newsfirstkannada.com

ಮುಂಬೈ ಇಂಡಿಯನ್ಸ್​ನಲ್ಲಿ ಮತ್ತೆ ಬಿರುಕು; ರೋಹಿತ್-ಹಾರ್ದಿಕ್ ಮಧ್ಯೆ ಈಗ ಏನಾಯ್ತು..?

Share :

Published May 16, 2024 at 1:33pm

Update May 16, 2024 at 1:55pm

    ಹಾರ್ದಿಕ್ ವರ್ಸಸ್ ರೋಹಿತ್, ಮುಂಬೈ ಇಂಡಿಯನ್ಸ್​​ಗೆ ಏನಾಯ್ತು?

    ಹಾರ್ದಿಕ್ ಪಾಂಡ್ಯ ಕ್ಯಾಪ್ಟನ್ಸಿಯಿಂದ ಯಾರಿಗೆಲ್ಲ ಬೇಸರ?

    ಪಾಂಡ್ಯ ಬಗ್ಗೆ ತಂಡದ ಟಿಮ್ ಡೆವಿಡ್ ಹೇಳಿದ್ದೇನು?

ಈ ಬಾರಿಯ ಐಪಿಎಲ್​ನಲ್ಲಿ ಮುಂಬೈ ಇಂಡಿಯನ್ಸ್​​ ಮೇಲೆ ಭಾರೀ ನಿರೀಕ್ಷೆಗಳಿದ್ದವು. ಅದಕ್ಕೆ ಕಾರಣ ರೋಹಿತ್ ಶರ್ಮಾ ಅವರಿಗೆ ಕ್ಯಾಪ್ಟನ್ಸಿಯಿಂದ ದಿಢೀರ್ ಕೊಕ್ ನೀಡಿ, ಗುಜರಾತ್ ತಂಡದ ನಾಯಕರಾಗಿದ್ದ ಹಾರ್ದಿಕ್ ಪಾಂಡ್ಯರನ್ನು ಕರೆದುಕೊಂಡು ಬಂದು ಪಟ್ಟ ಕಟ್ಟಿರೋದು! ಶರ್ಮಾಗೆ ಕ್ಯಾಪ್ಟನಿಯಿಂದ ಕೊಕ್ ನೀಡ್ತಿದ್ದಂತೆ ಅಸಮಾಧಾನ ಭುಗಿಲೆದ್ದಿತ್ತು. ಒಂದಷ್ಟು ಗೊಂದಲಗಳ ನಡುವೆಯೇ ಮುಂಬೈ ಇಂಡಿಯನ್ಸ್ ಐಪಿಎಲ್ ಕದನಕ್ಕೆ ಇಳಿದಿತ್ತು. ಇದೀಗ ನಿರೀಕ್ಷೆಗಳು ಹುಸಿಯಾಗಿದ್ದು, ನಿರಾಸೆಯೊಂದಿಗೆ ಟೂರ್ನಿಗೆ ವಿದಾಯ ಹೇಳುತ್ತಿದೆ. ಈಗಾಗಲೇ ಪ್ಲೇ-ಆಫ್​ ರೇಸ್​ನಿಂದ ಹೊರ ಬಿದ್ದಿರುವ ಮುಂಬೈ ಇಂಡಿಯನ್ಸ್‌ನ ನಾಳೆ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಕೊನೆಯ ಪಂದ್ಯವನ್ನು ಆಡುತ್ತಿದೆ.

ಕ್ಯಾಂಪ್​ನಲ್ಲಿ ಎಲ್ಲವೂ ಸರಿ ಹೋಗಿದೆ ಅನ್ನುವಷ್ಟರಲ್ಲಿ ಮತ್ತೆ ಅಭಿಮಾನಿಗಳಿಗೆ ಬೇಸರದ ಸುದ್ದಿ ಸಿಕ್ಕಿದೆ. ಡ್ರೆಸ್ಸಿಂಗ್ ರೂಮ್‌ನಲ್ಲಿ ಬಿರುಕು ಮೂಡಿದೆ ಎಂಬ ವರದಿಗಳು ಮತ್ತೆ ಮುನ್ನೆಲೆಗೆ ಬಂದಿದೆ. ವರದಿಗಳ ಪ್ರಕಾರ.. ಫ್ರಾಂಚೈಸಿ ರೋಹಿತ್ ಶರ್ಮಾಗೆ ಮತ್ತೆ ಕ್ಯಾಪ್ಟನ್ಸಿ ನೀಡಲು ಮುಂಬೈ ಇಂಡಿಯನ್ಸ್ ಮುಂದಾಗಿದೆಯಂತೆ. ಆದರೆ ಮುಂಬೈ ಇಂಡಿಯನ್ಸ್​ನಲ್ಲಿರುವ ವಿದೇಶಿ ಆಟಗಾರರು ಹಾಲಿ ನಾಯಕ ಹಾರ್ದಿಕ್ ಪಾಂಡ್ಯ ಪರ ಬ್ಯಾಟ್ ಬೀಸುತ್ತಿದ್ದಾರಂತೆ.

ಇದನ್ನೂ ಓದಿ:ಆ ದಿನ ಲಕ್ಕಿ ಡೇ.. RCB ಕೈ ಹಿಡಿಯುತ್ತೆ ಅದೃಷ್ಟ.. ರಿವೇಂಜ್​ ಮ್ಯಾಚ್​ನಲ್ಲಿ ಇವರೇ ಕಿಂಗ್..!

ಮುಂಬೈ ಇಂಡಿಯನ್ಸ್‌ನ ಭಾರತದ ಆಟಗಾರರು ರೋಹಿತ್​ರನ್ನು ಮತ್ತೆ ನಾಯಕನನ್ನಾಗಿ ಮಾಡುವ ಪರವಾಗಿದ್ದಾರೆ. ವಿದೇಶಿ ಆಟಗಾರರು ಹಾರ್ದಿಕ್ ಅವರೊಂದಿಗೆ ಇದ್ದಾರೆ. ಹಾರ್ದಿಕ್ ಜತೆ ಆಡುವ ವಿದೇಶಿ ಆಟಗಾರರಿಗೆ ಯಾವುದೇ ತೊಂದರೆ ಇಲ್ಲ. ಆಸ್ಟ್ರೇಲಿಯಾದ ಟಿಮ್ ಡೇವಿಡ್, ಹಾರ್ದಿಕ್ ತಂಡದ ಬಲಿಷ್ಠ ಅಡಿಪಾಯ ಎಂದು ಬಣ್ಣಿಸಿದ್ದಾರೆ.

ಈ ಬಾರಿಯ ಐಪಿಎಲ್‌ನಲ್ಲಿ ರೋಹಿತ್ ಮತ್ತು ಹಾರ್ದಿಕ್ ಅಪರೂಪಕ್ಕೊಮ್ಮೆ ನೆಟ್ ಪ್ರಾಕ್ಟೀಸ್ ಮಾಡಿದ್ದಾರೆ ಎಂದು ವರದಿಗಳು ಹೇಳುತ್ತಿವೆ. ಮತ್ತೊಂದು ಕಡೆ ಹಾರ್ದಿಕ್ ಮತ್ತು ರೋಹಿತ್ ಇಬ್ಬರ ಫಾರ್ಮ್ ಕೂಡ ಚರ್ಚೆಯ ವಿಚಾರವಾಗಿದೆ. ಈ ಋತುವಿನಲ್ಲಿ ಹಾರ್ದಿಕ್ ಬ್ಯಾಟ್ ಮೌನವಾಗಿದೆ. ಪಂದ್ಯಾವಳಿಯ ದ್ವಿತೀಯಾರ್ಧದಲ್ಲಿ ರೋಹಿತ್ ಫಾರ್ಮ್ ಕಳೆದುಕೊಂಡಿದ್ದಾರೆ. ಇಬ್ಬರ ನಡುವಿನ ಸಂಬಂಧವು ಸುಧಾರಿಸದಿದ್ದರೆ ಮುಂದಿನ ವರ್ಷ ನಡೆಯಲಿರುವ ಮೆಗಾ ಹರಾಜಿನಲ್ಲಿ ಭಾರೀ ದೊಡ್ಡ ಬದಲಾವಣೆಗಳು ನಡೆಯಬಹುದು.

ಇದನ್ನೂ ಓದಿ: CSK vs RCB ನಡುವಿನ ಮ್ಯಾಚ್​ಗೆ ಮಳೆ ಬಂದರೆ ಏನಾಗುತ್ತದೆ..?

ಹಾರ್ದಿಕ್ ಪಾಂಡ್ಯ ಈ ಋತುವಿನಲ್ಲಿ 13 ಪಂದ್ಯಗಳನ್ನಾಡಿದ್ದಾರೆ. 144.93 ಸ್ಟ್ರೈಕ್ ರೇಟ್‌ನಲ್ಲಿ ಕೇವಲ 200 ರನ್ ಗಳಿಸಿದ್ದಾರೆ. ಒಂದೇ ಒಂದು ಅರ್ಧ ಶತಕ, ಶತಕ ಬಾರಿಸಿಲ್ಲ. ರೋಹಿತ್ ಶರ್ಮಾ ಕೂಡ 13 ಪಂದ್ಯಗಳನ್ನು ಆಡಿದ್ದಾರೆ. 145.42 ಸ್ಟ್ರೈಕ್ ರೇಟ್‌ನಲ್ಲಿ 349 ರನ್ ಗಳಿಸಿದ್ದಾರೆ. ಒಂದೇ ಒಂದು ಅರ್ಧಶತಕ ಗಳಿಸಿಲ್ಲ. ಒಂದು ಶತಕ ಸಿಡಿಸಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಮುಂಬೈ ಇಂಡಿಯನ್ಸ್​ನಲ್ಲಿ ಮತ್ತೆ ಬಿರುಕು; ರೋಹಿತ್-ಹಾರ್ದಿಕ್ ಮಧ್ಯೆ ಈಗ ಏನಾಯ್ತು..?

https://newsfirstlive.com/wp-content/uploads/2024/03/PANDYA-2.jpg

Load More