newsfirstkannada.com

ಆ್ಯಪಲ್​ ಕಂಪನಿಯನ್ನು ಹಿಂದಿಕ್ಕಿದ ಸ್ಯಾಮ್​ಸಂಗ್​! ಜಾಗತಿಕ ಮಟ್ಟದಲ್ಲಿ ಅಗ್ರಸ್ಥಾನಕ್ಕೇರಿದ ಸೌತ್​ ಕೊರಿಯಾ ಕಂಪನಿ

Share :

Published April 17, 2024 at 2:47pm

    ಆ್ಯಪಲ್​ ಐಫೋನನ್ನು ಹಿಂದಿಕ್ಕಿದ ಸ್ಯಾಮ್​ಸಂಗ್​

    289.4 ಮಿಲಿಯನ್​ ಯುನಿಟ್​ಗಳಿಗೆ ಏರಿಕೆ ಕಂಡಿದೆ ಸ್ಯಾಮ್​ಸಂಗ್​

    2023ರಲ್ಲಿ ಆ್ಯಪಲ್​ ಅಗ್ರಸ್ಥಾನ.. 2024ರಲ್ಲಿ ಸ್ಯಾಮ್​​ಸಂಗ್​ಗೆ ಸ್ಥಾನ

ಸೌತ್​ ಕೊರಿಯಾ ಮೂಲದ ಸ್ಯಾಮ್​ಸಂಗ್​ ಕಂಪನಿ ಜಾಗತಿಕ ಮಾರುಕಟ್ಟೆಯಲ್ಲಿ ಅಗ್ರಸ್ಥಾನ ಪಡೆದುಕೊಂಡಿದೆ. 2024ರ ಮೊದಲ ತ್ರೈಮಾಸಿಕದಲ್ಲಿ ಜಾಗತಿಕ ಸ್ಮಾರ್ಟ್​ಫೋನ್​ ಸಾಗಣಿಕೆಯಲ್ಲಿ ವರ್ಷದಿಂದ ವರ್ಷಕ್ಕೆ ಶೇಕಡಾ 7.8ರಷ್ಟು ಅಂದರೆ 289.4 ಮಿಲಿಯನ್​ ಯುನಿಟ್​ಗಳಿಗೆ ಏರಿಕೆ ಕಂಡಿದೆ.

ಜಾಗತಿಕ ಸಂಶೋಧನಾ ಸಂಸ್ಥೆ ಐಡಿಸಿ ಈ ಕುರಿತಾಗಿ ಪ್ರಾಥಮಿಕ ಮಾಹಿತಿ ಹೊರಹಾಕಿದೆ. ಅದರಂತೆ ಕಳೆದ ತ್ರೈಮಾಸಿಕದಲ್ಲಿ ಸ್ಯಾಮ್​ಸಂಗ್​ 60.1 ಮಿಲಿಯನ್​​ ಸ್ಮಾರ್ಟ್​ಫೋನ್​ಗಳನ್ನು ಮತ್ತು ಆ್ಯಪಲ್ 50.1 ಮಿಲಿಯನ್​​ ಐಫೊನ್​ಗಳನ್ನು ಮಾರಾಟ ಮಾಡಿದೆ.

2023ರಲ್ಲಿ ಆ್ಯಪಲ್ ತನ್ನ ಮಾರುಕಟ್ಟೆಯಲ್ಲಿ​ ಅಗ್ರಸ್ಥಾನದಲ್ಲಿ. ಆದರೆ ಈ ಬಾರಿ ಸ್ಯಾಮ್​​ಸಂಗ್​ ಅದನ್ನು ಸೋಲಿಸಿ ಮೊದಲ ಸ್ಥಾನ ಪಡೆದಿದೆ. ಶಿಯೋಮಿ, ಟ್ರಾನ್ಸಿಷನ್​, ಒಪ್ಪೊ ಉಳಿದ ಸ್ಥಾನದಲ್ಲಿ ಕಾಣಿಸಿಕೊಂಡಿದೆ.

ಸದ್ಯ ಎರಡು ಕಂಪನಿಗಳ ಷೇರುಗಳು ಶೇಕಡಾ 20.8 ಮತ್ತು ಶೇ.17.3 ರಷ್ಟಿದೆ. ಒಟ್ಟಿನಲ್ಲಿ ಸ್ಯಾಮ್​ಸಂಗ್​ ಅಗ್ರಸ್ಥಾನಕ್ಕಾಗಿ ಮಾರುಕಟ್ಟೆಯಲ್ಲಿ ನಾನಾ ಹೋರಾಟ ಮಾಡಿದೆ.

ಇದನ್ನೂ ಓದಿ: UPSC Exam: ಅಪ್ಪ ಇಲ್ಲ, ಸಂತೋಷ ಹೇಳಿಕೊಳ್ಳಲು ಅಮ್ಮನು ಇಲ್ಲ.. ಮೊದಲ ಪ್ರಯತ್ನದಲ್ಲೇ 2ನೇ Rank​ ಬಂದ 24ರ ಯುವಕ

ಇನ್ನು ಆ್ಯಪಲ್​ ತನ್ನ ಐಫೋನ್​ 16 ಪ್ರೋ ಮ್ಯಾಕ್ಸ್​ ಅನ್ನು ಸಿದ್ಧಪಡಿಸಿದ್ದು, ಮುಂದಿನ ದಿನಗಳಲ್ಲಿ ಪರಿಚಯಿಸಲಿದೆ. ಈಗಾಗಲೇ ನೂತನ ಐಫೋನ್​ನ ಮಾಹಿತಿಗಳು ಆನ್​ಲೈನ್​ನಲ್ಲಿ ಲೀಕ್​ ಆಗಿವೆ. ಐಫೋನ್​ 16 ಮಾದರಿ ಪರಿಚಯಿಸಿದಂತೆ ಐಫೋನ್​ 15 ಬೆಲೆಯಲ್ಲಿ ಇಳಿಕೆ ಕಾಣಲಿದೆ. ಈ ವೇಳೆ ಆ್ಯಪಲ್​ ತನ್ನ ವೇದಿಕೆಯನ್ನು ಮತ್ತೆ ಆಕ್ರಮಿಸುವ ಸಾಧ್ಯತೆ ಇದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಆ್ಯಪಲ್​ ಕಂಪನಿಯನ್ನು ಹಿಂದಿಕ್ಕಿದ ಸ್ಯಾಮ್​ಸಂಗ್​! ಜಾಗತಿಕ ಮಟ್ಟದಲ್ಲಿ ಅಗ್ರಸ್ಥಾನಕ್ಕೇರಿದ ಸೌತ್​ ಕೊರಿಯಾ ಕಂಪನಿ

https://newsfirstlive.com/wp-content/uploads/2024/04/Samsung.jpg

Load More