/newsfirstlive-kannada/media/post_attachments/wp-content/uploads/2024/10/BOMB-THREATS.jpg)
ಕಳೆದ ಒಂದು ವಾರದಿಂದ ವಿಮಾನಯಾನ ಸಂಸ್ಥೆಗಳು ಹುಸಿ ಬಾಂಬ್ ಬೆದರಿಕೆ ಕರೆಗಳಿಂದ ಕಂಗಾಲಾಗಿ ಹೋಗಿದ್ದವು. ಒಂದೇ ದಿನದಲ್ಲಿ ಸುಮಾರು 90 ಹುಸಿ ಬಾಂಬ್ ಬೆದರಿಕೆ ಕರೆಗಳನ್ನು ಎದುರಿಸಲಾಗಿದ್ದು ಇದೆ. ಈಗ ಕಿರಾತಕರು ಬೇರೆಯದ್ದೊಂದು ಹೊಸ ತಂತ್ರ ರೂಪಿಸಿದ್ದಾರೆ. ಹುಸಿ ಬಾಂಬ್ ಬೆದರಿಕೆ ಕರೆಗಳು ಈಗ ವಿಮಾನಯಾನ ಸಂಸ್ಥೆಗಳಿಂದ ಹಾಸ್ಟೆಲ್ ಹಾಗೂ ಹೋಟೆಲ್​ಗಳ ಬೆನ್ನು ಬಿದ್ದಿವೆ. ಕೊಲ್ಕತ್ತಾದಲ್ಲಿ ಒಂದೇ ದಿನ ಒಟ್ಟು 23 ಹುಸಿ ಬಾಂಬ್​ ಬೆದರಿಕೆ ಕರೆಗಳು ಬಂದಿದ್ದು ಎಲ್ಲರನ್ನೂ ಆತಂಕಕ್ಕೆ ದೂಡಿದೆ.
/newsfirstlive-kannada/media/post_attachments/wp-content/uploads/2024/10/BOMB-THREATS-1.jpg)
ಇದನ್ನೂ ಓದಿ:ಐಫೋನ್​ ಕೊಡಿಸದ ಪೋಷಕರು.. ತನ್ನ ಮನೆಯಲ್ಲಿ ತಾನೇ ದರೋಡೆ ಮಾಡಿ ಸಿಕ್ಕಿ ಬಿದ್ದ ಮಗ!
ಹೇಳಿ ಕೇಳಿ ಇದು ದೀಪಾವಳಿ ಸೀಸನ್. ಕೊಲ್ಕಾತ್ತದಂತಹ ನಗರಗಳು ಬೇರೆಯದ್ದೇ ಹಂತದಲ್ಲಿ ಸಿದ್ಧಗೊಂಡಿರುತ್ತದೆ. ಸದ್ಯದಲ್ಲಿಯೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಕೊಲ್ಕಾತ್ತಾಗೆ ಭೇಟಿ ನೀಡಲಿದ್ದಾರೆ. ಇದೇ ಸಮಯದಲ್ಲಿ ನಗರದ ಪ್ರತಿಷ್ಠಿತ ಹೋಟೆಲ್​ಗಳು ಬಾಂಬ್ ಬೆದರಿಕೆಯ ಇ-ಮೇಲ್​ಗಳನ್ನು ಕಂಡಿವೆ. ಕೂಡಲೇ ಪೊಲೀಸರಿಗೆ ಕರೆ ಮಾಡಿ ಇಡೀ ಹೋಟೆಲ್ ಮೂಲೆ ಮೂಲೆ ಜಾಲಾಡಿದರು ಏನೂ ಕೂಡ ಪತ್ತೆಯಾಗಿಲ್ಲ. ಕೊಲ್ಕತ್ತಾದ ಕನಿಷ್ಠ 10 ಸ್ಟಾರ್ ಹೋಟೆಲ್​ಗಳಿಗೆ ಈ ರೀತಿಯಾದ ಹುಸಿ ಬಾಂಬ್ ಬೆದರಿಕೆ ಕರೆಗಳು ಬಂದಿವೆ.
ಇದನ್ನೂ ಓದಿ: ಒಂದು ಕೂಲ್ ಡ್ರಿಂಕ್ಸ್‌ಗೆ ₹16,000.. ಕಾಫಿ ಕುಡಿಯೋಣ ಅಂತ ಕರೆದಿದ್ದ ಹುಡುಗಿ ಬಲೆಗೆ ಬಿದ್ದ ಹುಡುಗರು ಶಾಕ್!
ಈ ಬಗ್ಗೆ ಕೊಲ್ಕತ್ತಾ ಪೊಲೀಸರು ಕೇಂದ್ರ ತನಿಖಾ ಸಂಸ್ಥೆಗಳಿಗೆ ಇತ್ತೀಚೆಗೆ ಬಂದ ಹುಸಿ ಬಾಂಬ್ ಕರೆಗಳ ಪೂರ್ಣ ವಿವರ ನೀಡಿ ಎಚ್ಚರಿಸಿದ್ದಾರೆ. ಉನ್ನತ ಮೂಲಗಳ ಮಾಹಿತಿ ಪ್ರಕಾರ, ಹೀಗೆ ಬರುತ್ತಿರುವ ಇ-ಮೇಲ್​ಗಳು ಗುಪ್ತನಾಮ ಹೊಂದಿರುವ ವ್ಯಕ್ತಿಗಳಿಂದ ಬರುತ್ತಿವೆ, ಹಾಗೂ ಅವು ಬಹುತೇಕ ಸುಳ್ಳೇ ಆಗಿರುತ್ತವೆ ಎಂದು ಹೇಳಲಾಗಿದೆ. ಹೋಟೆಲ್​ವೊಂದಕ್ಕೆ ಬಂದ ಇ-ಮೇಲ್​ನಲ್ಲಿ ‘ನಾನು ನಿಮ್ಮ ಹೋಟೆಲ್​ ಗ್ರೌಂಡ್​ನಲ್ಲಿ ಬಾಂಬ್ ಪ್ಲಾಂಟ್​ ಮಾಡಿದ್ದೇನೆ. ಕಪ್ಪು ಬಣ್ಣದ ಬ್ಯಾಗ್​ನಲ್ಲಿ ಬಾಂಬ್ ಇಡಲಾಗಿದೆ. ಸದ್ಯದಲ್ಲಿಯೇ ಅದು ಬ್ಲಾಸ್ಟ್ ಆಗಲಿದೆ. ನಿಮಗಿರುವ ಸಮಯ ಈಗ ಅತ್ಯಂತ ಕಡಿಮೆ‘ ಎಂದು ಬರೆಯಲಾಗಿತ್ತು ಎಂದು ಹೋಟೆಲ್ ಸಿಬ್ಬಂದಿಹೇಳಿದೆ.
ಇದೇ ರೀತಿಯಾದ ಇ-ಮೇಲ್ ಆಂಧ್ರಪ್ರದೇಶದ ತಿರುಪತಿಯ ಒಟ್ಟು ಮೂರು ಹೋಟೆಲ್​ಗಳಿವೆ ಹೋಗಿತ್ತು. ಸದ್ಯ ಬರುತ್ತಿರುವ ಇ-ಮೇಲ್​ಗಳು ಡ್ರಗ್​ ರಾಕೆಟ್​ನ ಕಿಂಗ್​​ಪಿನ್ ಆಗಿರುವ ಜಾಫರ್ ಸಾದಿಕ್​ಗೆ ಸಂಬಂಧಿಸಿವೆ ಎಂದು ಕೇಂದ್ರ ತನಿಖಾ ದಳಗಳು ಹೇಳುತ್ತಿವೆ. ಅದು ಮಾತ್ರವಲ್ಲ ಬರುವ ಇ-ಮೇಲ್​ಗಳಲ್ಲಿ ಅಫ್​ಜಲ್​ ಗುರು ಮರಳಿ ಹುಟ್ಟುತ್ತಾನೆ. ಅಲ್​ಭದ್ರ ಎಂಬೆಲ್ಲಾ ಘೋಷಣೆಗಳು ಉಲ್ಲೇಖಗೊಂಡಿವೆ ಎಂದು ಕೂಡ ಹೇಳಲಾಗುತ್ತಿದೆ. ಒಟ್ಟಾರೆ ದೇಶದ ಮೂರು ರಾಜ್ಯಗಳಲ್ಲಿ ಒಂದೇ ದಿನದಲ್ಲಿ 23 ಹುಸಿ ಬಾಂಬ್ ಕರೆಗಳು ಬಂದಿದ್ದು ಮತ್ತಷ್ಟು ಆತಂಕ ಹೆಚ್ಚಾಗಿದೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us