newsfirstkannada.com

×

ಏನ್​​ ಗುರೂ! ಬೆಂಗಳೂರಲ್ಲಿ ಓರ್ವ ಖತರ್ನಾಕ್ ವಿದೇಶಿ ಪ್ರಜೆ.. ಈತ ಮಾಡಿದ ದೊಡ್ಡ ತಪ್ಪು ಏನು ಗೊತ್ತಾ..?

Share :

Published October 3, 2023 at 10:03am

    ಕಳೆದ ಹತ್ತು ವರ್ಷಗಳಿಂದ ನಗರದಲ್ಲಿ ನೆಲೆಸಿದ್ದ ಆಸಾಮಿ

    ಜಿಮ್ ಟ್ರೈನರ್ ಆಗಿ ಕೆಲಸ ಮಾಡುತ್ತಿದ್ದ ಆಫ್ರಿಕಾದ ಪ್ರಜೆ

    ಆಫ್ರಿಕಾ ಪ್ರಜೆಯನ್ನ ಬಂಧಿಸಿದ ಸಿಸಿಬಿ ಪೊಲೀಸರು

ಬೆಂಗಳೂರು: ಮನೆಯೇ ಮಂತ್ರಾಲಯ ಅಂತಾರೆ. ಆದರೆ ಇಲ್ಲೊಬ್ಬ ವ್ಯಕ್ತಿ ಮನೆಯಲ್ಲಿಯೇ ಮತ್ತು ಬರುವ ಗಿಡ ಬೆಳೆಸಿ ಸಿಕ್ಕಿಬಿದ್ದ ಘಟನೆ ಬಾಣಸವಾಡಿಯಲ್ಲಿ ನಡೆದಿದೆ. ಅಚ್ಚರಿ ಸಂಗತಿ ಎಂದರೆ ಎಲ್ಇಡಿ ಬೆಳಕಿನ ಸಹಾಯದಲ್ಲಿ ಮತ್ತು ಬರುವ ಗಿಡ ಬೆಳೆಸಿದ್ದಾನೆ.

ಅಂದಹಾಗೆಯೇ ಈತ ಭಾರತ ಮೂಲದವನು ಅಲ್ಲ, ಆಫ್ರಿಕಾ ಪ್ರಜೆ. ಆತ ಮನೆಯೊಳಗೆ ಬೆಳೆಸಿದ್ದು ಮತ್ಯಾವುದು ಅಲ್ಲ, ಗಾಂಜಾ ಗಿಡ. ಹಾಗಂತ ಅದು ಸಾಮಾನ್ಯ ಗಾಂಜಾ ಗಿಡ ಅಲ್ಲ. ಹೈಬ್ರೀಡ್ ಗಾಂಜಾ ಗಿಡ. ಬ್ಲಾಕ್ ಮಾರ್ಕೇಟ್ ಮೂಲಕ ಗಾಂಜಾ ಗಿಡದ ಬೀಜ ತರಿಸಿ ಬೆಳೆಸಿದ್ದ.

ಆಸಾಮಿ ಬಾಣಸವಾಡಿಯಲ್ಲಿ ಜಿಮ್ ಟ್ರೈನರ್ ಆಗಿ ಕೆಲಸ ಮಾಡುತ್ತಿದ್ದು, ಕಳೆದ ಹತ್ತು ವರ್ಷಗಳಿಂದ ನಗರದಲ್ಲಿ ನೆಲೆಸಿದ್ದ. ಹಲವು ತಿಂಗಳುಗಳಿಂದ ಮನೆಯಲ್ಲಿ ಗಾಂಜಾ ಗಿಡ ಬೆಳೆಸಿ ಪೋಷಣೆ ಮಾಡುತ್ತಿದ್ದ. ಗಾಂಜಾ ಸಸಿ ಬೆಳೆಯಲು ಮನೆಯಲ್ಲೆ ಬೇಕಾದ ವ್ಯವಸ್ಥೆ ಮಾಡಿಕೊಂಡಿದ್ದ. ಪ್ರಾಯೋಗಿಕವಾಗಿ ಗಿಡ ಬೆಳೆದಿದ್ದ. ಆಳೆತ್ತರದ ಗಾಂಜಾ ಸಸಿಯನ್ನ ಎಲ್​ಇಡಿ ಸಹಾಯದ ಮೂಲಕ ಮನೆಯಲ್ಲಿ ಬೆಳೆಸಿದ್ದಾನೆ.

ಇದು ಸಕ್ಸಸ್ ಆದ್ರೆ ಮನೆಯಲ್ಲೆ ಗಾಂಜಾ ಬೆಳೆಯೋ ಪ್ಲಾನ್ ಮಾಡಿದ್ದ. ಒಂದು ಗಿಡದಲ್ಲಿ ಬರೊಬ್ಬರಿ ಒಂದು ಕೆಜಿ ಗಾಂಜಾ ಸಿಗುತ್ತೆ ಎಂಬ ಯೋಚನೆಯ ಮೂಲಕ ಆಳೆತ್ತರ ಹೈಬ್ರೀಡ್ ಗಾಂಜಾ ಗಿಡ ಬೆಳೆಸಿದ್ದ.

ವಿದೇಶಿ ಪ್ರಜೆ ಗಾಂಜಾ ಗಿಡ ಬೆಳೆಸಿದ್ದ ಬಗ್ಗೆ ಸಿಸಿಬಿ ಪೊಲೀಸರು ಮಾಹಿತಿ ಕಲೆ ಹಾಕಿದ್ದರು. ಬಳಿಕ ಖಚಿತ ಮಾಹಿತಿ ಪಡೆದು ಬಾಣಸವಾಡಿಯ ಮನೆ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ದಾಳಿ ವೇಳೆ ಮನೆಯಲ್ಲಿ ಆಳೆತ್ತರದ ಗಾಂಜಾ ಗಿಡ ಪತ್ತೆಯಾಗಿದೆ.

ಸದ್ಯ ಆಫ್ರಿಕಾ ಪ್ರಜೆಯನ್ನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಏನ್​​ ಗುರೂ! ಬೆಂಗಳೂರಲ್ಲಿ ಓರ್ವ ಖತರ್ನಾಕ್ ವಿದೇಶಿ ಪ್ರಜೆ.. ಈತ ಮಾಡಿದ ದೊಡ್ಡ ತಪ್ಪು ಏನು ಗೊತ್ತಾ..?

https://newsfirstlive.com/wp-content/uploads/2023/10/Ganja.jpg

Load More