ಎರಡು ವೆಪ್ನ್ಸ್ನಿಂದಲೇ ಎದುರಾಳಿ ಪಡೆ ಧೂಳೀಪಟ
ಪಂತ್ ಬದಲಾಯಿಸಿರೋ ಆ ವೆಪನ್ಸ್ ಯಾವುದು..?
ಬೌಲರ್ಗಳ ನಿದ್ದೆಗೆಡಿಸಿದ ಡೇಂಜರಸ್ ಲೆಫ್ಟಿ ಬ್ಯಾಟರ್..
ರಿಷಬ್ ಪಂತ್..! ಈ ಹೆಸರು ಕೇಳಿದ್ರೆ ಸಾಕು ಬೌಲರ್ಸ್ ಥಂಡಾ ಹೊಡಿತಾರೆ. ಯಾಕಪ್ಪಾ ಈ ಫೈರಿ ಬ್ಯಾಟರ್ ಕ್ರೀಸ್ಗೆ ಎಂಟ್ರಿಕೊಟ್ಟ ಅಂತ ತಲೆಮೇಲೆ ಕೈ ಹೊತ್ತು ಕೂರ್ತಾರೆ. ಇಂತಹ ಡೇಂಜರಸ್ ಬ್ಯಾಟರ್ ಇನ್ಮುಂದೆ ಬೌಲರ್ಸ್ಗೆ ಮತ್ತಷ್ಟು ದುಸ್ವಪ್ನರಾಗಿ ಕಾಡಲಿದ್ದಾರೆ.
ಫೈರಿ ಪಂತ್ಗೆ ಸಿಕ್ಕಿದೆ ಮತ್ತೊಂದು ಹೊಸ ವೆಪನ್
ಅಗ್ರೆಸ್ಸಿವ್..! ಇದಕ್ಕೆ ಇನ್ನೊಂದು ಹೆಸರೇ ರಿಷಬ್ ಪಂತ್..! ಲೆಫ್ಟಿ ಬ್ಯಾಟರ್ ಅಗ್ರೆಸ್ಸಿವ್ ಮೈಂಡ್ಸೆಟ್ನಿಂದ ಎದುರಾಳಿ ಪಡೆ ಕಿಲ್ ಮಾಡ್ತಿದ್ದಾರೆ. ಪಂತ್ಗೆ ಡಿಫೆನ್ಸಿವ್ ಆಟ ಅನ್ನೋದೆ ಗೊತ್ತಿಲ್ಲ. ಏನಿದ್ರೂ ಅಗ್ರೆಸ್ಸಿವ್. ಆಕ್ರಮಣಕಾರಿ ಶೈಲಿ ಬ್ಯಾಟಿಂಗ್ ಪಂತ್ಗೆ ಸಿಕ್ಕ ದೊಡ್ಡ ವೆಪನ್. ಇದೀಗ ಈ ವೆಪನ್ ಜೊತೆ ಇನ್ನೊಂದು ಹೊಸ ವೆಪನ್ ಸೇರಿಕೊಂಡಿದ್ದಾರೆ. ಇದರಿಂದ ಅವರು ಹಿಂದಿಗಿಂತೂ ಮತ್ತಷ್ಟು ಡೇಂಜರ್ ಆಗಿ ಕಾಣಿಸ್ತಿದ್ದಾರೆ. ಅಷ್ಟಕ್ಕೂ ಆ ಹೊಸ ವೆಪನ್ ಬೇರಾವುದು ಅಲ್ಲ, MATURITY..!
ಇದನ್ನೂ ಓದಿ: 6, 0, 6, 6, 6, 6 ! ಬದೋನಿಯ ಒಂದೇ ಓವರ್ನಲ್ಲಿ 5 ಸಿಕ್ಸರ್ ಬಾರಿಸಿದ ಮಯಾಂಕ್ -VIDEO
ದುಲೀಪ್ ಟ್ರೋಫಿಯಲ್ಲಿ ಪಂತ್ ಪರಾಕ್ರಮ
ಇಂಡಿಯಾ ಎ ಎದುರಿನ ದುಲೀಪ್ ಟ್ರೋಫಿ ಪಂದ್ಯವನ್ನ ಇಂಡಿಯಾ ಬಿ ಗೆದ್ದಿದೆ. ಗೆಲ್ಲಿಸಿದ್ದು ರಿಷಬ್ ಪಂತ್. ಎರಡನೇ ಇನ್ನಿಂಗ್ಸ್ನಲ್ಲಿ ಆಕ್ರಮಣಕಾರಿ ಜೊತೆ ಪಕ್ವತೆಯ ಇನ್ನಿಂಗ್ಸ್ ಕಟ್ಟಿದ್ರು. ಟಾಪ್ ಆರ್ಡರ್ ಕುಸಿದಿತ್ತು. ಆಗ ಕಣಕ್ಕಿಳಿದ ಪಂತ್ ರನ್ ವೇಗದ ಹೆಚ್ಚಿಸೋದ್ರ ಜೊತೆ ಜಾಗರೂಕತೆಯಿಂದ ಅವಸರಕ್ಕೆ ಚಾನ್ಸ್ ನೀಡ್ಲಿಲ್ಲ. ಪರಿಣಾಮ 61 ರನ್ ಗಳಿಸಿದ್ರು. ಇದರಿಂದ ಬಿಗ್ ಟಾರ್ಗೆಟ್ ಸೆಟ್ ಮಾಡಿ ,ಎದುರಾಳಿಯನ್ನ ಒತ್ತಡಕ್ಕೆ ಸಿಲುಕಿಸಿ ಗೆಲುವು ದಾಖಲಿಸ್ತು.
ಸಿಂಹಳೀಯರಿಗೆ ವಿಲನ್ ಆದ್ರು ಫೈರಿ ಬ್ಯಾಟ್ಸ್ಮನ್
2024ರ ಟಿ20 ವಿಶ್ವಕಪ್ನಲ್ಲಿ ಲಂಕಾ ವಿರುದ್ಧ ಪಂತ್ ತೋರಿದ ಅದ್ಭುತ ಆಟವನ್ನ ಯಾರೊಬ್ಬರು ಮರೆಯಲು ಸಾಧ್ಯವಿಲ್ಲ. ಎಡಗೈ ಬ್ಯಾಟರ್ 33 ಎಸೆತಗಳಲ್ಲಿ ಸ್ಪೋಟಕ 49 ರನ್ ಗಳಿಸಿದ್ರು. 3ನೇ ವಿಕೆಟ್ಗೆ ಸೂರ್ಯ ಜೊತೆಗೂಡಿ ಅಮೋಘ 76 ರನ್ಗಳ ಕಾಣಿಕೆ ನೀಡಿದ್ರು. ಪಂತ್ರ ಈ ಇನ್ನಿಂಗ್ಸ್ನಲ್ಲಿ ಅಗ್ರೆಸ್ಸಿವ್ ಹಾಗೂ ಮೆಚ್ಯೂರಿಟಿ ಕಾಣಿಸ್ತಿತ್ತು.
ಬದ್ಧವೈರಿ ಪಾಕ್ ಹುಟ್ಟಡಗಿಸಿದ ವೀರ ಕಲಿ
ಲೋಸ್ಕೋರ್ ಗೇಮ್ನಲ್ಲಿ ಭಾರತ ತಂಡ ಟಿ20 ವಿಶ್ವಕಪ್ ಸಂಗ್ರಾಮದಲ್ಲಿ ಬದ್ಧವೈರಿ ಪಾಕ್ ಹುಟ್ಟಡಗಿಸಿತ್ತು. ಇದರ ರೂವಾರಿ ವೀರ ಕಲಿ ಪಂತ್. ಹೌದು, ಪಾಕ್ನ ಡೆಡ್ಲಿ ಸ್ಪೆಷಲ್ಗೆ ಇಂಡಿಯನ್ ಬ್ಯಾಟರ್ಸ್, ತಡಬಡಾಯಿಸಿದ್ರು. ಆದ್ರೆ ಪಂತ್ ಮಾತ್ರ ಎದೆಗುಂದದೇ ಬಿರುಸಿನ 42 ರನ್ ಸಿಡಿಸಿದ್ರು. ಒಂದೂ ಕೆಟ್ಟ ಹೊಡೆತಕ್ಕೆ ಕೈ ಹಾಕದೇ ಅಗ್ರೆಸ್ಸಿವ್ ಆಟದ ಪ್ರಬುದ್ಧತೆ ತೋರಿದ್ರು.
ಇದನ್ನೂ ಓದಿ: ಉಪನಾಯಕನ ವಿಚಾರದಲ್ಲಿ BCCI ಜಾಣ ನಡೆ; ಭಾರೀ ಚರ್ಚೆ ಆಗ್ತಿದೆ ಈ ನಿರ್ಧಾರ
ಪಂತ್ ಘರ್ಜನೆಗೆ ಚಾಂಪಿಯನ್ ಸಿಎಸ್ಕೆ ಢಮಾರ್..!
ಕಳೆದ ಐಪಿಎಲ್ ಸೀಸನ್ನಲ್ಲಿ ಡೆಲ್ಲಿ ತಂಡ ಬಲಾಢ್ಯ ಸಿಎಸ್ಕೆ ತಂಡವನ್ನ ಬಗ್ಗುಬಡಿದಿತ್ತು. ಸೋಲಿನ ರುಚಿ ತೋರಿಸಿದ್ದು ಇದೇ ಪಂತ್. 3ನೇ ಕ್ರಮಾಂಕದಲ್ಲಿ ಆಡಿದ ಕ್ಯಾಪ್ಟನ್ ಪಂತ್ ಬಿರುಸಿನ 51 ರನ್ ಸಿಡಿಸಿದ್ರು. ಪ್ರತಿ ಎಸೆತದಲ್ಲಿ ಪರಿಪಕ್ವತೆಯಿಂದ ಬ್ಯಾಟ್ ಬೀಸಿದ್ರು. ಪಂತ್ರ ಅಗ್ರೆಸ್ಸಿವ್ ಹಾಗೂ ಮೆಚ್ಯೂರಿಟಿ ತಂತ್ರದ ಫಲವೇ ಚೆನ್ನೈಗೆ ಸೋಲಿನ ದರ್ಶನ ಆಗಿತ್ತು.
ಲೆಫ್ಟಿ ಬ್ಯಾಟರ್ ಆರ್ಭಟಕ್ಕೆ ಬೆಚ್ಚಿಬಿದ್ದ ಗುಜರಾತ್ ಟೈಟನ್ಸ್..!
ಈ ಮಾಸ್ ಇನ್ನಿಂಗ್ಸ್ ಬಗ್ಗೆಯಂತೂ ಹೇಳೋದೆ ಬೇಡ. ಗುಜರಾತ್ ಟೈಟನ್ಸ್ ವಿರುದ್ಧ ಪಂತ್ ಬ್ಯಾಟಿಂಗ್ ರೌದ್ರ ನರ್ತನ ನಡೆಸಿದ್ರು. 8 ಸಿಕ್ಸರ್ ಒಳಗೊಂಡ ಸಿಡಿಲಬ್ಬರದ 88 ರನ್ ಚಚ್ಚಿ, ತಂಡದ ರೋಚಕ ಗೆಲುವಿಗೆ ಕಾರಣರಾದ್ರು. ಇಲ್ಲಿ ವಿಕ್ಟರಿಗಿಂತ ಸಂಕಷ್ಟದಲ್ಲಿ ದಿಟ್ಟವಾಗಿ ಕ್ರೀಸ್ನಲ್ಲಿ ನೆಲೆಯೂರಿದ ಪಂತ್ ಇನ್ನಿಂಗ್ಸ್ ಅನ್ನ ಎಲ್ಲರೂ ಕೊಂಡಾಡಿದ್ರು. ರಿಎಂಟ್ರಿ ಬಳಿಕ ಪಂತ್ ತಮ್ಮ ಆಟದ ಶೈಲಿಯನ್ನ ಬದಲಿಸಿಕೊಂಡಿದ್ದಾರೆ. ಅಗ್ರೆಸ್ಸಿವ್ ಪಂತ್ ಬೌಲರ್ಗಳನ್ನ ಇನ್ನಿಲ್ಲದಂತೆ ಕಾಡಿದ್ದಾರೆ. ಇದೀಗ ಮೆಚ್ಯೂರಿಟಿ ಅನ್ನೋ ಹೊಸ ವೆಪನ್ ಅವರಿಗೆ ಸಿಕ್ಕಿದ್ದು, ಅವರನ್ನ ಕಟ್ಟಿಹಾಕೋದು ನಿಜಕ್ಕೂ ಕಷ್ಟವೇ ಸೈ.
ಇದನ್ನೂ ಓದಿ:ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಆಯ್ಕೆ ಮಾಡದಿದ್ದಕ್ಕೆ ಬೇಸರ; ಸ್ಟಾರ್ ಆಲ್ರೌಂಡರ್ ಕ್ರಿಕೆಟ್ಗೆ ಗುಡ್ಬೈ
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್