ಮೂಗು ಚುಚ್ಚಿಸಿಕೊಂಡಾಗ ಯುವತಿಯರು ಈ ತಪ್ಪು ಮಾಡಬೇಡಿ
ಮೂಗು ಚುಚ್ಚುವುದರಿಂದ ಏನೆಲ್ಲಾ ಆರೋಗ್ಯ ಪ್ರಯೋಜನಗಳಿವೆ
ಭಾರತದಲ್ಲಿ ಮೂಗು ಚುಚ್ಚುವಿಕೆಗೆ ಹೆಚ್ಚಿನ ಧಾರ್ಮಿಕ ಮಹತ್ವವಿದೆ
ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಯುವತಿಯರು ಮೂಗುತಿ ಚುಚ್ಚಿಸಿಕೊಳ್ಳುವುದನ್ನೇ ಮರೆತು ಬಿಟ್ಟಿದ್ದಾರೆ. ಮೂಗುತಿ ಎಂದರೆ ಸಾಂಪ್ರದಾಯಿಕ ಆಭರಣವೆನಿಸಿಕೊಂಡ ಕಾಲವಿತ್ತು. ಆದರೆ ಈಗ ಅದು ಫ್ಯಾಶನ್ ಕೂಡಾ ಆಗಿದೆ. ಸಾಂಪ್ರದಾಯಿಕ ಆಭರಣವಾದರೂ ಇದು ಅತ್ಯಂತ ಮಹಿಳೆಯರಿಗೆ ಆಕರ್ಷಕವಾಗಿ ಕಾಣಿಸುತ್ತದೆ. ಆದರೆ ಹಿಂದಿನ ಕಾಲದಲ್ಲಿ ಹಿರಿಯರು ತಮ್ಮ ಮನೆಯ ಹೆಣ್ಣು ಮಕ್ಕಳಿಗೆ ತಪ್ಪದೇ ಮೂಗುತಿ ಚುಚ್ಚಿಸುತ್ತಿದ್ದರು. ಅದರ ಹಿಂದೆ ಒಂದು ಬಲವಾದ ಕಾರಣ ಕೂಡ ಇದೆ.
ಇದನ್ನೂ ಓದಿ: ಪುಟ್ಟ ಮಕ್ಕಳ ಕೈಗೆ ಬೆಳ್ಳಿ ಬಳೆ ಮತ್ತು ಕಾಲಿಗೆ ಗೆಜ್ಜೆ ಹಾಕೋದ್ಯಾಕೆ? ಇಲ್ಲಿದೆ ವೈಜ್ಞಾನಿಕ ಕಾರಣ!
ಭಾರತೀಯ ಸಂಸ್ಕೃತಿಯಲ್ಲಿ ಮೂಗುತಿ ಧರಿಸುವ ಪದ್ಧತಿಯು 16ನೇ ಶತಮಾನದಲ್ಲಿ ಪ್ರಾರಂಭವಾಯಿತು. ಇದು ಮಧ್ಯಪ್ರಾಚ್ಯ ದೇಶಗಳಲ್ಲಿ ಹುಟ್ಟಿಕೊಂಡಿತು ಮತ್ತು ಮುಖ್ಯವಾಗಿ ಮೊಘಲ್ ಚಕ್ರವರ್ತಿಗಳ ಆಳ್ವಿಕೆಯಲ್ಲಿ ಭಾರತದಲ್ಲಿ ಜನಪ್ರಿಯವಾಯಿತು. ಮೂಗುತಿ ಧರಿಸುವ ಸಂಪ್ರದಾಯವು ಭಾರತೀಯ ಸಂಸ್ಕೃತಿಯಲ್ಲಿ ಇರುವ ಕೆಲವು ತತ್ವಗಳನ್ನು ಆಧರಿಸಿದೆ. ಮೂಗಿನ ಮೇಲೆ ಚುಚ್ಚುವುದರಿಂದ ನಮ್ಮ ವ್ಯವಸ್ಥೆಯ ಮೇಲೆ ನಕಾರಾತ್ಮಕ ಶಕ್ತಿ ಕಡಿಮೆಯಾಗುತ್ತದೆ. ಇದು ಸಂಪ್ರದಾಯವಾಗಿದ್ದರೂ ಮೂಗು ಚುಚ್ಚುವುದರಿಂದ ಕೆಲವು ಅನುಕೂಲಗಳು ಮತ್ತು ಅನಾನುಕೂಲಗಳೂ ಇವೆ.
ಮೂಗು ಚುಚ್ಚಿಕೊಳ್ಳುವುದರಿಂದ ಆಗುವ ಲಾಭದ ಬಗ್ಗೆ ನೀವು ತಿಳಿದುಕೊಂಡರೆ ಶಾಕ್ ಆಗ್ತೀರಾ. ಮೂಗು ಚುಚ್ಚುವುದರಿಂದ ಮಹಿಳೆಯರಿಗೆ ಪಿರಿಯಡ್ಸ್ ಸಮಯದಲ್ಲಿ ನೋವು ನಿವಾರಣೆಯಾಗುತ್ತದೆ ಎಂದು ಪುರಾತನ ಕಾಲದಿಂದ ನಂಬಿಕೊಂಡು ಬರಲಾಗಿದೆ. ಇದರ ಜೊತೆಗೆ ಇದು ಹೆರಿಗೆಯ ಸಮಯದಲ್ಲಿ ಮಹಿಳೆಗೆ ಸುಲಭವಾಗುತ್ತದೆ.
View this post on Instagram
ಕಾರಣವೆಂದರೆ ಮಹಿಳೆಯ ಎಡ ಮೂಗಿನ ಹೊಳ್ಳೆಯ ಅನೇಕ ನರಗಳು ಮಹಿಳೆಯರ ಸಂತಾನೋತ್ಪತ್ತಿ ಅಂಗಗಳೊಂದಿಗೆ ಸಂಪರ್ಕ ಹೊಂದಿವೆ. ಅಷ್ಟೇ ಅಲ್ಲ, ಮಹಿಳೆಯರು ಚಿನ್ನ ಅಥವಾ ಬೆಳ್ಳಿಯಿಂದ ಮಾಡಿದ ಮುತ್ತಿನ ಮಣಿ ಧರಿಸುತ್ತಾರೆ. ಇದರಿಂದ ಈ ಲೋಹಗಳು ದೇಹದೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿರುತ್ತವೆ. ಈ ಲೋಹಗಳ ಗುಣಲಕ್ಷಣಗಳು ಮಿಶ್ರಣಗೊಳ್ಳುತ್ತಲೇ ಇರುತ್ತವೆ ಮತ್ತು ಇದರಿಂದಾಗಿ ಮೂಗು ಚುಚ್ಚುವುದು ಪ್ರಯೋಜನಕಾರಿಯಾಗಿದೆ. ಮೂಗು ಚುಚ್ಚುವುದು ಮೈಗ್ರೇನ್‌ನಲ್ಲಿ ಪರಿಹಾರವನ್ನು ನೀಡುತ್ತದೆ. ಇನ್ನೂ ಮೂಗು ಚುಚ್ಚಿಸಿಕೊಂಡ ಬಳಿಕ ಕೆಲವು ವಿಷಯಗಳ ಬಗ್ಗೆ ಕಾಳಜಿ ವಹಿಸಬೇಕಾಗುತ್ತದೆ.
ಇದನ್ನೂ ಓದಿ: ಸ್ನಾನ ಮಾಡದ ಗಂಡನಿಗೆ ಡಿವೋರ್ಸ್.. 40 ದಿನದ ನವವಿವಾಹಿತೆ ನಿರ್ಧಾರಕ್ಕೆ ಎಲ್ರೂ ಶಾಕ್; ಅಸಲಿಗೆ ಆಗಿದ್ದೇನು?
ಹೌದು, ಮೂಗು ಚುಚ್ಚಿಕೊಂಡ ಬಳಿಕ ನೀವು ಮಾಡಬೇಕಾದ ಮೊದಲ ಕೆಲಸವೇ ಸ್ವಚ್ಛಗೊಳಿಸುವುದು. ಮೂಗು ಚುಚ್ಚಿಕೊಂಡ ಕೆಲ ಗಂಟೆಗಳಲ್ಲೇ ಊತ ಕಾಣಿಸಿಕೊಳ್ಳುತ್ತದೆ. ಮೂಗಿನಿಂದ ರಕ್ತಸ್ರಾವ ವಾರಗಳವರೆಗೆ ಇರುತ್ತದೆ. ಚರ್ಮ ಉಬ್ಬುವುದು ಕೆಲವು ಕಾರಣಗಳಿಂದ ಉಂಟಾಗುತ್ತದೆ. ಇದಕ್ಕೆ ಕಾರಣ ಮೂಗು ಚುಚ್ಚುವಲ್ಲಿ ತಪ್ಪು ತಂತ್ರವನ್ನು ಬಳಸುವುದು, ಕೊಳಕು ಕೈಗಳಿಂದ ಮೂಗು ಮುಟ್ಟುವುದು, ಕಿವಿಯೋಲೆಗಳು ಅಥವಾ ಇತರೆ ಆಭರಣಳಿಂದ ಅಲರ್ಜಿ ಉಂಟಾಗುವುದು. ಚುಚ್ಚುವಿಕೆಯ ನಂತರ, ರಂಧ್ರದ ಸುತ್ತಲಿನ ಪ್ರದೇಶವನ್ನು ದಿನಕ್ಕೆ ಎರಡು ಮೂರು ಬಾರಿ ಸ್ವಚ್ಛಗೊಳಿಸಬೇಕು. ಇದಾದ ಬಳಿಕ ರಂಧ್ರವನ್ನು ಮುಟ್ಟುವ ಮೊದಲು ಕೈಗಳನ್ನು ಸಾಬೂನಿನಿಂದ ತೊಳೆಯಬೇಕು. ಟೀ ಟ್ರೀ ಆಯಿಲ್ ಅನ್ನು ಮೂಗಿನ ಹೊಳ್ಳೆಗಳ ಮೇಲೆ ಹಚ್ಚುವುದು ಪ್ರಯೋಜನಕಾರಿ ಆಗುತ್ತದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ