/newsfirstlive-kannada/media/post_attachments/wp-content/uploads/2024/06/SAPTAMI_GOWDA_3.jpg)
ಕಾಂತಾರ ಚಿತ್ರದೊಂದಿಗೆ ಪ್ಯಾನ್ ಇಂಡಿಯಾ ಸ್ಟಾರ್ ಆದ ನಟಿ ಸಪ್ತಮಿ ಗೌಡ ಸಖತ್ ಸ್ಟೈಲಿಶ್ ಫೋಟೋ ಶೂಟ್ ಮಾಡಿಸಿದ್ದಾರೆ. ವೈಟ್ ಸ್ಲೀವ್ ಲೆಸ್ ಟಾಪ್, ನೀಲಿ ಬಣ್ಣದ ಸ್ಕರ್ಟ್ ಧರಿಸಿರುವ ಬ್ಯೂಟಿ ಫುಲ್ ಹಾಟ್.. ಹಾಟ್​ ಆಗಿ ನೋಡುಗರ ಕಣ್ಮನ ಸೆಳೆದಿದ್ದಾರೆ. ಕಾಂತಾರ ಬೆಡಗಿಯ ಸ್ಟೈಲೀಶ್ ಬೋಲ್ಡ್​ ಲುಕ್‌ಗೆ ಹುಡುಗರು ಫುಲ್ ಫಿದಾ ಆಗಿದ್ದಾರೆ.
/newsfirstlive-kannada/media/post_attachments/wp-content/uploads/2024/06/SAPTAMI_GOWDA_2.jpg)
ಸ್ಯಾಂಡಲ್​ವುಡ್​ನ ಕಾಂತಾರ ಸಿನಿಮಾದಿಂದಲೇ ಇಡೀ ಕನ್ನಡಿಗರ ಮನ ಗೆದ್ದಿದ್ದ ಬ್ಯೂಟಿ ಸಪ್ತಮಿ ಗೌಡ ಈಗ ಸಖತ್ ಮಾಡರ್ನ್ ಆಗಿದ್ದಾರೆ. ಬಿಳಿ ಟಾಪ್, ಕಡು ನೀಲಿ ಬಣ್ಣದ ಶಾರ್ಟ್ ತೊಟ್ಟು ಸಿಲಿಕಾನ್ ಸಿಟಿಯ ರಸ್ತೆಗಳಲ್ಲಿ ಫೋಟೊ ಶೂಟ್ ಮಾಡಿಸಿದ್ದಾರಂತೆ. ಈ ಪೋಟೋಗಳು ಶೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದ್ದು ನೆಟ್ಟಿಗರು ವಿವಿಧ ಕಮೆಂಟ್ಸ್​ ಮಾಡುತ್ತಿದ್ದಾರೆ.
/newsfirstlive-kannada/media/post_attachments/wp-content/uploads/2024/06/SAPTAMI_GOWDA.jpg)
ದುನಿಯಾ ಸೂರಿ ನಿರ್ದೇಶನದ ಪಾಪ್​ ಕಾರ್ನ್​ ಮಂಕಿ ಟೈಗರ್​, ಡಿವೈನ್ ಸ್ಟಾರ್​ ರಿಷಬ್ ಶೆಟ್ಟಿಯವರ ಕಾಂತಾರ ಹಾಗೂ ಇತ್ತೀಚೆಗೆ ತೆರೆ ಕಂಡಿದ್ದ ಯುವ ಸಿನಿಮಾದಲ್ಲಿ ಸಪ್ತಮಿ ಅಭಿನಯ ಮಾಡಿದ್ದರು. ಇವರು ಮಾಡಿದ ಮೂರು ಸಿನಿಮಾಗಳು ಹಿಟ್ ಕಂಡಿದ್ದವು. ಅದರಲ್ಲಿ ಕಾಂತಾರ ಮೂವಿಯಂತೂ ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಹಿಟ್ ಆಗಿತ್ತು. ಯುವ ಮೂವಿ ಆದ ಮೇಲೆ ಯಾವುದೇ ಹೊಸ ಸಿನಿಮಾದ ಬಗ್ಗೆ ನಟಿ ಸಪ್ತಮಿ ಅಪ್​ಡೇಟ್ ಕೊಟ್ಟಿಲ್ಲ. ಈಗ ಫೋಟೋಶೂಟ್ ಮಾಡಿಸಿರುವ ಹಿನ್ನೆಲೆ ಹೊಸ ಸಿನಿಮಾಕ್ಕೆ ಆಗಿರಬಹುದು ಎಂದು ಫ್ಯಾನ್ಸ್​ ಪ್ರಶ್ನೆ ಮಾಡುತ್ತಿದ್ದಾರೆ.
ಇದನ್ನೂ ಓದಿ: ಹೆಂಡತಿ ಸಾವಿನಿಂದ ನೊಂದ ಗಂಡ.. ಮಧ್ಯರಾತ್ರಿ ನೇಣು ಬಿಗಿದುಕೊಂಡು ಸಾವು
/newsfirstlive-kannada/media/post_attachments/wp-content/uploads/2024/06/SAPTAMI_GOWDA_1.jpg)
ಹೊಸ ಸಿನಿಮಾದ ಬಗ್ಗೆ ಅಪ್‌ಡೇಟ್ ಕೊಡದ ಸಪ್ತಮಿ ಗೌಡ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿದ್ದಾರೆ. ಇನ್‌ಸ್ಟಾ ಅಕೌಂಟ್​ನಲ್ಲಿ 10 ಫೋಟೊಗಳನ್ನು ಪೋಸ್ಟ್ ಮಾಡಿದ್ದು ವೈರಲ್ ಆಗುತ್ತಿವೆ. ತೆಲುಗಿನ ತಮ್ಮುಡು ಚಿತ್ರದಲ್ಲಿ ಸಪ್ತಮಿ ನಾಯಕಿಯಾಗಿ ನಟಿಸುತ್ತಿದ್ದು, ಬಹು ಭಾಷೆತಾರೆಯಾಗಿ ಮಿಂಚಲು ರೆಡಿಯಾಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us