ವೇಗಿ ಮುಖೇಶ್ ಕುಮಾರ್, ಕನ್ನಡಿಗ ಪಡಿಕ್ಕಲ್ಗೆ ಕೊಕ್..!
ಬೂಮ್ರಾಗೆ ಇಲ್ಲ ರೆಸ್ಟ್.. ಸ್ಥಾನ ಉಳಿಸಿಕೊಂಡ ಯಂಗ್ ಬೌಲರ್
ಟೆಸ್ಟ್‌ಗೆ ವಿರಾಟ್ ಕೊಹ್ಲಿ, ರಿಷಬ್ ಪಂತ್ ಕಮ್ಬ್ಯಾಕ್
ಬಾಂಗ್ಲಾ ಎದುರಿನ ಮೊದಲ ಟೆಸ್ಟ್ ಪಂದ್ಯಕ್ಕೆ ಟೀಮ್ ಇಂಡಿಯಾ ಪ್ರಕಟವಾಗಿದೆ. ನಿರೀಕ್ಷೆಯಂತೆ ಕೆಲ ಆಟಗಾರರು ಸ್ಥಾನ ಪಡೆದ್ರೆ, ಕೆಲ ಆಟಗಾರರಿಗೆ ಜಾಕ್ಪಾಟ್ ಹೊಡೆದಿದೆ. ಅಷ್ಟೇ ಅಲ್ಲ, ಕೆಲವು ಆಟಗಾರರಿಗೆ ಟೆಸ್ಟ್ ತಂಡದಿಂದ ಕೈಬಿಡಲಾಗಿದೆ.
ಬಾಂಗ್ಲಾ ಎದುರಿನ 2 ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯಕ್ಕೆ ಟೀಮ್ ಇಂಡಿಯಾ ಪ್ರಕಟವಾಗಿದೆ. ರೋಹಿತ್ ಶರ್ಮಾ ನಾಯಕತ್ವದ 16 ಸದಸ್ಯರ ಬಲಿಷ್ಠ ತಂಡವನ್ನೇ ಸೆಲೆಕ್ಷನ್ ಕಮಿಟಿ ಪ್ರಕಟಿಸಿದೆ. ಈ ಟೆಸ್ಟ್ ಸರಣಿಯಲ್ಲಿ ನಿರೀಕ್ಷೆಯಂತೆ ಸ್ಟಾರ್ ಆಟಗಾರರು ಕಾಣಿಸಿಕೊಂಡಿದ್ರೆ, ಕೆಲ ಆಟಗಾರರಿಗೆ ತಂಡದಿಂದ ಕೊಕ್ ನೀಡಲಾಗಿದೆ.
ಮೊದಲ ಟೆಸ್ಟ್‌ಗೆ ಟೀಮ್ ಇಂಡಿಯಾ..!
16 ಸದಸ್ಯರ ತಂಡದಲ್ಲಿ ರೋಹಿತ್ ಶರ್ಮಾ ನಾಯಕರಾಗಿದ್ರೆ. ಆರಂಭಿಕನಾಗಿ ಯಶಸ್ವಿ ಜೈಸ್ವಾಲ್, ಶುಭ್ಮನ್ ಗಿಲ್ ಕಾಣಿಸಿಕೊಂಡಿದ್ದಾರೆ. ಇನ್ನು ಮಿಡಲ್ ಆರ್ಡರ್ ಬ್ಯಾಟರ್ಗಳಾಗಿ ವಿರಾಟ್ ಕೊಹ್ಲಿ, ಸರ್ಫರಾಜ್ ಖಾನ್ ಅವಕಾಶ ಗಿಟ್ಟಿಸಿದ್ರೆ. ವಿಕೆಟ್ ಕೀಪರ್ಗಳಾಗಿ ರಿಷಭ್ ಪಂತ್, ಧ್ರುವ್ ಜುರೇಲ್ ಸ್ಥಾನ ಪಡೆದಿದ್ದಾರೆ. ಆಲ್ರೌಂಡರ್ ಕೋಟಾದದಲ್ಲಿ ಆರ್.ಅಶ್ವಿನ್, ಆರ್.ಜಡೇಜಾ, ಅಕ್ಷರ್ ಪಟೇಲ್ ಕಾಣಿಸಿಕೊಂಡರೆ, ಸ್ಪೆಷಲಿಸ್ಟ್ ಸ್ಪಿನ್ನರ್ ಆಗಿ ಕುಲ್ದೀಪ್ ಯಾದವ್ ಅವಕಾಶ ಪಡೆದಿದ್ದಾರೆ. ಇನ್ನು ವೇಗಿಗಳಾಗಿ ಜಸ್ಪ್ರೀತ್ ಬೂಮ್ರಾ, ಮೊಹಮ್ಮದ್ ಸಿರಾಜ್, ಆಕಾಶ್ ದೀಪ್ ಜೊತೆ ಯಶ್ ದಯಾಳ್ ಕಾಣಿಸಿಕೊಂಡಿದ್ದಾರೆ.
ಇದನ್ನೂ ಓದಿ:25 ವರ್ಷದ ಆಟಗಾರ ಫಸ್ಟ್ ಟೈಂ ಟೀಂ ಇಂಡಿಯಾಗೆ ಸೇರ್ಪಡೆ; ಅವರು ಆರ್ಸಿಬಿ ಸ್ಟಾರ್..!
ಟೆಸ್ಟ್‌ಗೆ ವಿರಾಟ್ ಕೊಹ್ಲಿ ಕಮ್ಬ್ಯಾಕ್..!
ಸೌತ್ ಆಫ್ರಿಕಾ ಟೆಸ್ಟ್ ಸರಣಿಯ ಬಳಿಕ ಇಂಗ್ಲೆಂಡ್ ಟೆಸ್ಟ್ ಸರಣಿಗೆ ಅಲಭ್ಯರಾಗಿದ್ದ ವಿರಾಟ್ ಕೊಹ್ಲಿ, ಬರೋಬ್ಬರಿ 9 ತಿಂಗಳ ಬಳಿಕ ಟೆಸ್ಟ್ ತಂಡದಲ್ಲಿ ಕಾಣಿಸಿಕೊಂಡಿದ್ದಾರೆ. ಇದರೊಂದಿಗೆ ಟೆಸ್ಟ್‌ಗೆ ವಿರಾಟ್ ಮತ್ತೆ ಕಮ್ಬ್ಯಾಕ್ ಮಾಡಿದ್ದಾರೆ. ವಿರಾಟ್ ಕೊಹ್ಲಿ ಮಾತ್ರವೇ ಅಲ್ಲ. ಅಪಘಾತದ ಬಳಿಕ ಟಿ20, ಏಕದಿನ ತಂಡದಲ್ಲಿ ಸ್ಥಾನ ಪಡೆದಿದ್ದ ರಿಷಭ್ ಪಂತ್, ಈಗ ಬಾಂಗ್ಲಾ ಎದುರಿನ ಮೊದಲ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಆ ಮೂಲಕ ಬರೋಬ್ಬರಿ 20 ತಿಂಗಳ ಬಳಿಕ ವೈಟ್ ಜರ್ಸಿಯಲ್ಲಿ ರಿಷಭ್ ಪಂತ್ ಕಣಕ್ಕಿಳಿಯಲಿದ್ದಾರೆ.
ಬೂಮ್ರಾಗೆ ಇಲ್ಲ ರೆಸ್ಟ್.. ಸ್ಥಾನ ಉಳಿಸಿಕೊಂಡ ಆಕಾಶ್
ಟಿ20 ವಿಶ್ವಕಪ್ ಬಳಿಕ ಟೀಮ್ ಇಂಡಿಯಾದಿಂದಲೇ ದೂರ ಉಳಿದಿದ್ದ ವೇಗಿ ಜಸ್ಪ್ರಿತ್ ಬೂಮ್ರಾ, ಬಾಂಗ್ಲಾ ಎದುರಿನ ಟೆಸ್ಟ್ ತಂಡಕ್ಕೆ ವಾಪಾಸ್ ಆಗಿದ್ದಾರೆ. ಇನ್ನು ಇಂಗ್ಲೆಂಡ್ ಸರಣಿಯಲ್ಲಿ ಸ್ಥಾನ ಪಡೆದಿದ್ದ ಆಕಾಶ್, ದುಲೀಪ್ ಟ್ರೋಫಿಯಲ್ಲಿ ಅದ್ಭುತ ಪ್ರದರ್ಶನ ನೀಡುವುದರೊಂದಿಗೆ ತಂಡದಲ್ಲಿ ಸ್ಥಾನ ಉಳಿಸಿಕೊಂಡಿದ್ದಾರೆ. ಆದ್ರೆ, ದುಲೀಪ್ ಟ್ರೋಫಿಯಲ್ಲಿ ಮಿಂಚದ ವೇಗಿ ಯಶ್ ದಯಾಳ್, ಅಚ್ಚರಿಯಂತೆ ಟೆಸ್ಟ್ ತಂಡದಲ್ಲಿ ಚೊಚ್ಚಲ ಕರೆ ಪಡೆದಿದ್ದಾರೆ. ವಿಶೇಷ ಅಂದರೆ ಆರ್ಸಿಬಿ ತಂಡದ ಭಾಗವಾಗಿರುವ ನಾಲ್ಕು ಆಟಗಾರರಿಗೆ ಟೀಂ ಇಂಡಿಯಾದಲ್ಲಿ ಸ್ಥಾನ ಸಿಕ್ಕಿದೆ. ವಿರಾಟ್ ಕೊಹ್ಲಿ, ಮೊಹ್ಮದ್ ಸಿರಾಜ್, ಆಕಾಶ್ ದೀಪ್ ಹಾಗೂ ಯಶ್ ದಯಾಳ್ಗೆ ಅವಕಾಶ ಸಿಕ್ಕಿದೆ.
ಇದನ್ನೂ ಓದಿ:ಒಬ್ಬ ಸ್ಯಾಮ್ಸನ್ಗೆ 8 ನಾಯಕರಿಂದ ಅನ್ಯಾಯ; 9 ವರ್ಷಗಳಿಂದ ಸಂಜುಗೆ ಮಹಾ ಮೋಸ..!

ಇಂಗ್ಲೆಂಡ್ ಸರಣಿಯಲ್ಲಿ ವೈಫಲ್ಯ ಅನುಭವಿಸಿದ್ದ ಮಖೇಶ್, ದುಲೀಪ್ ಟ್ರೋಫಿಯಲ್ಲಿ ಇಂಪ್ರೆಸ್ಸಿಂಗ್ ಪರ್ಫಾಮೆನ್ಸ್ ನೀಡುವಲ್ಲಿ ವಿಫಲರಾಗಿದ್ದಾರೆ. ಈ ಕಾರಣಕ್ಕೆ ಟೆಸ್ಟ್ ತಂಡದಿಂದ ಕೊಕ್ ನೀಡಲಾಗಿದೆ. ಆದ್ರೆ, ಕನ್ನಡಿಗ ಪಡಿಕ್ಕಲ್, ಉತ್ತಮ ಪ್ರದರ್ಶನದ ಹೊರತಾಯೂ ತಂಡದಿಂದ ಗೇಟ್ಪಾಸ್ ನೀಡಲಾಗಿದೆ. ಒಟ್ನಲ್ಲಿ, ಅಳೆದು ತೂಗಿಯೇ ಮೊದಲ ಟೆಸ್ಟ್ ಪಂದ್ಯಕ್ಕೆ ತಂಡವನ್ನ ಪ್ರಕಟಿಸಿರುವ ಸೆಲೆಕ್ಷನ್ ಕಮಿಟಿ, ಚೆನ್ನೈನ ಸ್ಪಿನ್ ಸ್ನೇಹಿಗೆ ತಕ್ಕಂತೆಯೇ ನಾಲ್ವರು ಸ್ಪಿನ್ನರ್ಗಳಿಗೆ ಮಣೆ ಹಾಕಿದೆ.
ಇದನ್ನೂ ಓದಿ:ದ್ರಾವಿಡ್ ಎಂಟ್ರಿ ಬೆನ್ನಲ್ಲೇ ಸಂಗಕ್ಕಾರ್ಗೆ ಕೋಪ; ಈ ಅವಕಾಶ ಬಳಸಿಕೊಳ್ಳಲು KKR ಕಿಲಾಡಿ ಐಡಿಯಾ..!
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್