newsfirstkannada.com

VIDEO: ದುಬೈನಲ್ಲಿ ಮತ್ತೆ ಮಳೆರಾಯನ ಆರ್ಭಟ; ವಿಮಾನ ಸಂಚಾರ ಅಸ್ತವ್ಯಸ್ತ

Share :

Published May 2, 2024 at 5:59pm

Update May 2, 2024 at 6:00pm

  ಯುಎಇ ನಿವಾಸಿಗಳಿಗೆ ಹವಾಮಾನ ಇಲಾಖೆಯಿಂದ ಎಚ್ಚರಿಕೆ ಸಂದೇಶ

  ಎರಡು ವಾರಗಳ ಹಿಂದೆ ದುಬೈಯಲ್ಲಿ ಧಾರಾಕಾರವಾಗಿ ಮಳೆ ಸುರಿದಿತ್ತು

  ಭೀಕರ ಮಳೆಯಿಂದ ದುಬೈ ಸಿಟಿಯಲ್ಲಿ ಮತ್ತೆ ಪ್ರವಾಹದ ಪರಿಸ್ಥಿತಿ ನಿರ್ಮಾಣ

ದುಬೈ: ಎರಡು ವಾರಗಳ ಹಿಂದೆ UAE ದುಬೈಯಲ್ಲಿ ಧಾರಾಕಾರ ಮಳೆಯಾಗಿತ್ತು. ಆ ರಣ ಭೀಕರ ಮಳೆಯಿಂದ ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗಿತ್ತು. ಹೀಗಾಗಿ ಅಲ್ಲಿನ ಜನಜೀವನ ಅಸ್ತವ್ಯಸ್ಥಗೊಂಡಿತ್ತು. ನೋಡ ನೋಡುತ್ತಿದ್ದಂತೆ ಮಳೆ ದೊಡ್ಡ ಅವಾಂತರವನ್ನೇ ಸೃಷ್ಟಿಸಿತ್ತು.

ಇದನ್ನೂ ಓದಿ: 24 ಗಂಟೆಯಲ್ಲಿ ದಬದಬ ಸುರಿದ 1.5 ವರ್ಷದ ಮಳೆ.. ವರುಣಾಘಾತಕ್ಕೆ ದುಬೈ ತತ್ತರ; ಪರಿಸ್ಥಿತಿ ಹೇಗಿದೆ ನೋಡಿ!

ಎರಡು ವಾರಗಳ ನಂತರ ಯುನೈಟೆಡ್‌ ಅರಬ್‌ ಎಮಿರೇಟ್ಸ್‌ನಾದ್ಯಂತ ಮತ್ತೆ ಧಾರಾಕಾರ ಮಳೆಯಾಗುತ್ತಿದೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಂಚಾರ ಸ್ಥಗಿತಗೊಂಡಿದ್ದು, ಹಲವಾರು ವಿಮಾನಗಳನ್ನು ರದ್ದುಗೊಳಿಸಲಾಗಿದೆ.

ಹೌದು, ಗುರುವಾರ ಮುಂಜಾನೆ 3 ಗಂಟೆ ಸುಮಾರಿಗೆ ದುಬೈನಲ್ಲಿ ರಣಭೀಕರ ಗಾಳಿ, ಗುಡುಗು ಸಹಿತ ಮಿಂಚು ಕಾಣಿಸಿಕೊಂಡಿತ್ತು. ಹೀಗಾಗಿ ಒಂದು ಗಂಟೆಯ ನಂತರ, ದೇಶದ ಹವಾಮಾನ ಇಲಾಖೆಯು ಅಲರ್ಟ್ ಅನ್ನು ನೀಡಿದೆ. ಮೇ 3ರವರೆಗೆ ಭಾರೀ ಮಳೆಯಾಗಲಿದೆ. ಹೀಗಾಗಿ ಅಲ್ಲಿನ ನಿವಾಸಿಗಳಿಗೆ ಸುರಕ್ಷತಾ ಕ್ರಮಗಳನ್ನು ಅನುಸರಿಸಿ. ಜೊತೆಗೆ ವಿಮಾನಗಳಲ್ಲಿ ಪ್ರಯಾಣಿಸುವ ಭಾರತೀಯರಿಗೆ ಯುಎಇಯಲ್ಲಿರುವ ಭಾರತೀಯ ರಾಯಭಾರ ಕಚೇರಿ ಸೂಚನೆಯೊಂದನ್ನು ನೀಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

VIDEO: ದುಬೈನಲ್ಲಿ ಮತ್ತೆ ಮಳೆರಾಯನ ಆರ್ಭಟ; ವಿಮಾನ ಸಂಚಾರ ಅಸ್ತವ್ಯಸ್ತ

https://newsfirstlive.com/wp-content/uploads/2024/05/Dubai-Again-Rain.jpg

Load More