ ಅಂತೆಲ್ಲಾ ಕಾಮೆಂಟ್ಸ್ ಹಾಕಿದ್ದಾರೆ.

ನಟಿ ಪ್ರಣಿತಾ 2022 ಮೇ 30 ನಟಿ ಪ್ರಣಿತಾ ಸುಭಾಷ್​​ ಅವರು ನಿತಿನ್​ ರಾಜು ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ನಟಿಗೆ ಈಗಾಗಲೇ ಒಂದು ಹೆಣ್ಣು ಮಗು ಇದೆ. ಆಗಾಗ ಮಗಳು ಅರ್ನಾ ಜೊತೆ ಸುಂದರ ಕ್ಷಣಗಳನ್ನು ಕಳೆಯುತ್ತಿದ್ದ ಫೋಟೋಗಳನ್ನು ನಟಿ ಶೇರ್ ಮಾಡಿಕೊಳ್ಳುತ್ತಾ ಇರುತ್ತಾರೆ. ಸದ್ಯ ನಟಿಗೆ ಗಂಡು ಮಗುವಾಗಿರುವ ವಿಚಾರ ಕೇಳಿದ ಅಭಿಮಾನಿಗಳು ಶುಭ ಕೋರುತ್ತಿದ್ದಾರೆ. ಕನ್ನಡ ಮಾತ್ರವಲ್ಲ, ತೆಲುಗು, ತಮಿಳು, ಮಲಯಾಳಂ ಸಿನಿಮಾಗಳಲ್ಲೂ ಪ್ರಣಿತಾ ನಟಿಸಿ ಸೈ ಎನಿಸಿಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment