Advertisment

ಅಬ್ಬಬ್ಬಾ.. ನ್ಯಾಷನಲ್​ ಕ್ರಶ್ ರಶ್ಮಿಕಾ​ ಬೈಸೆಪ್ಸ್ ಕಂಡು ದಂಗಾದ ಫ್ಯಾನ್ಸ್; ಏನಂದ್ರು ಗೊತ್ತಾ? VIDEO

author-image
Veena Gangani
Updated On
ಅಬ್ಬಬ್ಬಾ.. ನ್ಯಾಷನಲ್​ ಕ್ರಶ್ ರಶ್ಮಿಕಾ​ ಬೈಸೆಪ್ಸ್ ಕಂಡು ದಂಗಾದ ಫ್ಯಾನ್ಸ್; ಏನಂದ್ರು ಗೊತ್ತಾ? VIDEO
Advertisment
  • ಕಪ್ಪು ಬಣ್ಣದ ಸೀರೆಯಲ್ಲಿ ಕಾಣಿಸಿಕೊಂಡ ನಟಿಗೆ ಫ್ಯಾನ್ಸ್​ ಹೀಗೆ ಹೇಳಿದ್ದೇಕೆ?
  • ಒಂದಲ್ಲಾ ಒಂದು ವಿಚಾರಕ್ಕೆ ಸುದ್ದಿಯಲ್ಲಿ ಇರ್ತಾರೆ ನ್ಯಾಷನಲ್​ ಕ್ರಶ್ ರಶ್ಮಿಕಾ
  • ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ ಈ ವಿಡಿಯೋ

ಕೊಡಗಿನ ಬೆಡಗಿ, ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಸಾಮಾಜಿಕ ಜಾಲತಾಣದಲ್ಲಿ ಹೊಸ ಫೋಟೋ ಹಾಗೂ ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುತ್ತಲೇ ಇರುತ್ತಾರೆ. ಅತಿ ಹೆಚ್ಚು ಫ್ಯಾನ್ಸ್​ ಹೊಂದಿರೋ ಇವರು ಒಂದಲ್ಲ ಮತ್ತೊಂದು ವಿಚಾರಕ್ಕೆ ಸದಾ ಸುದ್ದಿಯಾಗುತ್ತಲೇ ಇರುತ್ತಾರೆ. ಇದೀಗ ನಟಿ ರಶ್ಮಿಕಾ ಮಂದಣ್ಣ ಅವರ ಬೈಸೆಪ್ಸ್ ನೋಡಿದ ಅಭಿಮಾನಿಗಳು ಫುಲ್​ ಶಾಕ್​ ಆಗಿದ್ದಾರೆ.

Advertisment

publive-image

ಇದನ್ನೂ ಓದಿ:ನ್ಯಾಷನಲ್ ಕ್ರಶ್​ನ ನ್ಯಾಚುರಲ್​ ಲುಕ್​​​; ನಗು ಮುಖದ ರಶ್ಮಿಕಾ ಹೊಸ ಫೋಟೋಗೆ ಫ್ಯಾನ್ಸ್ ಫುಲ್‌ ಫಿದಾ!

ಹೌದು, ಮುಖೇಶ್​ ಅಂಬಾನಿ ಪುತ್ರ ಅನಂತ್​ ಹಾಗೂ ರಾಧಿಕಾ ಮದುವೆಗೆ ನಟಿ ರಶ್ಮಿಕಾ ಮಂದಣ್ಣ ಹೋಗಿದ್ದರು. ಕಪ್ಪು ಬಣ್ಣದ ಸೀರೆಯಲ್ಲಿ ಕ್ಯಾಮೆರಾಗಳಿಗೆ ಮಸ್ತ್ ಮಸ್ತ್ ಪೋಸ್ ನೀಡಿದ್ದಾರೆ. ನ್ಯಾಷನಲ್​ ಕ್ರಶ್​ ರಶ್ಮಿಕಾ ಅವರು ಕ್ಯಾಮೆರಾಗೆ ಪೋಸ್​ ಕೊಡುತ್ತಿದ್ದಾಗ ಅವರ ಬೈಸೆಪ್ಸ್ ಕಾಣಿಸಿಕೊಂಡಿದೆ. ರಶ್ಮಿಕಾ ಮಂದಣ್ಣ ಅವರು ಪ್ರತಿದಿನ ರನ್ನಿಂಗ್, ಬ್ಯಾಕ್ ಫ್ಲಿಪ್ ಸೇರಿದಂತೆ ಹಲವು ರೀತಿಯಲ್ಲಿ ವರ್ಕೌಟ್ ಮಾಡುತ್ತಲೇ ಇರುತ್ತಾರೆ. ಹೀಗೆ ವರ್ಕೌಟ್ ಮಾಡಿದ ಪ್ರಭಾವಕ್ಕೆ ನಟಿಯ ಬೈಸೆಪ್ಸ್ ಕಾಣಿಸಿಕೊಂಡಿದೆ.

Advertisment

ಸದ್ಯ ಸೋಷಿಯಲ್​ ಮೀಡಿಯಾದಲ್ಲಿ ಇದೇ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಇದೇ ವಿಡಿಯೋ ನೋಡಿದ ಅಭಿಮಾನಿಗಳು ಯಾರಾದರೂ ಗಮನಿಸಿದ್ದೀರಾ? ನೋಡಿ ನೋಡಿ ರಶ್ಮಿಕಾ ಮಂದಣ್ಣ ಬೈಸೆಪ್ಸ್, ಎಷ್ಟೂ ಸುಂದರವಾಗಿ ಕಾಣುತ್ತಿದ್ದಾರೆ ನ್ಯಾಷನಲ್​ ಕ್ರಶ್​ ಅಂತ ಕಾಮೆಂಟ್ಸ್​ ಹಾಕಿದ್ದಾರೆ. ಬಾಲಿವುಡ್‌ನಲ್ಲಿ ಬ್ಯುಸಿಯಾಗಿರುವ ನಟಿ ರಶ್ಮಿಕಾ ಮಂದಣ್ಣ ಅವರು ಇತ್ತೀಚೆಗೆ ಅಂಬಾನಿ ಫ್ಯಾಮಿಲಿಯ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚಂಟ್ ವಿವಾಹ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಅದಾದ ಬಳಿಕ ರಾಯಲ್ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment