Advertisment

ಅಪ್ಪ, ಅಮ್ಮ.. ಬದುಕಿಸಿ ಬಿಡಿ.. ಕರುಳು ಹಿಂಡುತ್ತೆ ಪ್ರವಾಹದಲ್ಲಿ ಫ್ಯಾಮಿಲಿ ಕಳೆದುಕೊಂಡ ಪುಟಾಣಿಯ ಕಣ್ಣೀರ ಕತೆ

author-image
AS Harshith
Updated On
ಅಪ್ಪ, ಅಮ್ಮ.. ಬದುಕಿಸಿ ಬಿಡಿ.. ಕರುಳು ಹಿಂಡುತ್ತೆ ಪ್ರವಾಹದಲ್ಲಿ ಫ್ಯಾಮಿಲಿ ಕಳೆದುಕೊಂಡ ಪುಟಾಣಿಯ ಕಣ್ಣೀರ ಕತೆ
Advertisment
  • ಪ್ರವಾಹದಲ್ಲಿ ಬುದುಕುಳಿದ ಹೆಣ್ಣು ಮಗುವಿನ ರೋದನೆ ಹೇಳತೀರದು
  • ಒಂದಲ್ಲಾ, ಎರಡಲ್ಲಾ.. ನಾಲ್ಕು ಕಂದಮ್ಮಗಳನ್ನು ರಕ್ಷಿಸಿದ ಪುಣ್ಯಾತ್ಮ ಈತ
  • ಭಾರೀ ಮಳೆ.. 200ಕ್ಕೂ ಹೆಚ್ಚು ಜನರು ಪ್ರವಾಹದಿಂದ ಸಾವು

ಅಯ್ಯೋ.. ಮೊದಲೇ ಬಡತನ, ಅದರ ಮೇಲೆ ತಾಲಿಬಾನಿಯರ ಅಟ್ಟಹಾಸ. ಇಂತಹ ಸಂಕಷ್ಟದ ನಡುವೆ ದೇವರು ಮತ್ತೆ ಕಷ್ಟ ನೀಡಿದ್ದಾನೆ. ಪ್ರವಾಹದ ಪರಿಣಾಮದಿಂದ 200ಕ್ಕೂ ಹೆಚ್ಚು ಜನರು ಅಸುನೀಗಿದ್ದಾರೆ.

Advertisment

ಇದು ನೆರೆದ ದೇಶ ಅಪ್ಘಾನಿಸ್ತಾನ ಭಾಗ್ಲಾನ್​ನ​ ಸದ್ಯದ ಪರಿಸ್ಥಿತಿ. ತಾಲಿಬಾನಿಯರಿಂದ ಹೊಡೆತ ತಿಂದಿದ್ದ ಅಪ್ಘಾನಿಸ್ತಾನ ಭಾರೀ ಮಳೆಯಿಂದಾಗಿ ಪ್ರವಾಹ ಎದುರಿಸುತ್ತಿದೆ. ರಸ್ತೆ, ಮನೆ, ಮಸೀದಿ ಎಲ್ಲವೂ ನೆಲಮವಾಗಿದೆ. ಹೇಳಬೇಕೆಂದರೆ ಸ್ಮಶಾನ ಮೌನ ಆವರಿಸಿದೆ.


">May 10, 2024

ಮಕ್ಕಳು ತಂದೆ-ತಾಯಿಯನ್ನು ಕಳೆದುಕೊಂಡು ವ್ಯಥೆ ಪಡುತ್ತಿದ್ದಾರೆ. ಅಂದಹಾಗೆಯೇ ಈ ಪುಟಾಣಿ ಹುಡುಗಿಯೊಬ್ಬಳ ರೋದನೆ ಕೇಳಿದರೆ ಎಂಥಾ ಕಠೋರ ಮನಸ್ಥಿತಿಯವನ ಮನವು ಮಿಡಿಯುತ್ತದೆ.

Advertisment

ತನ್ನವರೆಲ್ಲರನ್ನು ಕಳೆದುಕೊಂಡು ಬದುಕುಳಿದ ಈ ಪುಟಾಣಿ ಹುಡುಗಿ ತನ್ನೆರಡು ಕೈಗಳನ್ನು ಜೋಡಿಸಿ ಬೇಡುತ್ತಿದ್ದಾಳೆ. ನಮ್ಮ ಮನೆಯವರನ್ನು ಬದುಕಿಸಿ ಬಿಡಿ ಎಂದು ಅಂಗಲಾಚುತ್ತಿದ್ದಾಳೆ. ಶಿಕ್ಷಕ ತಂದೆಯನ್ನು ಆಕೆ ಕಳೆದುಕೊಂಡಿದ್ದಾಳೆ. ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಪ್ರಬಾಹದ ಹೊಡೆತಕ್ಕೆ ತತ್ತರಿಸಿದ ಅಪ್ಘಾನಿಸ್ತಾನಕ್ಕೆ ಸಹಾಯ ಮಾಡಿ ಎಂದು ಅನೇಕರು ಕೇಳುತ್ತಿದ್ದಾರೆ.

ಇದನ್ನೂ ಓದಿ: ಭಾರೀ ಮಳೆಯಿಂದಾಗಿ ಉಂಟಾದ ಪ್ರವಾಹ.. 200ಕ್ಕೂ ಹೆಚ್ಚು ಜನ ಸಾವು

ನಿರಂತರ ಮಳೆಯಿಂದಾಗಿ ಅಪ್ಘಾನಿಸ್ತಾನದ ಭಾಗ್ಲಾನ್​ನಲ್ಲಿ ಪ್ರವಾಹ ಉಂಟಾಗಿ ಸುಮಾರು 200 ಜನರು ಸಾವನ್ನಪ್ಪಿದ್ದಾರೆ. ಮಣ್ಣಿನ ಕೋಡಿಗೆ ಸಿಲುಕಿ ಸಾವನ್ನಪ್ಪಿದ್ದಾರೆ. ರಾಷ್ಟ್ರೀಯ ಸೇವಾ ದಳ ಮತ್ತು ಭದ್ರತಾ ಸಂಸ್ಥೆ ರಕ್ಷಣಾ ಕಾರ್ಯ ಮುಂದುವರೆಸಿದ್ದಾರೆ. ಅಲ್ಲೊಂದು ಇಲ್ಲೊಂದು ಮೃತದೇಹಗಳು ಅವರ ಕೈಗೆ ಸಿಗುತ್ತದೆ.

Advertisment


">May 11, 2024

ಅಯ್ಯೋ.. ಈ ದೃಶ್ಯದಲ್ಲಿ ಒಂದಲ್ಲಾ..ಎರಡಲ್ಲಾ. ನಾಲ್ಕು ಮಕ್ಕಳನ್ನು ರಕ್ಷಣೆ ಮಾಡಲಾಗಿದೆ. ಮೈಯಪೂರ್ತಿ ಮಣ್ಣು ಮೆತ್ತಿಕೊಂಡಿರುವ ಮಕ್ಕಳನ್ನು ರಕ್ಷಿಸದೇ ಹೋದರೆ ನಾಲ್ವರೂ ಸಹ ಮಣ್ಣು ಸೇರುತ್ತಿದ್ದವೇನೋ. ಆದರೆ ಆ ಪುಣ್ಯಾತ್ಮ ಮಕ್ಕಳನ್ನು ರಕ್ಷಿಸಿದ್ದಾನೆ. ಅತ್ತ ಇದೇನಾಗುತ್ತಿದೆ ಎಂಬುದರ ಪರಿವೇ ಇಲ್ಲದ ಮಕ್ಕಳು ಮಾತ್ರ ಸ್ತಬ್ಧವಾಗಿ ಕುಳಿತ್ತಿದ್ದಾರೆ.

ಇದನ್ನೂ ಓದಿ: ಕೊಡಗು: ಅಪ್ರಾಪ್ತೆಯ ರುಂಡ ಪತ್ತೆ.. ಕೊಲೆಗಾರ ತಲೆ ಬರುಡೆಯನ್ನು ಎಲ್ಲಿ ಎಸೆದಿದ್ದ ಗೊತ್ತಾ?

ಒಟ್ಟಿನಲ್ಲಿ ಅಪ್ಘಾನಿಸ್ತಾನಕ್ಕೆ ಮಾತ್ರ ಈ ಪರಿಸ್ಥಿತಿ ಬರಬಾರದಿತ್ತು. ತಾಲಿಬಾನ್​ಗಳ ವಶದಲ್ಲಿರುವ ಈ ದೇಶ ಇದೀಗ ಸಹಾಯಕ್ಕಾಗಿ ಅಂಗಲಾಚುತ್ತಿದೆ. ವಿಪತ್ತು ಸಮಯದಲ್ಲಿ ರಕ್ಷಣೆ ಮಾಡುವ ಬೇಕಾಗಿದ್ದಾರೆ ಎಂದು ಅನೇಕರು ಸಾಮಜಿಕ ಜಾಲತಾಣದಲ್ಲಿ ಬರೆದು ಹಾಕುತ್ತಿದ್ದಾರೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment