newsfirstkannada.com

ಭಾರೀ ಮಳೆಯಿಂದಾಗಿ ಉಂಟಾದ ಪ್ರವಾಹ.. 200ಕ್ಕೂ ಹೆಚ್ಚು ಜನ ಸಾವು

Share :

Published May 11, 2024 at 1:37pm

    ಪ್ರವಾಹದಿಂದ ಮಣ್ಣಿನಡಿ ಸಿಲುಕಿ ಸಾವನ್ನಪ್ಪಿದ ಜನರು

    ರಾಷ್ಟ್ರೀಯ ಸೇವೆ ಮತ್ತು ಭದ್ರತಾ ಪಡೆಗಳಿಂದ ರಕ್ಷಣಾ ಕಾರ್ಯಚರಣೆ

    ಭಾರೀ ಮಳೆಯಿಂದ ಜನವಸತಿ ಪ್ರದೇಶಗಳು ಸಂಪೂರ್ಣವಾಗಿ ಜಲಾವೃತವಾಗಿವೆ

ಅಫ್ಘಾನಿಸ್ತಾನದಲ್ಲಿ ಭಾರೀ ಮಳೆಯಿಂದ ಪ್ರವಾಹ ಉಂಟಾಗಿದೆ. ಈ ಪ್ರವಾಹದಿಂದಾಗಿ ಸುಮಾರು 200ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ ಎಂದು ವಿಶ್ವಸಂಸ್ಥೆ ಶನಿವಾರ ತಿಳಿಸಿದೆ.

ಉತ್ತರ ಅಫಘಾನಿಸ್ತಾನ ಭಾಗದಲ್ಲಿ ಕಳೆದೆರಡು ದಿನಗಳಿಂದ ಭಾರೀ ಮಳೆ ಸುರಿಯುತ್ತಿದ್ದು ನದಿಗಳಲ್ಲೇ ಉಕ್ಕಿ ಹರಿಯುತ್ತಿದೆ. ಜನವಸತಿ ಪ್ರದೇಶಗಳು ಸಂಪೂರ್ಣವಾಗಿ ಜಲಾವೃತವಾಗಿದ್ದು ಜನ ಜೀವನ ಅಸ್ತವ್ಯಸ್ತವಾಗಿದೆ.

ಇದನ್ನೂ ಓದಿ: ಕೊಡಗು: ಅಪ್ರಾಪ್ತೆಯ ರುಂಡ ಪತ್ತೆ.. ಕೊಲೆಗಾರ ತಲೆ ಬರುಡೆಯನ್ನು ಎಲ್ಲಿ ಎಸೆದಿದ್ದ ಗೊತ್ತಾ?

ಅಲ್ಲದೇ ಪ್ರವಾಹದಿಂದಾಗಿ ಸುಮಾರು ನೂರಾರು ಜನರು ಗಾಯಗೊಂಡಿದ್ದಾರೆ. ಇನ್ನು ಹಲವರು ಪ್ರವಾಹದಲ್ಲಿ ಬಂದ ಮಣ್ಣಿನಡಿಗೆ ಸಿಲುಕಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಸದ್ಯ ರಾಷ್ಟ್ರೀಯ ಸೇವೆ ಮತ್ತು ಭದ್ರತಾ ಪಡೆಗಳು ಅವಶೇಷದಡಿ ಸಿಲುಕಿರುವ ಮೃತ ದೇಹಗಳನ್ನು ಹೊರ ತೆಗೆಯುವ ಕೆಲಸ ಮಾಡುತ್ತಿದ್ದಾರೆ.

ಇದನ್ನೂ ಓದಿ: ಮಳೆ ಬೀಳುವ ಎಚ್ಚರಿಕೆ.. ರಾಜ್ಯದ ಈ ಜಿಲ್ಲೆಗಳಲ್ಲಿ 6 ದಿನಗಳ ಕಾಲ ಭರ್ಜರಿ ಮಳೆ..!

ಇನ್ನು ತಾಲಿಬಾನ್​ ಆಡಳಿತದಿಂದ ಅಪ್ಘಾನಿಸ್ತಾನ ಇನ್ನಷ್ಟು ತತ್ತರಿಸಿ ಹೋಗಿತ್ತು. ಇದೀಗ ಈ ಬಡ ರಾಷ್ಟ್ರಕ್ಕೆ ಪ್ರವಾಹ ಎದುರಾಗಿದ್ದು, ಮತ್ತಷ್ಟು ಸಂಕಷ್ಟ ಎದುರಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಭಾರೀ ಮಳೆಯಿಂದಾಗಿ ಉಂಟಾದ ಪ್ರವಾಹ.. 200ಕ್ಕೂ ಹೆಚ್ಚು ಜನ ಸಾವು

https://newsfirstlive.com/wp-content/uploads/2024/05/Afghanistan-1.jpg

Load More