newsfirstkannada.com

ಪೋಷಕರೇ ಹುಷಾರ್​​.. ಶಾಲೆಗೆ ಹೋಗೋ ವಿದ್ಯಾರ್ಥಿನಿಯರೇ ಈ ಕಿಡಿಗೇಡಿಗಳ ಟಾರ್ಗೆಟ್​​!

Share :

Published May 28, 2024 at 6:20am

    ಶಾಲಾ ವಿದ್ಯಾರ್ಥಿನಿಯರ ಮಾರ್ಫಿಂಗ್ ಫೋಟೋ ವೈರಲ್

    ಶಾಲಾ ವಿದ್ಯಾರ್ಥಿನಿಯರಿಗೆ ಶುರುವಾಯ್ತು ಡೀಪ್​ಫೇಕ್​​ ಕಾಟ

    ವಿದ್ಯಾರ್ಥಿನಿಯ ನಗ್ನ ಫೋಟೋ ವೈರಲ್ ಮಾಡಿದ ಕಿಡಿಗೇಡಿ​

ಬೆಂಗಳೂರು: ಕೆಲ ದಿನಗಳ ಹಿಂದೆ ನ್ಯಾಷನಲ್​ ಕ್ರಶ್ ರಶ್ಮಿಕಾ ಮಂದಣ್ಣ ಡೀಫ್​​ ಫೇಕ್​ ವಿಡಿಯೋ ಓವರ್​​ ಸ್ಪೀಡ್​​ನಲ್ಲಿ ವೈರಲ್​ ಆಗಿತ್ತು. ಸೆಲೆಬ್ರಿಟಿಗಳ ನಿದ್ದೆಗೂ ಬ್ರೇಕ್​ ಬಿದ್ದಿತ್ತು. ರಶ್ಮಿಕಾ ಫೇಕ್​ ವಿಡಿಯೋ ಕ್ರಿಯೇಟರ್​ ಲಾಕ್​ ಆಗ್ತಿದ್ದಂತೆ ಸೈಲೆಂಟಾಯ್ತು ಅನ್ನುವಷ್ಟರಲ್ಲಿ ಇದೀಗ ಸ್ಕೂಲ್​​ ಸ್ಟೂಡೆಂಟ್ಸ್​​​ಗೆ ಡೀಪ್​ಫೇಕ್​​ ಕಾಟ ಶುರುವಾಗಿದೆ. ಹೆಣ್ಣು ಮಕ್ಕಳ ಭವಿಷ್ಯ ಕತ್ತಲ ಕೂಪಕ್ಕೆ ತಳ್ಳಲ್ಪಡ್ತಿದ್ಯಾ ಅನ್ನೋ ಆತಂಕ ಕಾಡ್ತಿದೆ.

ಇದನ್ನೂ ಓದಿ: ‘ನಾನು ಡಿಪ್ರೆಶನ್‌ಗೆ ಹೋಗಿ ಐಸೋಲೇಷನ್‌ಗೆ ಒಳಗಾಗಿದ್ದೆ’- ಪ್ರಜ್ವಲ್​ ರೇವಣ್ಣ ವಿಡಿಯೋದಲ್ಲಿ ಹೇಳಿದ್ದೇನು?

ಹೌದು, 9ನೇ ತರಗತಿ ವಿದ್ಯಾರ್ಥಿನಿಯ ಇನ್​ಸ್ಟಾ ಗ್ರೂಪ್​​​ನಲ್ಲಿ ಆಕೆಯ ನಗ್ನ ಫೋಟೋ ವೈರಲ್ ಆಗಿದೆ. ಆದರೆ ಆ ಇನ್​ಸ್ಟಾ ಗ್ರೂಪ್​ನಲ್ಲಿ ನಗರದ 50ಕ್ಕೂ ಹೆಚ್ಚು ಶಾಲೆಯ ವಿದ್ಯಾರ್ಥಿಗಳು ಇದ್ದರು. ಯಾವಾಗ ವಿದ್ಯಾರ್ಥಿನಿಯ AI ಅಲ್ಲಿ ರಚಿಸಲಾದ ನಗ್ನ ಫೋಟೋ ವೈರಲ್ ಆಗುತ್ತಿದ್ದಂತೆ ಆಕೆ ಪೋಷಕರಿಗೆ ತಿಳಿಸಿದ್ದಾಳೆ. ಅಲರ್ಟ್​​ ಆದ ಪಾಲಕರು ಸೈಬರ್​ ಸೆಲ್​ಗೆ ದೂರು ಕೊಟ್ಟಿದ್ದಾರೆ.

ಇಷ್ಟು ಮಾತ್ರವಲ್ಲ 50ಕ್ಕೂ ಹೆಚ್ಚು ಶಾಲೆಯ ವಿದ್ಯಾರ್ಥಿನಿಯರು ಈ ಗ್ರೂಪ್​​ನಲ್ಲಿದ್ದಾರೆ. ಅಂದ್ರೆ ಸಂಖ್ಯೆ ಎಷ್ಟಿರೋದ್ಬೋದು ಅನ್ನೋದು ಲೆಕ್ಕಕ್ಕೆ ಸಿಗೋದು ಕಷ್ಟ. ಆದ್ರೆ, ವಿದ್ಯಾರ್ಥಿನಿಯ ಫೋಟೋ ವೈರಲ್​ ಆಗಿದ್ದು ಸತ್ಯ. ಶಾಲಾ ಗ್ರೂಪ್​ನಲ್ಲಿ ಇದ್ದಾನೆಂದರೆ ಆತ ಖಂಡಿತ ವಿದ್ಯಾರ್ಥಿ ಆಗಿರಬಹುದು. ಅದೇನೆ ಹೇಳಿ ಶಾಲಾ ಮಕ್ಕಳ ಭವಿಷ್ಯ ಕತ್ತಲ ಕೂಪದಲ್ಲಿ ತಳ್ಳಲ್ಪಡ್ತಿರೋ? ಇಂತಹ ನೀಚ ಕೆಲಸ ಮಾಡ್ತಿರುವ ಕಿಡಿಗೇಡಿಗಳಿಗೆ ಸೂಕ್ತ ಕ್ರಮ ಆಗಬೇಕಿದೆ. ಯಾವುದಕ್ಕೂ ಪೋಷಕರು ಹುಷಾರಾಗಿರಿ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪೋಷಕರೇ ಹುಷಾರ್​​.. ಶಾಲೆಗೆ ಹೋಗೋ ವಿದ್ಯಾರ್ಥಿನಿಯರೇ ಈ ಕಿಡಿಗೇಡಿಗಳ ಟಾರ್ಗೆಟ್​​!

https://newsfirstlive.com/wp-content/uploads/2023/07/AI-Deepfake.jpg

Load More