newsfirstkannada.com

ಕಂಡು ಕೇಳರಿಯದ ಪ್ರವಾಹಕ್ಕೆ 315 ಜನರು ಸಾವು.. ಮಿಡಿದ ಕ್ರಿಕೆಟಿಗನ ಹೃದಯ.. ನೆರವಿಗಾಗಿ ಸಹಾಯ ಹಸ್ತ..

Share :

Published May 13, 2024 at 6:20am

Update May 12, 2024 at 10:21pm

    ವರುಣಾರ್ಭಟ, ಪ್ರವಾಹಕ್ಕೆ 300ಕ್ಕೂ ಹೆಚ್ಚು ಮಂದಿ ಬಲಿ

    ರಣಭೀಕರ ಪ್ರವಾಹಕ್ಕೆ ಸಿಲುಕಿ ಕೊಚ್ಚಿ ಹೋದ ಮನೆಗಳು

    ಕೆಸರು ಮಿಶ್ರಿತ ಪ್ರವಾಹದಲ್ಲಿ ಸಿಲುಕಿದ್ದ ಮಕ್ಕಳ ಆಕ್ರಂದನ

ತಾಲಿಬಾನಿಗಳ ದುರಾಡಳಿತದಿಂದ ಕಂಗೆಟ್ಟಿದ್ದ ಅಫ್ಘಾನಿಸ್ತಾನದ ಜನತೆ ಇದೀಗ ರಣಭೀಕರ ಮಳೆ, ಪ್ರವಾಹದ ಹೊಡೆತಕ್ಕೆ ನಲುಗಿದ್ದಾರೆ. ಕಳೆದ 3-4 ದಿನಗಳಿಂದ ಸುರಿಯುತ್ತಿರುವ ವರುಣ ಕಣಿವೆಗಳ ನಾಡನ್ನು ಕಂಗಾಲಾಗಿಸಿದೆ. ಉಕ್ಕಿ ಹರಿದ ನದಿಗಳು ಅಪಾರ ಸಾವು-ನೋವುಗಳನ್ನು ಉಂಟು ಮಾಡಿದೆ, ಅಫ್ಘಾನಿಸ್ತಾನದ ಪರಿಸ್ಥಿತಿ ಅಲ್ಲೋಲ-ಕಲ್ಲೋಲ ಆಗಿದೆ.

ಇದನ್ನೂ ಓದಿ:ಹಾಸನ ಅಶ್ಲೀಲ ವಿಡಿಯೋ ಕೇಸ್​ಗೆ ಸ್ಫೋಟಕ ಟ್ವಿಸ್ಟ್.. ಮತ್ತೊಬ್ಬ ‘ಮಹಾನಾಯಕ’ನ ಹೆಸರು ಹೇಳಿದ ಆರೋಪಿ..

ನೆರೆಯ ರಾಷ್ಟ್ರ ಅಫ್ಘಾನಿಸ್ತಾನ ರಣಭೀಕರ ಪ್ರವಾಹಕ್ಕೆ ಅಕ್ಷರಶಃ ತತ್ತರಿಸಿ ಹೋಗ್ತಿದೆ. ಉತ್ತರ ಅಫ್ಘಾನಿಸ್ತಾನದ ಹಲವೆಡೆ ಕಳೆದ 3-4 ದಿನಗಳಿಂದ ಕಂಡು ಕೇಳರಿಯದ ಮಳೆಯಾಗ್ತಿದೆ. ನದಿ, ತೊರೆಗಳು ಉಕ್ಕಿ ಹರಿದ ಪರಿಣಾಮ ಎಲ್ಲೆಲ್ಲೂ ಪ್ರವಾಹ ಸೃಷ್ಟಿಸಿಯಾಗಿದೆ. ಜನವಸತಿ ಪ್ರದೇಶಗಳತ್ತ ಕೆಸರು ಮಿಶ್ರಿತ ನೀರು ನುಗ್ಗಿದ ಪರಿಣಾಮ ಅಯೋಮವಾಗಿದೆ. ಮತ್ತೊಂದೆಡೆ ಗುಡ್ಡಗಾಡು ಪ್ರದೇಶಗಳಲ್ಲಿನ ಮನೆಗಳು ಕೆಸರುಮಯ ನೀರಿನಿಂದ ಸಮಾಧಿಯಾಗಿವೆ. ಪ್ರವಾಹ ಎಲ್ಲವನ್ನೂ ಅಪೋಶನ ತೆಗೆದುಕೊಂಡಿದೆ. ಸಾವಿರಾರು ಮನೆಗಳು ಕೆಸರಿನಲ್ಲಿ ಹೂತು ಹೋಗಿವೆ.

ಇದನ್ನೂ ಓದಿ:ಜೈಲಿನಿಂದ ಬಂದ ಬೆನ್ನಲ್ಲೇ 10 ಗ್ಯಾರಂಟಿ ಘೋಷಣೆ ಮಾಡಿದ ಕೇಜ್ರಿವಾಲ್.. ಇವೆಲ್ಲ ಉಚಿತ.. ಉಚಿತ..!

ಪ್ರವಾಹಕ್ಕೆ ಸಿಲುಕಿ ಬದುಕುಳಿದವರು ಜೀವ ಉಳಿಸಿಕೊಳ್ಳಲು ಪರದಾಡ್ತಿದ್ದಾರೆ. ಪುಟ್ಟಪುಟ್ಟ ಮಕ್ಕಳ ಆಕ್ರಂದನ ಮುಗಿಲುಮುಟ್ಟಿದೆ. ಇನ್ನು ಅಫ್ಘಾನಿಸ್ತಾನದಲ್ಲಿ ಮಳೆ ಹಾಗೂ ಪ್ರವಾಹದಿಂದ 300ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಪ್ರವಾಹಕ್ಕೆ ಸಿಲುಕಿ 1,600ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಮಾಹಿತಿ ಲಭ್ಯವಾಗಿದೆ. ನದಿಗಳಲ್ಲಿ ಕೊಚ್ಚಿ ಹೋಗಿ ಮೃತಪಟ್ಟವರ ಕಳೆಬರಗಳು ಕಣ್ಣಿಗೆ ರಾಚುತ್ತಿವೆ. ನದಿ ತೀರದ ಪ್ರದೇಶಗಳಲ್ಲಂತೂ ಗೋಳು ಕೇಳೋರಿಲ್ಲದಂತಾಗಿದೆ. ಅಫ್ಘಾನಿಸ್ತಾನದ ಪ್ರವಾಹ ಪರಿಸ್ಥಿತಿಗೆ ವಿಶ್ವಸಂಸ್ಥೆ ಸಂಸ್ಥೆ ಸ್ಪಂದಿಸಿದೆ. ವಿಶ್ವ ಆಹಾರ ಕಾರ್ಯಕ್ರಮ ಸಂಸ್ಥೆಯಿಂದ ತುರ್ತು ಪರಿಹಾರ ಕಾರ್ಯ ನೀಡ್ತಿದೆ. ಸಂತ್ರಸ್ತರನ್ನು ಸುರಕ್ಷಿತ ಸ್ಥಳಗಳಿಗೆ ರವಾನಿಸ್ತಿದ್ದು ಆಹಾರದ ವ್ಯವಸ್ಥೆ ಮಾಡಲಾಗಿದೆ.

ಸಂತ್ರಸ್ತರಿಗೆ ಮಿಡಿದ ಕ್ರಿಕೆಟಿಗ ರಶೀದ್ ಖಾನ್ ಮನ!

ಇನ್ನು, ತನ್ನ ದೇಶದಲ್ಲಿ ಸಂಕಷ್ಟದಲ್ಲಿರುವ ಸಂತ್ರಸ್ತರಿಗೆ ಕ್ರಿಕೆಟಿಗ ರಶೀದ್ ಖಾನ್ ಮಿಡಿದಿದ್ದಾರೆ. ಅಫ್ಘಾನಿಸ್ತಾನದ ಕರೆನ್ಸಿ ರೂಪದಲ್ಲಿ 1.5 ಮಿಲಿಯನ್ ಅಂದ್ರೆ ಭಾರತದ ರೂಪಾಯಿ ಲೆಕ್ಕದಲ್ಲಿ 17 ಕೋಟಿ ನೆರವು ಘೋಷಿಸಿದ್ದಾರೆ. ಹವಾಮಾನ ವೈಪರೀತ್ಯದಿಂದಾಗಿ ದಾಖಲೆಯ ಮಳೆಯಾಗ್ತಿದೆ ಅಂತ ಹೇಳಲಾಗಿದೆ. ಪ್ರವಾಹದಿಂದ ಸಾವನ್ನಪ್ಪುವವರ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆ ಇದೆ. ಅವಶೇಷಗಳಡಿ ಸಿಲುಕಿರುವವರ ರಕ್ಷಣಾಕಾರ್ಯ ನಡೆಯುತ್ತಿದೆ. ಒಟ್ಟಾರೆ, ತಾಲಿಬಾನ್ ದುರ್ಬಲ ಆಡಳಿತಕ್ಕೆ ಮಳೆ, ಪ್ರವಾಹ ದೊಡ್ಡ ಶಾಕ್ ನೀಡಿದ್ದು ಅಪಾರ ಆರ್ಥಿಕ ನಷ್ಟ ಮಾಡಿದೆ.

ಇದನ್ನೂ ಓದಿ:Heat wave: ರಣ ಬಿಸಿಲಿಗೆ ಯಾರಾದರೂ ಪ್ರಜ್ಞೆತಪ್ಪಿ ಬಿದ್ದರೆ ಯಾವತ್ತೂ ಈ ತಪ್ಪು ಮಾಡಲೇಬೇಡಿ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕಂಡು ಕೇಳರಿಯದ ಪ್ರವಾಹಕ್ಕೆ 315 ಜನರು ಸಾವು.. ಮಿಡಿದ ಕ್ರಿಕೆಟಿಗನ ಹೃದಯ.. ನೆರವಿಗಾಗಿ ಸಹಾಯ ಹಸ್ತ..

https://newsfirstlive.com/wp-content/uploads/2024/05/afghanistan-flood.jpg

Load More