newsfirstkannada.com

ಪ್ಲೇ ಆಫ್ ರೇಸ್​ನಲ್ಲಿ 3, 4ನೇ ಸ್ಥಾನಕ್ಕೆ ಭಾರೀ ಪೈಪೋಟಿ.. ಆರ್​​ಸಿಬಿ ಕತೆ ಏನು..?

Share :

Published May 11, 2024 at 10:09am

Update May 11, 2024 at 10:11am

    ಕುತೂಹಲದ ಘಟ್ಟ ತಲುಪಿದೆ ಐಪಿಎಲ್​ ಟೂರ್ನಿ

    ಪ್ಲೇ ಆಫ್​ ಎಂಟ್ರಿಗಾಗಿ ಜಿದ್ದಾಜಿದ್ದಿನ ರೇಸ್​ ಶರುವಾಗಿದೆ

    ಯಾವೆಲ್ಲಾ ತಂಡಕ್ಕಿದೆ ಪ್ಲೇ ಆಫ್​ ಎಂಟ್ರಿಗೆ ಚಾನ್ಸ್​ ಸಿಗಲಿದೆ?

ಸೀಸನ್​​ 17ರ ಐಪಿಎಲ್​ ಅಂತಿಮಘಟ್ಟ ತಲುಪಿದೆ. ಪಂದ್ಯಗಳು ಮುಗೀತಿದ್ದಂತೆ, ದಿನದಿಂದ ದಿನಕ್ಕೆ ಕುತೂಹಲವೂ ಹೆಚ್ಚಾಗ್ತಿದೆ. ಫ್ಲೇ ಆಫ್​ಗೆ ಎಂಟ್ರಿ ಕೊಡೋದ್ಯಾರು ಅನ್ನೋ ಮಿಲಿಯನ್​ ಡಾಲರ್​​ ಪ್ರಶ್ನೆ ಅಭಿಮಾನಿಗಳನ್ನ ಕಾಡ್ತಿದೆ.

ಇಂಡಿಯನ್​ ಪ್ರೀಮಿಯರ್​ ಲೀಗ್​ ಸೀಸನ್​ 17 ಕುತೂಹಲದ ಘಟ್ಟ ತಲುಪಿದೆ. ಬಹುತೇಕ ಪಂದ್ಯಗಳು ಮುಗಿದಿದ್ರೂ, ಪ್ಲೇ ಆಫ್​ಗೆ ಕ್ವಾಲಿಫೈ ಆಗೋ ತಂಡಗಳು ಯಾವುವು ಅನ್ನೋ ಪ್ರಶ್ನೆಗೆ ಪಕ್ಕಾ ಉತ್ತರ ಸಿಕ್ಕಿಲ್ಲ. ಈಗಾಗಲೇ ಕ್ಯಾಲ್ಯುಲೇಟರ್​ ಹಿಡಿದು ಫ್ಯಾನ್ಸ್​​, ಲೆಕ್ಕಾಚಾರವನ್ನೂ ಆರಂಭಿಸಿದ್ದಾರೆ.

ಇದನ್ನೂ ಓದಿ:ಅಮ್ಮನಿಗೆ ಗುಂಡು.. ಸುತ್ತಿಗೆಯಿಂದ ಪತ್ನಿಯ ಜೀವ.. 3 ಮಕ್ಕಳನ್ನು ಟೆರಸ್​​ನಿಂದ ಎಸೆದ.. ಐವರ ಬರ್ಬರ ಕೊಲೆ

ಕುತೂಹಲದ ಘಟ್ಟ ತಲುಪಿದ ಐಪಿಎಲ್​ ಹಂಗಾಮ
ಸೀಸನ್​​ 17ರ ಐಪಿಎಲ್​​ನ 59 ಪಂದ್ಯಗಳು ಅಂತ್ಯ ಕಂಡಿವೆ. 10 ತಂಡಗಳ ಪೈಕಿ, ಮುಂಬೈ ಇಂಡಿಯನ್ಸ್​ ಹಾಗೂ ಪಂಜಾಬ್​ ಕಿಂಗ್ಸ್​​ ಪ್ಲೇ ಆಫ್​ ರೇಸ್​ನಿಂದ ಹೊರ ಬಿದ್ದಾಗಿದೆ. ಇನ್ನುಳಿದ 8 ತಂಡಗಳ ನಡುವೆ ಜಿದ್ದಾಜಿದ್ದಿನ ಫೈಟ್​ ನಡೀತಾ ಇದೆ. ಅಂಕಪಟ್ಟಿಯ ಟಾಪ್​​ 4 ಸ್ಥಾನದ ರೇಸ್​​ ತೀವ್ರ ಕುತೂಹಲ ಕೆರಳಿಸಿದೆ.

ನಂಬರ್​​ 1 ಪಟ್ಟಕ್ಕಾಗಿ ಕೆಕೆಆರ್​-ರಾಜಸ್ಥಾನ್​ ಪೈಪೋಟಿ
ಈ ಬಾರಿಯ ಟೂರ್ನಿಯಲ್ಲಿ ಕೊಲ್ಕತ್ತಾ ನೈಟ್​​ ರೈಡರ್ಸ್​ ಹಾಗೂ ರಾಜಸ್ಥಾನ್​ ರಾಯಲ್ಸ್​ ಸಾಲಿಡ್​ ಆಟವಾಡ್ತಿವೆ. ಆಡಿದ 11 ಪಂದ್ಯಗಳಲ್ಲಿ ತಲಾ 8 ರಲ್ಲಿ ಗೆದ್ದಿರೋ ಈ ತಂಡಗಳು ಬಹುತೇಕ ಪ್ಲೇ ಆಫ್​ಗೆ ಕ್ವಾಲಿಫೈ ಆಗಿವೆ. ಇದೀಗ ಈ ಎರಡೂ ತಂಡಗಳ ನಡುವೆ ನಂಬರ್ 1​ ಸ್ಥಾನಕ್ಕಾಗಿ ಪೈಪೋಟಿ ತೀವ್ರಗೊಂಡಿದೆ. ನೀನಾ? ನಾನಾ? ಎಂಬಂತೆ ಜಿದ್ದಿಗೆ ಬಿದ್ದಿವೆ.

ಇದನ್ನೂ ಓದಿ:ಜೆಡಿಎಸ್​ ಜೊತೆಗೆ ಮೈತ್ರಿ ಬೇಕೋ..? ಬೇಡವೋ..? ಕುತೂಹಲ ಮೂಡಿಸಿದ ಬಿಜೆಪಿಯ ಇವತ್ತಿನ ಸಭೆ..!

3-4ನೇ ಸ್ಥಾನಕ್ಕಾಗಿ ತೀವ್ರಗೊಂಡ ಹಗ್ಗಜಗ್ಗಾಟ.!
ಮೊದಲ 2 ಸ್ಥಾನದಲ್ಲಿ ಕೊಲ್ಕತ್ತಾ ಹಾಗೂ ರಾಜಸ್ಥಾನ್​ ತಂಡಗಳು ಉಳಿಯೋದು ಬಹುತೇಕ ಕನ್​ಫರ್ಮ್​. ಇದೀಗ ಉಳಿದ 2 ಸ್ಥಾನಗಳಲ್ಲಿ ಪ್ಲೇ ಆಫ್​ಗೆ​ ಕ್ವಾಲಿಫೈ ಆಗೋ ರೇಸ್​ ಜೋರಾಗಿದೆ. 3 ಹಾಗೂ 4ನೇ ಸ್ಥಾನಕ್ಕಾಗಿ ಹಗ್ಗಜಗ್ಗಾಟ ತೀವ್ರಗೊಂಡಿದೆ. ಚೆನ್ನೈ ಸೂಪರ್​​ ಕಿಂಗ್ಸ್​, ಸನ್​ರೈಸರ್ಸ್​ ಹೈದ್ರಾಬಾದ್​ ಸದ್ಯ 3 ಹಾಗೂ 4ನೇ ಸ್ಥಾನದಲ್ಲಿವೆ. ಉಳಿದ ಪಂದ್ಯಗಳ ಲೆಕ್ಕಾಚಾರದಲ್ಲಿ ಸಿಎಸ್​ಕೆ, ಹೈದ್ರಾಬಾದ್​ ತಂಡಗಳಿಗೆ ಕ್ವಾಲಿಫೈ ಆಗೋ ಅವಕಾಶ ಹೆಚ್ಚಿದೆ.

ಡೆಲ್ಲಿ-ಲಕ್ನೋ ತಂಡಗಳಿಗಿದ್ಯಾ ಚಾನ್ಸ್​?
ಆಡಿದ 12 ಪಂದ್ಯಗಳಲ್ಲಿ 6 ಪಂದ್ಯ ಗೆದ್ದು 12 ಪಾಯಿಂಟ್ಸ್​ ಹೊಂದಿರೋ ಡೆಲ್ಲಿ ಕ್ಯಾಪಿಟಲ್ಸ್​, ಲಕ್ನೋ ಸೂಪರ್​ ಜೈಂಟ್ಸ್​ ತಂಡಗಳು ಸದ್ಯ 5 ಮತ್ತು 6ನೇ ಸ್ಥಾನದಲ್ಲಿವೆ. ಉಭಯ ತಂಡಗಳಿಗೆ ಇನ್ನೂ 3 ಪಂದ್ಯಗಳು ಬಾಕಿ ಇದ್ದು, ಮೂರೂ ಪಂದ್ಯಗಳಲ್ಲಿ ಜಯ ಸಾಧಿಸಿದ್ರೆ, ಪ್ಲೇ ಅಫ್​ ಕನಸು ಜೀವಂತವಾಗಿರಲಿದೆ. ಹೈದ್ರಾಬಾದ್​ ಹಾಗೂ ಚೆನ್ನೈ ಸೋಲು ಗೆಲುವಿನ ಮೇಲೆ ಭವಿಷ್ಯ ನಿರ್ಧಾರವಾಗಲಿದೆ.

RCB ಕಥೆ ಏನು? ಪ್ಲೇ ಅಫ್​ಗೆ​ ಎಂಟ್ರಿಗಿದ್ಯಾ ಚಾನ್ಸ್​?
ಸತತ 4 ಪಂದ್ಯಗಳಲ್ಲಿ ಗೆದ್ದು ರಾಯಲ್​ ಕಮ್​ಬ್ಯಾಕ್​ ಮಾಡಿರುವ ಆರ್​​ಸಿಬಿ ಪಾಲಿಗೂ ಪ್ಲೇ ಆಫ್​ ಎಂಟ್ರಿಗೆ ಚಿಕ್ಕದಾದ ಅವಕಾಶವಿದೆ. ಉಳಿದ 2 ಪಂದ್ಯಗಳನ್ನೂ ಜಯಿಸಿ, ಅದೃಷ್ಟ ಏನಾದ್ರೂ ಕೈ ಹಿಡಿದ್ರೆ ಆರ್​​ಸಿಬಿ ಪ್ಲೇ ಆಫ್​ಗೇರಲಿದೆ. ಪ್ರಮುಖವಾಗಿ ಆರ್​​ಸಿಬಿ ಎಂಟ್ರಿ ಕೊಡಬೇಕಂದ್ರೆ ಉಳಿದ ಪಂದ್ಯಗಳಲ್ಲಿ ಸಿಎಸ್​ಕೆ, ಹೈದ್ರಾಬಾದ್​, ಡೆಲ್ಲಿ ಹಾಗೂ ಲಕ್ನೋ ತಂಡಗಳು ಸೋಲಬೇಕಿದೆ. ಇದು ನಿಜಕ್ಕೂ ಸಾಧ್ಯವಾಗೋ ವಿಚಾರಾನಾ? ಅನ್ನೋದು ಕುತೂಹಲ ಕೆರಳಿಸಿದೆ.

ಇದನ್ನೂ ಓದಿ:ಆರ್​ಸಿಬಿ ಪ್ಲೇ ಆಫ್ ಕನಸು! ಅಂದುಕೊಂಡಷ್ಟು ಸುಲಭ ಅಲ್ಲವೇ ಅಲ್ಲ.. ಹೀಗಾದರೆ ಮಾತ್ರ ಸಾಧ್ಯ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪ್ಲೇ ಆಫ್ ರೇಸ್​ನಲ್ಲಿ 3, 4ನೇ ಸ್ಥಾನಕ್ಕೆ ಭಾರೀ ಪೈಪೋಟಿ.. ಆರ್​​ಸಿಬಿ ಕತೆ ಏನು..?

https://newsfirstlive.com/wp-content/uploads/2024/05/RCB-won-match.jpg

Load More