ಅಫ್ಘಾನಿಸ್ತಾನ ಮತ್ತು ನ್ಯೂಜಿಲೆಂಡ್ ನಡುವಿನ ಟೆಸ್ಟ್ ಪಂದ್ಯ
ಭಾರತದಲ್ಲಿ ಪಂದ್ಯ ಆಯೋಜಿಸಿದ್ದ ಅಫ್ಘಾನಿಸ್ತಾನ್ ಮಂಡಳಿ
ಬಿಸಿಸಿಐ ವಿಪರೀತ ಟ್ರೋಲ್ ಮಾಡಿದ್ದ ವಿದೇಶಿಗರು
ಅಫ್ಘಾನಿಸ್ತಾನ ಮತ್ತು ನ್ಯೂಜಿಲೆಂಡ್ ನಡುವಿನ ಟೆಸ್ಟ್ ಪಂದ್ಯವು ಗ್ರೇಟರ್ ನೋಯ್ಡಾ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ಮೈದಾನದಲ್ಲಿ (Greater Noida Sports Complex Ground) ನಡೆಯಬೇಕಿತ್ತು. ಆದರೆ ಈ ಪಂದ್ಯ ಮಳೆಯಿಂದಾಗಿ ಮೂರನೇ ದಿನವೂ ಆರಂಭವಾಗಲಿಲ್ಲ. ಟಾಸ್ ಕೂಡ ಆಗಲಿಲ್ಲ. ಸ್ಟೇಡಿಯಂನಲ್ಲಿ ಕಳಪೆ ವ್ಯವಸ್ಥೆಗಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯನ್ನು (ಬಿಸಿಸಿಐ) ಟ್ರೋಲ್ ಮಾಡಲಾಗುತ್ತಿದೆ.
ಅಫ್ಘಾನ್ ಹೇಳಿದ್ದೇನು..?
ಇದೀಗ ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿ ಈ ಬಗ್ಗೆ ಪ್ರತಿಕ್ರಿಯಿಸಿದೆ. ಅಫ್ಘಾನಿಸ್ತಾನ ಮಂಡಳಿಯು ಅಸಲಿ ವಿಚಾರವನ್ನು ಹೇಳಿದೆ. ನಾವು ಭಾರತದಲ್ಲಿ ಮೂರು ಆಯ್ಕೆಗಳನ್ನು ಯೋಚಿಸಿದ್ದೇವು. ಡೆಹ್ರಾಡೂನ್, ಲಕ್ನೋ ಮತ್ತು ಗ್ರೇಟರ್ ನೋಯ್ಡಾ. ನಮ್ಮ ದುರಾದೃಷ್ಟಕ್ಕೆ ಬಿಸಿಸಿಐನ ದೇಶೀಯ ಪಂದ್ಯಗಳಿಂದಾಗಿ (ಲಕ್ನೋ ಮತ್ತು ಡೆಹ್ರಾಡೂನ್) ಎರಡೂ ಸ್ಟೇಡಿಯಂಗಳು ಲಭ್ಯವಿರಲಿಲ್ಲ. ಇತ್ತ ಯುಎಇನಲ್ಲಿ ಕೆಟ್ಟ ಬಿಸಿಲು ಇರೋದ್ರಿಂದ ಟೆಸ್ಟ್ ಪಂದ್ಯಗಳನ್ನು ಆಡುವುದು ಕಷ್ಟಕರವಾಗಿತ್ತು. ನ್ಯೂಜಿಲೆಂಡ್ ಕೂಡ ಬಿಡುವಿಲ್ಲದ ವೇಳಾಪಟ್ಟಿಯನ್ನು ಹೊಂದಿದೆ. ಈ ಕಾರಣಕ್ಕಾಗಿ ನಾವು ಗ್ರೇಟರ್ ನೋಯ್ಡಾವನ್ನು ಆಯ್ಕೆ ಮಾಡಿದ್ದೇವೆ. ಭಾರತದಲ್ಲಿ ಮಳೆಗಾಲ ನಡೆಯುತ್ತಿದೆ. ಇದರಿಂದಾಗಿ ಅವರ ದೇಶೀಯ ಪಂದ್ಯಗಳ ಮೇಲೂ ಪರಿಣಾಮ ಬೀರಿದೆ ಎಂದು ಇನ್ಸ್ಟಾಗ್ರಾಮ್ ಪೋಸ್ಟ್ನಲ್ಲಿ ಬರೆದುಕೊಂಡಿದೆ.
ಇನ್ನು ಅಫ್ಘಾನಿಸ್ತಾನ ಮಂಡಳಿಯು ಬಿಸಿಸಿಐನ ಪ್ರಯತ್ನವನ್ನು ಶ್ಲಾಘಿಸಿದೆ. ನಾವು ಹವಾಮಾನವನ್ನು ನಿಯಂತ್ರಿಸಲು ಸಾಧ್ಯವಿಲ್ಲ. ಬಿಸಿಸಿಐ ನಮಗೆ ಹೆಚ್ಚುವರಿ ಯಂತ್ರೋಪಕರಣಗಳನ್ನು ಒದಗಿಸಿದೆ. ಮೈದಾನವನ್ನು ಆಡಲು ಅನುಕೂಲವಾಗುವಂತೆ ಮಾಡುವ ಪ್ರಯತ್ನವೂ ನಡೆದಿದೆ.
ಇದನ್ನೂ ಓದಿ:ಮಿಸ್ಟರಿ ಸ್ಪಿನ್ನರ್ಗೆ ದಿಢೀರ್ ಬುಲಾವ್.. ಬಾಂಗ್ಲಾ ಟೆಸ್ಟ್ನಲ್ಲಿ ಟೀಂ ಇಂಡಿಯಾ ಹೊಸ ತಂತ್ರ..!
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್