newsfirstkannada.com

ಮಳೆ ಬೀಳುವ ಎಚ್ಚರಿಕೆ.. ರಾಜ್ಯದ ಈ ಜಿಲ್ಲೆಗಳಲ್ಲಿ 6 ದಿನಗಳ ಕಾಲ ಭರ್ಜರಿ ಮಳೆ..!

Share :

Published May 11, 2024 at 12:31pm

    ಬೆಂಗಳೂರಲ್ಲಿ ಇವತ್ತೂ ಸುರಿಯಲಿದೆ ಮಳೆ ಮತ್ತು ಗಾಳಿ

    ಮೇ 16 ವರೆಗೆ ರಾಜ್ಯದಲ್ಲಿ ಮಳೆಯಾಗಲಿದೆ ಎಂದ ಹವಾಮಾನ ಇಲಾಖೆ

    ನಿನ್ನೆ ಬೆಂಗಳೂರಲ್ಲಿ ಎಷ್ಟು ಮಳೆ ಬಿದ್ದಿದೆ ಗೊತ್ತಾ..?

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಇಂದೂ ಕೂಡ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಜೊತೆಗೆ ರಾಜ್ಯದಲ್ಲಿ ಮುಂದಿನ 6 ದಿನಗಳ ಕಾಲ ಮಳೆ ಬೀಳಲಿದೆ ಎಂದು ಹೇಳಿದೆ.

ಮಳೆಯ ಮುನ್ಸೂಚನೆ ಮತ್ತು ಎಚ್ಚರಿಕೆ ನೀಡಿರುವ ರಾಜ್ಯ ಹವಾಮಾನ ಇಲಾಖೆ.. ರಾಜ್ಯದಲ್ಲಿ ಇಂದಿನಿಂದ ಮೇ 16 ರವರೆಗೆ ಮಳೆಯಾಗುವ ಸಾಧ್ಯತೆ. ಇಂದು ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳ ಕೆಲವು ಸ್ಥಳಗಳಲ್ಲಿ ಗುಡುಗು ಸಹಿತ ಭಾರೀ ಗಾಳಿಯೊಂದಿಗೆ ಮಳೆ ಸಾಧ್ಯತೆ ಇದೆ.

ಇದನ್ನೂ ಓದಿ:ಕ್ರಿಕೆಟ್ ಪಂದ್ಯಾವಳಿಯ ಬ್ಯಾನರ್ ಕಟ್ಟುವಾಗ ದುರಂತ.. ವಿದ್ಯುತ್ ಸ್ಪರ್ಷಿಸಿ ಯವಕ ಸಾವು

ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಕೆಲವು ಸ್ಥಳಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಹಾಸನ, ದಾವಣಗೆರೆ, ಮಂಡ್ಯ, ಮೈಸೂರು, ಚಾಮರಾಜನಗರ, ಹಾವೇರಿ, ಬೆಳಗಾವಿ, ಬಾಗಲಕೋಟೆ, ಗದಗ, ವಿಜಯಪುರ ಜಿಲ್ಲೆಗಳಲ್ಲಿ ಕೆಲವು ಸ್ಥಳಗಳಲ್ಲಿ ಗುಡುಗು ಬಿರುಗಾಳಿ ಸಹಿತ ಸಾಧಾರಣ ಮಳೆ ಸಾಧ್ಯತೆ ಇದೆ.

ಬೀದರ್, ಧಾರವಾಡ, ಕಲಬುರಗಿ, ಕೊಪ್ಪಳ, ರಾಯಚೂರು, ಯಾದಗಿರಿ, ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗದ ಕೆಲವು ಸ್ಥಳಗಳಲ್ಲಿ ಬಿರುಗಾಳಿ, ಗುಡುಗು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆ. ಕೊಡಗು, ಕೋಲಾರ, ರಾಮನಗರ, ಶಿವಮೊಗ್ಗ, ತುಮಕೂರು, ವಿಜಯನಗರ ಜಿಲ್ಲೆಯಲ್ಲಿ ಸಾಧಾರಣ ಮಳೆ ಸಾಧ್ಯತೆ ಎಂದಿದೆ.

ಇದನ್ನೂ ಓದಿ:ಪ್ಲೇ ಆಫ್ ರೇಸ್​ನಲ್ಲಿ 3, 4ನೇ ಸ್ಥಾನಕ್ಕೆ ಭಾರೀ ಪೈಪೋಟಿ.. ಆರ್​​ಸಿಬಿ ಕತೆ ಏನು..?

ಬೆಂಗಳೂರಲ್ಲಿ ಎಲ್ಲೆಲ್ಲಿ ಮಳೆಯಾಗಿದೆ..?

  • ಕೆಂಗೇರಿ: 89 ಮಿಮೀ.
  • ಪೀಣ್ಯ ಇಂಡಸ್ಟ್ರಿಯಲ್ ಏರಿಯಾ: 62 ಮಿಮೀ
  • ನಾಯಂಡನಹಳ್ಳಿ: 61.1ಮಿಮೀ
  • ಹೆಮ್ಮಿಗೆಪುರ: 61 ಮಿಮೀ
  • ಆರ್ ಆರ್ ನಗರ: 60ಮಿಮೀ
  • ಮಾರುತಿ ಮಂದಿರ: 51.50ಮಿಮೀ
  • ವಿದ್ಯಾಪೀಠ: 50ಮಿಮೀ
  • ಉತ್ತರಹಳ್ಳಿ: 42 ಮಿಮೀ
  • ಹಂಪಿನಗರ: 39 ಮಿಮೀ
  • ಯಲಹಂಕ: 38.50 ಮಿಮೀ
  • ಜಕ್ಕೂರು: 38 ಮಿ.ಮೀ
  • ಕೊಟ್ಟಿಗೆಪಾಳ್ಯ: 33 ಮಿಮೀ
  • ಕೊಡಿಗೆಹಳ್ಳಿ: 28.50 ಮಿಮೀ
  • ನಂದಿನಿ ಲೇಔಟ್: 28 ಮಿಮೀ

ಇದನ್ನೂ ಓದಿ:ಜೆಡಿಎಸ್​ ಜೊತೆಗೆ ಮೈತ್ರಿ ಬೇಕೋ..? ಬೇಡವೋ..? ಕುತೂಹಲ ಮೂಡಿಸಿದ ಬಿಜೆಪಿಯ ಇವತ್ತಿನ ಸಭೆ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಳೆ ಬೀಳುವ ಎಚ್ಚರಿಕೆ.. ರಾಜ್ಯದ ಈ ಜಿಲ್ಲೆಗಳಲ್ಲಿ 6 ದಿನಗಳ ಕಾಲ ಭರ್ಜರಿ ಮಳೆ..!

https://newsfirstlive.com/wp-content/uploads/2024/05/rain24.jpg

Load More