newsfirstkannada.com

24 ಗಂಟೆಯಲ್ಲಿ ದಬದಬ ಸುರಿದ 1.5 ವರ್ಷದ ಮಳೆ.. ವರುಣಾಘಾತಕ್ಕೆ ದುಬೈ ತತ್ತರ; ಪರಿಸ್ಥಿತಿ ಹೇಗಿದೆ ನೋಡಿ!

Share :

Published April 17, 2024 at 4:04pm

Update April 17, 2024 at 4:08pm

  ವಿಶ್ವದ ಅತ್ಯಂತ ಜನನಿಬಿಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನೀರು

  ಕೆಲ ದಿನಗಳಿಂದ ಸುರಿಯುತ್ತಿರೋ ಧಾರಾಕಾರವಾಗಿ ಮಳೆಗೆ ಜನ ತತ್ತರ

  ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೇ ಭೀಕರ ಮಳೆಯ ವಿಡಿಯೋ

ದುಬೈ: ಕಳೆದ ಕೆಲ ದಿನಗಳಿಂದ ದುಬೈಯಲ್ಲಿ ಧಾರಾಕಾರವಾಗಿ ಮಳೆಯಾಗುತ್ತಿದೆ. ಈ ರಣ ಭೀಕರ ಮಳೆಯಿಂದ ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಅಲ್ಲಿನ ಜನಜೀವನ ಅಸ್ತವ್ಯಸ್ಥಗೊಂಡಿದೆ.

ಹೌದು, ಧಾರಾಕಾರವಾಗಿ ಸುರಿದ ಭಾರೀ ಮಳೆಯಿಂದಾಗಿ ಜನನಿಬಿಡ ಪ್ರದೇಶವಾಗಿರೋ ದುಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ನೀರಿನಿಂದ ತುಂಬಿ ನದಿಯಂತೆ ಆಗಿದೆ. ಹೀಗಾಗಿ ಏರ್​ಪೋರ್ಟ್​ಗೆ ಬರುವ ಸಾಕಷ್ಟು ವಿಮಾನಗಳ ಮಾರ್ಗ ಬದಲಾವಣೆ ಮಾಡಲಾಗಿದೆ.

ಇದನ್ನೂ ಓದಿ: ಆ್ಯಪಲ್​ ಕಂಪನಿಯನ್ನು ಹಿಂದಿಕ್ಕಿದ ಸ್ಯಾಮ್​ಸಂಗ್​! ಜಾಗತಿಕ ಮಟ್ಟದಲ್ಲಿ ಅಗ್ರಸ್ಥಾನಕ್ಕೇರಿದ ಸೌತ್​ ಕೊರಿಯಾ ಕಂಪನಿ

ದುಬೈ ನಿಲ್ದಾಣದಲ್ಲಿ ವಿಮಾನವೊಂದು ಪ್ರವಾಹದ ನೀರಿನ ನಡುವೆ ಸಾಗುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದರ ಜೊತೆಗೆ ಮನೆಗಳ ಮುಂದೆ ನಿಲ್ಲಿಸಿದ್ದ ಕಾರುಗಳು ನೀರಿನಲ್ಲಿ ತೇಲಿ ಹೋಗುತ್ತಿವೆ. ಮಳೆಯ ಆರ್ಭಟಕ್ಕೆ ಹಲವು ಮನೆಗಳಿಗೆ ನೀರು ನುಗ್ಗಿದೆ.

ಇದನ್ನೂ ಓದಿ: ಪಂಚಭೂತಗಳಲ್ಲಿ ಲೀನರಾದ ಪ್ರಚಂಡ ಕುಳ್ಳ.. ದ್ವಾರಕೀಶ್‌ಗೆ ಸ್ಯಾಂಡಲ್‌ವುಡ್‌ ನಟರಿಂದ ಕಣ್ಣೀರ ವಿದಾಯ

ಇದಲ್ಲದೆ ಮೆಟ್ರೋ ನಿಲ್ದಾಣ, ವಿಮಾನ ನಿಲ್ದಾಣ, ಮಾಲ್​​ಗಳಲ್ಲಿಯೂ ಮಳೆ ನೀರು ತುಂಬಿಕೊಂಡಿದೆ. ಪರಿಣಾಮ ಅಲ್ಲಿನ ಜನರು ಓಡಾಡಲು ಆಗದ ಪರಿಸ್ಥಿತಿ ನಿರ್ಮಾಣಗೊಂಡಿದೆ. ಹೀಗಾಗಿ ಕೆಲವರು ಹ್ಯಾಂಡ್ ಟ್ರಾಲಿಯಲ್ಲಿ ಹೋಗುತ್ತಿರುವ ವಿಡಿಯೋಗಳು ಸಿಕ್ಕಾಪಟ್ಟೆ ವೈರಲ್​ ಆಗುತ್ತಿವೆ.

ಇನ್ನು, ಮಂಗಳವಾರದಂದು ಕೇವಲ 24 ಗಂಟೆಗಳಲ್ಲಿ 160 ಮಿಮೀ ಮಳೆಯಾಗಿದ್ದು ಇದು ದಾಖಲೆಯ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಹೀಗಾಗಿ ರಣಭೀಕರ ಮಳೆಯಲ್ಲಿ ಸಿಲುಕಿಕೊಂಡಿದ್ದ ಜನರ ರಕ್ಷಣೆಗಾಗಿ ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿ ದೌಡಾಯಿಸಿ ಸಹಾಯಕ್ಕೆ ನಿಂತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

24 ಗಂಟೆಯಲ್ಲಿ ದಬದಬ ಸುರಿದ 1.5 ವರ್ಷದ ಮಳೆ.. ವರುಣಾಘಾತಕ್ಕೆ ದುಬೈ ತತ್ತರ; ಪರಿಸ್ಥಿತಿ ಹೇಗಿದೆ ನೋಡಿ!

https://newsfirstlive.com/wp-content/uploads/2024/04/rain9.jpg

Load More