ಬಾಂಗ್ಲಾ ವಿರುದ್ಧದ ಟೆಸ್ಟ್ ಸರಣಿಗೆ ಟೀಂ ಇಂಡಿಯಾ ಪ್ರಕಟ
16 ಆಟಗರಾರ ಪಟ್ಟಿ ರಿಲೀಸ್ ಮಾಡಿರುವ ಆಯ್ಕೆ ಸಮಿತಿ
ಕ್ಯಾಪ್ಟನ್ ರೋಹಿತ್ ಶರ್ಮಾಗೆ ಸಾಥ್ ಕೊಡೋದು ಯಾರು?
ಬಾಂಗ್ಲಾ ಎದುರಿನ 2 ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯಕ್ಕೆ ಟೀಮ್ ಇಂಡಿಯಾ ಪ್ರಕಟವಾಗಿದೆ. ರೋಹಿತ್ ಶರ್ಮಾ ನಾಯಕತ್ವದ 16 ಸದಸ್ಯರ ಬಲಿಷ್ಠ ತಂಡವನ್ನೇ ಸೆಲೆಕ್ಷನ್ ಕಮಿಟಿ ಪ್ರಕಟಿಸಿದೆ. ಈ ಟೆಸ್ಟ್ ಸರಣಿಯಲ್ಲಿ ನಿರೀಕ್ಷೆಯಂತೆ ಸ್ಟಾರ್ ಆಟಗಾರರು ಕಾಣಿಸಿಕೊಂಡಿದ್ರೆ, ಕೆಲ ಆಟಗಾರರಿಗೆ ತಂಡದಿಂದ ಕೊಕ್ ನೀಡಲಾಗಿದೆ.
ಮೊದಲ ಟೆಸ್ಟ್‌ಗೆ ಟೀಮ್ ಇಂಡಿಯಾ..!
16 ಸದಸ್ಯರ ತಂಡದಲ್ಲಿ ರೋಹಿತ್ ಶರ್ಮಾ ನಾಯಕರಾಗಿದ್ರೆ. ಆರಂಭಿಕನಾಗಿ ಯಶಸ್ವಿ ಜೈಸ್ವಾಲ್, ಶುಭ್ಮನ್ ಗಿಲ್ ಕಾಣಿಸಿಕೊಂಡಿದ್ದಾರೆ. ಇನ್ನು ಮಿಡಲ್ ಆರ್ಡರ್ ಬ್ಯಾಟರ್ಗಳಾಗಿ ವಿರಾಟ್ ಕೊಹ್ಲಿ, ಸರ್ಫರಾಜ್ ಖಾನ್ ಅವಕಾಶ ಗಿಟ್ಟಿಸಿದ್ರೆ. ವಿಕೆಟ್ ಕೀಪರ್ಗಳಾಗಿ ರಿಷಭ್ ಪಂತ್, ಧ್ರುವ್ ಜುರೇಲ್ ಸ್ಥಾನ ಪಡೆದಿದ್ದಾರೆ. ಆಲ್ರೌಂಡರ್ ಕೋಟಾದದಲ್ಲಿ ಆರ್.ಅಶ್ವಿನ್, ಆರ್.ಜಡೇಜಾ, ಅಕ್ಷರ್ ಪಟೇಲ್ ಕಾಣಿಸಿಕೊಂಡರೆ, ಸ್ಪೆಷಲಿಸ್ಟ್ ಸ್ಪಿನ್ನರ್ ಆಗಿ ಕುಲ್ದೀಪ್ ಯಾದವ್ ಅವಕಾಶ ಪಡೆದಿದ್ದಾರೆ. ಇನ್ನು, ವೇಗಿಗಳಾಗಿ ಜಸ್ಪ್ರೀತ್ ಬೂಮ್ರಾ, ಮೊಹಮ್ಮದ್ ಸಿರಾಜ್, ಆಕಾಶ್ ದೀಪ್ ಜೊತೆ ಯಶ್ ದಯಾಳ್ ಕಾಣಿಸಿಕೊಂಡಿದ್ದಾರೆ.
ಇದನ್ನೂ ಓದಿ:RCB ಅಭಿಮಾನಿಗಳಿಗೆ ಗುಡ್ನ್ಯೂಸ್; ಬಲಿಷ್ಠ ಟೀಂ ಇಂಡಿಯಾದಲ್ಲಿ 4 ಮಂದಿ ಆರ್ಸಿಬಿ ಆಟಗಾರರು..!
ಉಪನಾಯಕನ ವಿಚಾರದಲ್ಲಿ ಜಾಣ ನಡೆ..!
ಬಿಸಿಸಿಐ ಭವಿಷ್ಯದ ನಾಯಕನ ಹುಡುಕಾಟದಲ್ಲಿದೆ. ಶುಬ್ಮನ್ ಗಿಲ್ಗೆ ಮೂರು ಮಾದರಿಯ ನೇತೃತ್ವ ನೀಡಬೇಕು ಅನ್ನೋದು ಬಿಸಿಸಿಐ ಲೆಕ್ಕಾಚಾರ. ಅದೇ ಕಾರಣಕ್ಕೆ ಶ್ರೀಲಂಕಾ ವಿರುದ್ಧ ನಡೆದ ಏಕದಿನ ಹಾಗೂ ಟಿ-20 ಟೂರ್ನಿಗಳಲ್ಲಿ ಗಿಲ್ಗೆ ಉಪನಾಯಕನ ಜವಾಬ್ದಾರಿ ನೀಡಲಾಗಿತ್ತು. ಅದೇ ರೀತಿ ಬಾಂಗ್ಲಾ ವಿರುದ್ಧದ ಟೆಸ್ಟ್ ಸರಣಿಯಲ್ಲೂ ವೈಸ್ ಕ್ಯಾಪ್ಟನ್ ಹುದ್ದೆ ನೀಡಲಾಗುತ್ತದೆ ಎಂದು ಹೇಳಲಾಗಿತ್ತು.
ಆದರೆ ಈ ವಿಚಾರದಲ್ಲಿ ಬಿಸಿಸಿಐ ಜಾಣ ನಡೆ ಮುಂದುವರಿಸಿದೆ. ಈಗಾಗಲೇ ಕ್ಯಾಪ್ಟನ್ಸಿ ವಿಚಾರದಲ್ಲಿ ಜಸ್ಪ್ರೀತ್ ಬೂಮ್ರಾ ಚಕಾರ ಎತ್ತಿದ್ದರು. ಗಿಲ್ಗೆ ಉಪನಾಯಕನ ಪಟ್ಟ ಕೊಟ್ಟಿದ್ರೆ ತಂಡದಲ್ಲಿ ಬಿರುಕು ಕಾಣಿಸಿಕೊಳ್ಳಲಿದೆ ಅನ್ನೋದನ್ನು ಬಿಸಿಸಿಐ ಅರಿತುಕೊಂಡಂತಿದೆ. ಮಾತ್ರವಲ್ಲ, ತಂಡ ಪ್ರಕಟ ಮಾಡುವಾಗ ಎಲ್ಲಿಯೂ ಕೂಡ ಉಪನಾಯಕ ಯಾರು ಎಂದು ತಿಳಿಸಿಲ್ಲ. ಟೆಸ್ಟ್ ಪಂದ್ಯಗಳಿಗೆ ಬೂಮ್ರಾ ಅವರಿಗೆ ಉಪನಾಯಕನ ಜವಾಬ್ದಾರಿ ನೀಡಲಾಗುತ್ತಿತ್ತು. ಕಳೆದ ಇಂಗ್ಲೆಂಡ್ ವಿರುದ್ಧದ ಸೀರೀಸ್ನಲ್ಲೂ ಬೂಮ್ರಾ ವೈಸ್ ಕ್ಯಾಪ್ಟನ್ ಆಗಿದ್ದರು.
ನಿನ್ನೆ ಪ್ರಕಟವಾಗಿರುವ ತಂಡದಲ್ಲಿ ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ರಿಷಬ್ ಪಂತ್ಗೆ ನಾಯಕತ್ವದ ಗುಣ ಇದೆ. ಕೊಹ್ಲಿಯನ್ನು ಅಧಿಕೃತವಾಗಿ ಜವಾಬ್ದಾರಿ ನೀಡಲು ಬರುವುದಿಲ್ಲ. ಆದರೆ ರಾಹುಲ್, ಪಂತ್ ದೀರ್ಘ ಕಾಲದಿಂದ ಉಪನಾಯಕರಾಗಿ ತಂಡವನ್ನು ಮುನ್ನಡೆಸಿದ ಅನುಭವ ಇದೆ. ಬೂಮ್ರಾ, ಪಂತ್, ರಾಹುಲ್, ಗಿಲ್ ಇಷ್ಟೆಲ್ಲ ಅನುಭವಿಗಳಿದ್ದರೂ ಉಪನಾಯಕನ ಜವಾಬ್ದಾರಿಯನ್ನು ಬಿಸಿಸಿಐ ಅಧಿಕೃತವಾಗಿ ಸೂಚಿಸದಿರೋದು ಭಾರೀ ಚರ್ಚೆಗೆ ಕಾರಣವಾಗಿದೆ.
ಇದನ್ನೂ ಓದಿ:25 ವರ್ಷದ ಆಟಗಾರ ಫಸ್ಟ್ ಟೈಂ ಟೀಂ ಇಂಡಿಯಾಗೆ ಸೇರ್ಪಡೆ; ಅವರು ಆರ್ಸಿಬಿ ಸ್ಟಾರ್..!
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್