newsfirstkannada.com

ಮಳೆಯಿಂದಾಗಿ ಭಾರೀ ಪ್ರವಾಹ, ಉಕ್ಕಿ ಹರಿಯುತ್ತಿರುವ ನದಿಗಳು.. 300ಕ್ಕೂ ಹೆಚ್ಚು ಜನರು ಸಾವು

Share :

Published May 12, 2024 at 8:32am

Update May 12, 2024 at 8:38am

    ಭೀಕರ ಪ್ರವಾಹದಿಂದ ತತ್ತರಿಸಿ ಹೋದ ಜನ ಜೀವನ

    ಜನವಸತಿ ಪ್ರದೇಶಗಳು ಸಂಪೂರ್ಣವಾಗಿ ಜಲಾವೃತ

    ಭೀಕರ ಪ್ರವಾಹದಿಂದಾಗಿ 300ಕ್ಕೂ ಹೆಚ್ಚು ಮಂದಿ ಸಾವು

ತಾಲಿಬಾನ್​ ಆಡಳಿತದಿಂದ ಕಂಗೆಟ್ಟಿದ್ದ ಅಪ್ಘಾನಿಸ್ತಾನ, ಇದೀಗ ಭೀಕರ ಪ್ರವಾಹದಿಂದ ತತ್ತರಿಸಿ ಹೋಗ್ತಿದೆ. ಉತ್ತರ ಅಫ್ಘಾನಿಸ್ತಾನದ ಹಲವೆಡೆ ಕಳೆದೆ ಮೂರ್ನಾಲ್ಕು ದಿನಗಳಿಂದ ಭಾರೀ ಮಳೆಯಾಗ್ತಿದೆ. ಹೀಗಾಗಿ ನದಿಗಳು ಉಕ್ಕಿ ಹರಿಯುತ್ತಿವೆ.

ಭಾರೀ ಮಳೆಯಿಂದಾಗಿ ಜನವಸತಿ ಪ್ರದೇಶಗಳು ಸಂಪೂರ್ಣವಾಗಿ ಜಲಾವೃತವಾಗಿದ್ದು, ಜನ ಜೀವನ ಅಸ್ತವ್ಯಸ್ತವಾಗಿದೆ. ಅಲ್ಲದೇ ಭೀಕರ ಪ್ರವಾಹದಿಂದಾಗಿ 300ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ಸದ್ಯ ತುರ್ತು ಪರಿಸ್ಥಿತಿ ಘೋಷಿಸಿಲಾಗಿದ್ದು, ಭದ್ರತಾ ಪಡೆಗಳು ಸ್ಥಳದಲ್ಲಿ ಬೀಡುಬಿಟ್ಟಿದ್ದಾರೆ. ಅವಶೇಷದಡಿ ಸಿಲುಕಿರುವ ಮೃತ ದೇಹಗಳನ್ನು ಹೊರ ತೆಗೆಯುವ ಕೆಲಸ ಮಾಡುತ್ತಿದ್ದಾರೆ.

ಇದನ್ನೂ ಓದಿ: ಇವಳು ತಾಯಿಯೋ, ರಾಕ್ಷಸಿಯೋ.. ಪುಟ್ಟ ಬಾಲಕಿ ಮೇಲೆ ಯಮನಂತೆ ವರ್ತಿಸಿದ ಅಮ್ಮ

ಮಾಹಿತಿ ಪ್ರಕಾರ, ಅಪ್ಘಾನಿಸ್ತಾನದ ಬಾಗ್ಲಾನ್ ಪ್ರಾಂತ್ಯದಲ್ಲಿ 311 ಸಾವು ನೋವುಗಳಾಗಿವೆ, 2,011 ಮನೆಗಳು ನಾಶವಾಗಿವೆ ಮತ್ತು 2,800 ಮನೆಗಳು ಹಾನಿಗೊಳಗಾಗಿವೆ ಎಂದು ವಿಶ್ವಸಂಸ್ಥೆಯ ಏಜೆನ್ಸಿಯ ಸಂವಹನ ಅಧಿಕಾರಿ ರಾಣಾ ಡೆರಾಜ್ ತಿಳಿಸಿದ್ದಾರೆ. ಆದರೆ ಸರ್ಕಾರ ಮತ್ತು ಅಲ್ಲಿನ ಸಂಸ್ಥೆಗಳ ನಡುವೆ ಅಸಮಾನತೆ ಇದ್ದು, ಜನರ ಸಾವಿನ ಸಂಖ್ಯೆಯನ್ನು ಹೇಲಲು ಹಿಂದೇಟು ಹಾಕುತ್ತಿದ್ದಾರೆ.

ಇದನ್ನೂ ಓದಿ: ತಡೆಗೋಡೆಗೆ ಗುದ್ದಿ ನದಿಗೆ ಬಿದ್ದ ಬಸ್​.. 7 ಜನರು ಸಾವು, ಹಲವರಿಗೆ ಗಾಯ, ಚಾಲಕ​ ಅರೆಸ್ಟ್..ಅಷ್ಟಕ್ಕೂ ಆಗಿದ್ದೇನು?

ಅಂತರಾಷ್ಟ್ರೀಯ ಸಂಸ್ಥೆಯ ಪ್ರಕಾರ ಭಾಗ್ಲಾನ್​ನಲ್ಲಿ 218 ಜನರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿತ್ತು. ಸದ್ಯ 300ಕ್ಕೂ ಹೆಚ್ಚು ಜನರು ಪ್ರವಾಹದಿಂದ ಅಸುನೀಗಿದ್ದಾರೆ ಎಂದು ಅಲ್ಲಿನ ಕೆಲವುಇ ಮಾಧ್ಯಮಗಳು ವರದಿ ಮಾಡುತ್ತಿವೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಳೆಯಿಂದಾಗಿ ಭಾರೀ ಪ್ರವಾಹ, ಉಕ್ಕಿ ಹರಿಯುತ್ತಿರುವ ನದಿಗಳು.. 300ಕ್ಕೂ ಹೆಚ್ಚು ಜನರು ಸಾವು

https://newsfirstlive.com/wp-content/uploads/2024/05/Afghanistan-4.jpg

Load More