newsfirstkannada.com

×

25 ವರ್ಷದ ಆಟಗಾರ ಫಸ್ಟ್​ ಟೈಂ ಟೀಂ ಇಂಡಿಯಾಗೆ ಸೇರ್ಪಡೆ; ಅವರು ಆರ್​ಸಿಬಿ ಸ್ಟಾರ್..!

Share :

Published September 9, 2024 at 9:13am

    ಬಾಂಗ್ಲಾ ವಿರುದ್ಧದ ಟೂರ್ನಿಗೆ ಟೀಂ ಇಂಡಿಯಾ ಪ್ರಕಟ

    ಸೆಪ್ಟೆಂಬರ್ 19 ರಿಂದ ಭಾರತದಲ್ಲಿ ಟೆಸ್ಟ್ ಸರಣಿ ನಡೆಯಲಿದೆ

    ಎರಡು ಟೆಸ್ಟ್​ ಪಂದ್ಯಗಳ ಸರಣಿಯಲ್ಲಿ ಯಾರೆಲ್ಲ ಆಡ್ತಾರೆ?

ಸೆಪ್ಟೆಂಬರ್ 19 ರಿಂದ ಭಾರತ ಮತ್ತು ಬಾಂಗ್ಲಾದೇಶ ನಡುವೆ 2 ಪಂದ್ಯಗಳ ಟೆಸ್ಟ್ ಸರಣಿ ನಡೆಯಲಿದೆ. ಸರಣಿಯ ಮೊದಲ ಪಂದ್ಯ ಚೆನ್ನೈನಲ್ಲಿ ನಡೆಯಲಿದ್ದು, ಇದಕ್ಕಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) 16 ಸದಸ್ಯರ ಟೀಂ ಇಂಡಿಯಾ ಪ್ರಕಟಿಸಿದೆ.

ಟೀಂ ಇಂಡಿಯಾದಲ್ಲಿ ಮೊದಲ ಬಾರಿಗೆ ವೇಗದ ಬೌಲರ್ ಯಶ್ ದಯಾಳ್​ಗೆ ಅವಕಾಶ ಸಿಕ್ಕಿದೆ. ಉತ್ತರ ಪ್ರದೇಶ ಪರ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಆಡಿದ ಯಶ್ ದಯಾಳ್, ಐಪಿಎಲ್-2023 ರಲ್ಲಿ ಗುಜರಾತ್ ಟೈಟಾನ್ಸ್‌ನ ಭಾಗವಾಗಿದ್ದರು. ಕೋಲ್ಕತ್ತಾ ನೈಟ್ ರೈಡರ್ಸ್‌ನ ರಿಂಕು ಸಿಂಗ್ ಕೊನೆಯ ಓವರ್‌ನಲ್ಲಿ ಇವರ ಬಾಲ್​ಗೆ ಸತತ 5 ಸಿಕ್ಸರ್‌ಗಳನ್ನು ಬಾರಿಸಿದ್ದರು. ಆ ಬಳಿಕ ಯಶ್ ದಯಾಳ್ ತುಂಬಾ ಕೆಟ್ಟ ಸ್ಥಿತಿಗೆ ತಲುಪಿದ್ದರು. ಅವರು ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದರು. ಪರಿಣಾಮ 6 ಕೆಜಿ ತೂಕ ಕಳೆದುಕೊಂಡರು. ಅಷ್ಟೇ ಅಲ್ಲ, ಯಶ್ ಕೆರಿಯರ್ ಕೂಡ ಇಕ್ಕಟ್ಟಿಗೆ ಸಿಲುಕಿತ್ತು.

ಇದನ್ನೂ ಓದಿ:ಒಬ್ಬ ಸ್ಯಾಮ್ಸನ್​​​ಗೆ 8 ನಾಯಕರಿಂದ ಅನ್ಯಾಯ; 9 ವರ್ಷಗಳಿಂದ ಸಂಜುಗೆ ಮಹಾ ಮೋಸ..!

ಐಪಿಎಲ್-2024ಕ್ಕೂ ಮೊದಲು ಗುಜರಾತ್ ಅವರನ್ನು ಬಿಡುಗಡೆ ಮಾಡಿತು. 2024ರ ಐಪಿಎಲ್​ನಲ್ಲಿ ಯಶ್ ಅವರನ್ನು ಆರ್​ಸಿಬಿ 5 ಕೋಟಿ ರೂಪಾಯಿಗೆ ಖರೀದಿಸಿತ್ತು. RCB ಸೇರುವ ಮೂಲಕ ಯಶ್ ಪುನರಾಗಮನ ಮಾಡಿದರು. ಯಶ್ ಈ ಋತುವಿನಲ್ಲಿ 14 ಪಂದ್ಯಗಳನ್ನು ಆಡಿದ್ದು, 15 ವಿಕೆಟ್ ಪಡೆದಿದ್ದಾರೆ. ಆರ್‌ಸಿಬಿಯಲ್ಲಿ ಅವರ ಅದ್ಭುತ ಪ್ರದರ್ಶನದಿಂದ ಟೀಂ ಇಂಡಿಯಾ ಸೇರುವಂತೆ ಮಾಡಿದೆ. ದುಲೀಪ್ ಟ್ರೋಫಿಯಲ್ಲಿ ಪ್ರಮುಖ ಗಮನ ಸೆಳೆದ ದಯಾಳ್, ಇದೀಗ ಟೀಂ ಇಂಡಿಯಾ ಸೇರಿದ್ದಾರೆ.

ಟೀಂ ಇಂಡಿಯಾ: ರೋಹಿತ್ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್, ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ಸರ್ಫರಾಜ್ ಖಾನ್, ರಿಷಭ್ ಪಂತ್ (ವಿಕೆಟ್ ಕೀಪರ್), ಧ್ರುವ್ ಜುರೆಲ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್ , ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ಆಕಾಶ್ ದೀಪ್, ಜಸ್ಪ್ರೀತ್ ಬುಮ್ರಾ ಮತ್ತು ಯಶ್ ದಯಾಳ್.

ಇದನ್ನೂ ಓದಿ:ದ್ರಾವಿಡ್ ಎಂಟ್ರಿ ಬೆನ್ನಲ್ಲೇ ಸಂಗಕ್ಕಾರ್​ಗೆ ಕೋಪ; ಈ ಅವಕಾಶ ಬಳಸಿಕೊಳ್ಳಲು KKR ಕಿಲಾಡಿ ಐಡಿಯಾ..!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

25 ವರ್ಷದ ಆಟಗಾರ ಫಸ್ಟ್​ ಟೈಂ ಟೀಂ ಇಂಡಿಯಾಗೆ ಸೇರ್ಪಡೆ; ಅವರು ಆರ್​ಸಿಬಿ ಸ್ಟಾರ್..!

https://newsfirstlive.com/wp-content/uploads/2024/09/TEAM-INDIA-1.jpg

Load More