newsfirstkannada.com

×

ಮಿಸ್ಟರಿ ಸ್ಪಿನ್ನರ್​​ಗೆ ದಿಢೀರ್ ಬುಲಾವ್.. ಬಾಂಗ್ಲಾ ಟೆಸ್ಟ್​ನಲ್ಲಿ ಟೀಂ ಇಂಡಿಯಾ ಹೊಸ ತಂತ್ರ..!

Share :

Published September 12, 2024 at 7:38am

Update September 12, 2024 at 8:08am

    ಟೆಸ್ಟ್​ ಸರಣಿಗೂ ಮುನ್ನ 5 ದಿನಗಳ ಅಭ್ಯಾಸ ಶಿಬಿರ

    ಯಾರು ಈ ಮಿಸ್ಟರಿ ಸ್ಪಿನ್ನರ್? ಆತನ ಹಿನ್ನೆಲೆ ಏನು..?

    ಆ ಒಂದು ಭಯದಿಂದಲೇ ಬುಲಾವ್ ನೀಡ್ತಾ ಬಿಸಿಸಿಐ?

ಬಾಂಗ್ಲಾ ಸರಣಿಯ ಮೊದಲ ಪಂದ್ಯಕ್ಕೆ ಟೀಮ್ ಇಂಡಿಯಾ ಅನೌನ್ಸ್​ ಆಗಿದೆ. ಬಲಿಷ್ಠ ತಂಡ ಪ್ರಕಟಿಸಿದರೂ ಟೀಮ್ ಇಂಡಿಯಾಗೆ ಮಾತ್ರ ಆತಂಕ ಕಾಡ್ತಾನೇ ಇದೆ. ಇದಕ್ಕಾಗಿಯೇ ಓರ್ವ ಮಿಸ್ಟರಿ ಸ್ಪಿನ್ನರ್​ಗೆ ಬುಲಾವ್ ನೀಡಿದೆ. ಈತನ ಆಹ್ವಾನದ ಹಿಂದೆ ಮೇಜರ್ ಕಾರಣವೂ ಇದೆ.

ಟೀಮ್ ಇಂಡಿಯಾ, ಬಾಂಗ್ಲಾ ನಡುವಿನ ಟೆಸ್ಟ್​ ಸರಣಿಗೆ ಕೌಂಟ್​ಡೌನ್ ಶುರುವಾಗಿದೆ. ಸೆಪ್ಟೆಂಬರ್ 19ರಿಂದ ಚೆನ್ನೈನ ಚಪಾಕ್​​ನಲ್ಲಿ ಮೊದಲ ಟೆಸ್ಟ್​ ಪಂದ್ಯ ಆರಂಭಗೊಳ್ಳಲಿದ್ದು, ಇದಕ್ಕಾಗಿ ಬಲಿಷ್ಠ ತಂಡವನ್ನೇ ಸೆಲೆಕ್ಷನ್ ಕಮಿಟಿ ಪ್ರಕಟಿಸಿದೆ. ಇದೇ ಟೆಸ್ಟ್ ಸರಣಿಯನ್ನ ಸಿರೀಯಸ್ ಆಗಿ ತೆಗೆದುಕೊಂಡಿರುವ ಟೀಮ್ ಇಂಡಿಯಾ, ಟೆಸ್ಟ್​ ಸರಣಿಗೂ ಮುನ್ನ ಅಭ್ಯಾಸ ಶಿಬಿರವನ್ನು ಆಯೋಜಿಸಿದೆ.

ಇದನ್ನೂ ಓದಿ:ಕ್ರೀಸ್​ನಲ್ಲಿ ಹೊಸ ವೆಪನ್ ಹುಡುಕಿಕೊಂಡ ರಿಷಬ್ ಪಂತ್; ಇನ್ಮೇಲೆ ಔಟ್ ಮಾಡೋದು ಸುಲಭ ಇಲ್ಲ

ಸೆಪ್ಟೆಂಬರ್ 13ರಿಂದ 18ರವರೆಗೆ ಅಭ್ಯಾಸ ಶಿಬಿರವನ್ನು ಬಿಸಿಸಿಐ ಆಯೋಜಿಸಿದೆ. ಆಟಗಾರರು ಟೆಸ್ಟ್ ಸರಣಿಗೆ ಸಿದ್ಧರಾಗಲಿ ಅನ್ನೋ ದೃಷ್ಟಿಯಿಂದಲೇ 5 ದಿನಗಳ ಕ್ಯಾಂಪ್ ನಡೆಸ್ತಿದೆ. ಆದ್ರೆ, ಇದೇ ಕ್ಯಾಂಪ್​ಗಾಗಿ ಸೆಲೆಕ್ಷನ್ ಕಮಿಟಿ, ಮಿಸ್ಟರಿ ಸ್ಪಿನ್ನರ್​ ಒಬ್ಬರಿಗೆ ಬುಲಾವ್ ನೀಡಿದೆ. ಅಂದ್ಹಾಗೆ ಆತ ಬೇಱರು ಅಲ್ಲ. 21 ವರ್ಷದ ಹಿಮಾಂಶು ಸಿಂಗ್.

ಯಾರು ಈ ಹಿಮಾಂಶು ಸಿಂಗ್..?
ಹಿಮಾಂಶು ಸಿಂಗ್.. 21 ವರ್ಷದ ಆಫ್​ ಸ್ಪಿನ್ನರ್​.. ಮುಂಬೈ ಮೂಲದ ಆಫ್ ಸ್ಪಿನ್ನರ್ ಆಗಿರುವ ಈ ಹಿಮಾಂಶು, ದೇಶಿ ಕ್ರಿಕೆಟ್​ನಲ್ಲಿ ಮಿಂಚು ಹರಿಸಿದ್ದಾರೆ. ಇಂಟ್ರೆಸ್ಟಿಂಗ್ ಅಂದ್ರೆ, ಅಶ್ವಿನ್​ರಂತೆಯೇ 6 ಅಡಿ 4 ಇಂಚು ಎತ್ತರ ಹೊಂದಿರುವ ಹಿಮಾಂಶು ಬೌಲಿಂಗ್ ಆ್ಯಕ್ಷನ್ ಕೂಡ ಸೇಮ್ ಟು ಸೇಮ್​​ ಅಶ್ವಿನ್​​ರಂತೆಯೇ ಇದೆ. ಬೌಲಿಂಗ್​ ಮೇಲೆ ಕಂಟ್ರೋಲ್​ ಹೊಂದಿರುವ ಹಿಮಾಂಶು, ಬ್ಯಾಟ್ಸ್​ಮನ್​ಗಳಿಗೆ ಕಬ್ಬಿಣದ ಕಡಲೇಯೇ ಆಗಿದ್ದಾರೆ.

ಕೆಟಿ ಸ್ಮಾರಕ ಟೂರ್ನಿಯಲ್ಲಿ ಆಂಧ್ರಪ್ರದೇಶ ವಿರುದ್ಧ 74 ರನ್‌ಗಳಿಗೆ 7 ವಿಕೆಟ್ ಪಡೆದಿದ್ದ ಈ ಯಂಗ್ ಬೌಲರ್, 2023-24ರ 23 ವರ್ಷದೊಳಗಿನ ಸಿಕೆ ನಾಯುಡು ಟ್ರೋಫಿಯಲ್ಲಿ 8 ಪಂದ್ಯಗಳಲ್ಲಿ 38 ವಿಕೆಟ್‌ ಬೇಟೆಯಾಡಿದ್ದರು. ಈತನ ಬೌಲಿಂಗ್​ಗೆ ಬೆರಗಾಗಿರುವ ಅಜಿತ್​​​​​​​​​​​ ಅಗರ್ಕರ್​, ಟೀಮ್ ಇಂಡಿಯಾದ ನೆಟ್​ ಬೌಲರ್​ ಆಗಿ ಕರೆತಂದಿದ್ದಾರೆ. ಈತನ ಆಹ್ವಾನದ ಹಿಂದೆ ಪ್ರಮುಖ ಕಾರಣವೂ ಇದೆ.

ಇದನ್ನೂ ಓದಿ: 6, 0, 6, 6, 6, 6 ! ಬದೋನಿಯ ಒಂದೇ ಓವರ್​ನಲ್ಲಿ 5 ಸಿಕ್ಸರ್ ಬಾರಿಸಿದ ಮಯಾಂಕ್ -VIDEO

ಟೀಮ್ ಇಂಡಿಯಾಗೆ ಕಾಡ್ತಿದೆ ಸ್ಪಿನ್ ವಿಕ್ನೇಸ್
21 ವರ್ಷದ ಹಿಮಾಂಶುಗೆ ಬುಲಾವ್ ನೀಡಲು ಕಾರಣವೇ ಟೀಮ್ ಇಂಡಿಯಾದ ಸ್ಪಿನ್ ವಿಕ್ನೇಸ್. ಹಿಂದೆ ಟೀಮ್ ಇಂಡಿಯಾ ಬ್ಯಾಟರ್​ಗಳ ಶಕ್ತಿಯೇ ಸ್ಪಿನ್ ಆಗಿತ್ತು. ಆದ್ರೀಗ ಸ್ಪಿನ್​​​ ವಿಕ್ನೇಸ್ ಆಗ್ತಿದೆ. ​​ಸರಣಿ ಸರಣಿಯಲ್ಲೂ ಸ್ಪಿನ್ನರ್​ಗಳ ಎದುರೇ ಬ್ಯಾಟರ್​ಗಳು ಮಕಾಡೆ ಮಲಗಿದ್ದಾರೆ. ಇಂಟ್ರೆಸ್ಟಿಂಗ್ ಅಂದ್ರೆ, 2020ರಿಂದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಕೂಡ ಸ್ಪಿನ್​ ಬಲೆಯಲ್ಲಿ ಸಿಲುಕಿ ಪರದಾಡ್ತಿದ್ದಾರೆ. ಇದಕ್ಕೆ ಈ ಅಂಕಿಅಂಶಗಳೆ ಸಾಕ್ಷಿ!

2020ರಿಂದ ಸ್ಪಿನ್ ಎದುರು ಕೊಹ್ಲಿ-ರೋಹಿತ್
2020ರಿಂದ ವಿರಾಟ್ ಕೊಹ್ಲಿ​, ಸ್ಪಿನ್ನರ್​ಗಳ ಎದುರು ಆಡಿದ 31 ಇನ್ನಿಂಗ್ಸ್​ಗಳಿಂದ 680 ರನ್ ಗಳಿಸಿದ್ದು, ಬರೋಬ್ಬರಿ 21 ಬಾರಿ ವಿಕೆಟ್ ಒಪ್ಪಿಸಿದ್ದಾರೆ. ರೋಹಿತ್  32 ಇನ್ನಿಂಗ್ಸ್​​ಗಳಿಂದ 810 ರನ್ ಗಳಿಸಿದ್ದು, 20 ಸಲ ಸ್ಪಿನ್ ಖೆಡ್ಡಾಗೆ ಬಿದ್ದಿದ್ದಾರೆ. ವಿದೇಶದಲ್ಲೇ ಅಲ್ಲ. ಇಂಡಿಯನ್ ಕಂಡೀಷನ್ಸ್​ನಲ್ಲೂ ವಿರಾಟ್ ಆ್ಯಂಡ್​​ ರೋಹಿತ್, ಸ್ಪಿನ್ನರ್​ಗಳಿಗೆ ಸುಲಭದ ತುತ್ತಾಗಿದ್ದಾರೆ.

ಇದನ್ನೂ ಓದಿ: ಉಪನಾಯಕನ ವಿಚಾರದಲ್ಲಿ BCCI ಜಾಣ ನಡೆ; ಭಾರೀ ಚರ್ಚೆ ಆಗ್ತಿದೆ ಈ ನಿರ್ಧಾರ

ಕೊಹ್ಲಿ-ರೋಹಿತ್
2020ರಿಂದ ಭಾರತದಲ್ಲಿ 17 ಇನ್ನಿಂಗ್ಸ್​ಗಳಲ್ಲಿ 454 ರನ್ ಗಳಿಸಿರುವ ವಿರಾಟ್, 15 ಬಾರಿ ಸ್ಪಿನ್​ಗೆ ಔಟಾಗಿದ್ದಾರೆ. ರೋಹಿತ್ 22 ಇನ್ನಿಂಗ್ಸ್​ಗಳಿಂದ 662 ರನ್ ಗಳಿದ್ದು, 16 ಸಲ ಸ್ಪಿನ್​ ಖೆಡ್ಡಾಗೆ ಬಿದ್ದಿದ್ದಾರೆ.

ಲಂಕಾ ಸರಣಿಯಲ್ಲಿ ಸ್ಪಿನ್ ಎದುರು ಪರದಾಟ
ಟೀಮ್ ಇಂಡಿಯಾ ಸ್ಪಿನ್ ವಿಕ್ನೇಸ್​​ಗೆ ಬೆಸ್ಟ್​ ಎಕ್ಸಾಂಪಲ್​. ಈ ಹಿಂದಿನ ಶ್ರೀಲಂಕಾ ಎದುರಿನ ಏಕದಿನ ಸರಣಿಯೇ ಆಗಿದೆ. ಈ ಸರಣಿಯಲ್ಲಿ ಟೀಮ್ ಇಂಡಿಯಾದ ಘಟಾನುಘಟಿ ಬ್ಯಾಟರ್​ಗಳು ಸ್ಪಿನ್ನರ್​ಗಳ ಎದುರು ತಿಣುಕಾಡಿದ್ರು. ರನ್​ ಗಳಿಸಲು ಪರದಾಡಿದ್ದ ಬ್ಯಾಟ್ಸ್​ಮನ್​ಗಳು, ಟೀಮ್ ಇಂಡಿಯಾ ಸೋಲಿಗೆ ಕಾರಣವಾಗಿದ್ರು. ಆದ್ರೀಗ ಆ ತಪ್ಪು ಮರುಕಳಿಸದಂತೆಯೇ ಎಚ್ಚರ ವಹಿಸಿರುವ ಹಿಟ್​ಮ್ಯಾನ್ ರೋಹಿತ್, ಕೋಚ್ ಗಂಭೀರ್, ಯುವ ಸ್ಪಿನ್ನರ್​​ಗೆ ಆಹ್ವಾನ ನೀಡಿ ಅಭ್ಯಾಸ ನಡೆಸಲು ಮುಂದಾಗಿರುವ ಹಿಂದಿನ ರೀಸನ್.. ಬಿಸಿಸಿಐನ ಈ ಪ್ಲಾನ್ ವರ್ಕ್​ ಆಗುತ್ತಾ ? ಇಲ್ಲ ಫೇಲ್ಯೂರ್​ ಆಗುತ್ತಾ ಅನ್ನೋದಕ್ಕೆ ಬಾಂಗ್ಲಾ ಸರಣಿ ಬಳಿಕ ಉತ್ತರ ಸಿಗಲಿದೆ.

ಇದನ್ನೂ ಓದಿ:ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಆಯ್ಕೆ ಮಾಡದಿದ್ದಕ್ಕೆ ಬೇಸರ; ಸ್ಟಾರ್ ಆಲ್​ರೌಂಡರ್ ಕ್ರಿಕೆಟ್​ಗೆ ಗುಡ್​ಬೈ

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಮಿಸ್ಟರಿ ಸ್ಪಿನ್ನರ್​​ಗೆ ದಿಢೀರ್ ಬುಲಾವ್.. ಬಾಂಗ್ಲಾ ಟೆಸ್ಟ್​ನಲ್ಲಿ ಟೀಂ ಇಂಡಿಯಾ ಹೊಸ ತಂತ್ರ..!

https://newsfirstlive.com/wp-content/uploads/2024/09/HIMAMSHU-SING-2.jpg

Load More