Advertisment

ಕನ್ನಡಿಗರಿಗೆ ಗುಡ್​​ನ್ಯೂಸ್​​; ತಿರುಪತಿ ಲಡ್ಡು ವಿಚಾರದಲ್ಲಿ ಒಂದೊಳ್ಳೆ ಸುದ್ದಿ

author-image
Veena Gangani
Updated On
ಕನ್ನಡಿಗರಿಗೆ ಗುಡ್​​ನ್ಯೂಸ್​​; ತಿರುಪತಿ ಲಡ್ಡು ವಿಚಾರದಲ್ಲಿ ಒಂದೊಳ್ಳೆ ಸುದ್ದಿ
Advertisment
  • ತಿರುಪತಿ ಲಡ್ಡುಗೂ ಕರ್ನಾಟಕದ ತುಪ್ಪಕ್ಕೂ ಅವಿನಾಭಾವ ಸಂಬಂಧ
  • ಹಲವು ವರ್ಷದ ಬಳಿಕ ತಿರುಪತಿ ಲಡ್ಡುಗೆ ನಂದಿನಿ ತುಪ್ಪ ಬಳಕೆ ಶುರು
  • ಬೇರೆ ತುಪ್ಪ ಬಳಸಿದ್ದರಿಂದ ತಿರುಪತಿ ಲಡ್ಡು ಗುಣಮಟ್ಟದ ಬಗ್ಗೆ ಟೀಕೆ

ತಿರುಮಲ ಲಡ್ಡು ಪ್ರಸಾದ ತಯಾರಿಗಾಗಿ ಕರ್ನಾಟಕದ ನಂದಿನಿ ಬ್ರಾಂಡ್ ತುಪ್ಪದ ಪೂರೈಕೆ ಪುನರಾರಂಭಗೊಂಡಿದೆ. 350 ಟನ್ ತುಪ್ಪ ಪೂರೈಸುವಂತೆ ಟಿಟಿಡಿ ಮನವಿ ಮೇರೆಗೆ ಕರ್ನಾಟಕದ ತುಪ್ಪ ಮತ್ತೆ ತಿಮ್ಮಪ್ಪನನ್ನು ಸೇರುತ್ತಿದೆ. ವರ್ಷದ ಬಳಿಕ ಟಿಟಿಡಿ ಅಧಿಕೃತವಾಗಿ ತಿರುಪತಿ ಲಡ್ಡು ತಯಾರಿಗೆ ನಂದಿನಿ ತುಪ್ಪದ ಬಳಕೆಯನ್ನ ಮರುಆರಂಭಿಸಿದೆ.

Advertisment

ಇದನ್ನೂ ಓದಿ:61 ಅವಲಕ್ಕಿ ಮೇಲೆ ರಾಷ್ಟ್ರಗೀತೆ ಬರೆದು ದಾಖಲೆ ಬರೆದ ಕನ್ನಡದ ಕುವರಿ; ರೈತನ ಮಗಳಿಂದ ವಿಶಿಷ್ಟ ಸಾಧನೆ!

publive-image

ವಿಶ್ವ ಪ್ರಸಿದ್ಧ ಭಕ್ತರಿಗೆ ತಿರುಮಲ ತಿರುಪತಿ ಪ್ರಸಾದ ಲಡ್ಡು ಅಂದ್ರೆ ಅತ್ಯಂತ ಫೇವರೆಟ್. ಲಡ್ಡುಗೂ ಕರ್ನಾಟಕದ ತುಪ್ಪಕ್ಕೂ ಅವಿನಾಭಾವ ಸಂಬಂಧ ಇದೆ. ಯಾಕಂದ್ರೆ ತಿಮ್ಮಪ್ಪನ ಲಡ್ಡುವಿನ ರುಚಿ, ಪರಿಮಳ ಹಾಗೂ ಗುಣಮಟ್ಟ ಹೆಚ್ಚಾಗುವಲ್ಲಿ ನಮ್ಮ ನಂದಿನಿ ತುಪ್ಪದ ಪಾತ್ರವೂ ಪ್ರಮುಖ. ಆದ್ರೆ ಅದೇನಾಯ್ತೋ ಏನೋ ಟಿಟಿಡಿ ಆಗಾಗ ನಂದಿನಿ ತುಪ್ಪವನ್ನು ಖರೀದಿಸುವುದನ್ನು ನಿಲ್ಲಿಸಿ ಭಕ್ತರ ಅಸಮಾಧಾನಕ್ಕೆ ಕಾರಣವಾಗ್ತಿತ್ತು. ಬೇರೆ ತುಪ್ಪ ಬಳಸಿದ್ದರಿಂದ ಲಡ್ಡು ಪ್ರಸಾದದ ಗುಣಮಟ್ಟದ ಬಗ್ಗೆ ಭಕ್ತರಿಂದ ಟೀಕೆಗಳು ಕೇಳಿಬಂದಿದ್ದವು. ಈ ಬೆನ್ನಲ್ಲೇ ಎಚ್ಚೆತ್ತ ಟಿಟಿಡಿ ಮತ್ತೆ ನಂದಿನಿ ತುಪ್ಪದ ಮೊರೆ ಹೋಗಿದೆ. ಟಿಟಿಡಿ ತಿರುಮಲ ತಿಮ್ಮಪ್ಪನ ಭಕ್ತರು ಅತ್ಯಂತ ಪ್ರೀತಿಯಿಂದ ಸ್ವೀಕರಿಸುವ ಲಡ್ಡು ಪ್ರಸಾದಕ್ಕೆ ಹಿಂದಿನ ವೈಭವ ಮರಳಿ ತರಲು ತನ್ನ ಪ್ರಯತ್ನ ಮುಂದುವರೆಸಿದೆ. ಆಂಧ್ರದಲ್ಲಿ ಸಮ್ಮಿಶ್ರ ಸರ್ಕಾರ ರಚನೆಯಾದ ನಂತರ ಶ್ಯಾಮಲಾ ರಾವ್​ರನ್ನ ಟಿಟಿಡಿ ಇಒ ಆಗಿ ಸಿಎಂ ಚಂದ್ರಬಾಬು ನೇಮಿಸಿದ್ದರು. ಲಡ್ಡು ಪ್ರಸಾದ ಗುಣಮಟ್ಟ ಹೆಚ್ಚಿಸಲು ಇವ್ರು ಗಮನಹರಿಸಿದ್ದಾರೆ.

ಇದನ್ನೂ ಓದಿ: ತಿರುಪತಿ ತಿಮ್ಮಪ್ಪನ ಲಡ್ಡು ಬೇಕಂದ್ರೆ ಈ​ ಕಾರ್ಡ್​ ಬೇಕೇ ಬೇಕು; TTD ಅಧಿಕಾರಿ ಹೇಳಿದ್ದೇನು?

Advertisment

publive-image

ರುಚಿ ವಾಸನೆ ಇಲ್ಲದ ತಪ್ಪದಿಂದ ಲಡ್ಡು ಪ್ರಸಾದ ತಯಾರಿಸಲು ಬಳಸುತ್ತಿದ್ದಾರೆ ಎಂಬ ದೂರುಗಳು ಬಂದಿದ್ವು. ಇದರಿಂದಾಗಿ ಲಡ್ಡು ರುಚಿ ಕೂಡ ಬಿದ್ದೋಗಿದೆ. ಮುಂದೆ ಇದ್ದಂತೆ ಇಲ್ಲ ಎಂಬು ದೂರುಗಳು ಸಹ ಕೇಳಿ ಬಂದಿತ್ತು. ಕರ್ನಾಟಕ ಮಿಲ್ಕ್​ ಫೆಡರೇಶನ್ ಅವರದ್ದು ಒಳ್ಳೆ ಗುಣಮಟ್ಟವಿರುವ ಬ್ರ್ಯಾಂಡ್​ ಅನ್ನೋ ವಿಚಾರ ಎಲ್ಲರಿಗೂ ಗೊತ್ತಿದೆ. ಖ್ಯಾತಿ ಪಡೆದ ಬಗ್ಗೆನೂ ಗೊತ್ತಿದೆ. ಈ ಟೆಂಡರ್​ನಲ್ಲಿ ಏನಿದೆ ಅಂದ್ರೆ ಕೆಲ ಬ್ರ್ಯಾಂಡ್​ಗಳು ಬಂದಿದ್ವು. ಅದರಲ್ಲಿ ನಂದಿನಿಯವರು ಸರಬರಾಜು ಮಾಡ್ತಿದ್ರು.

ಶ್ಯಾಮಲಾ ರಾವ್, ಟಿಟಿಡಿ ಇಒ

ಅಂದಾಗೆ ಶ್ರೀವಾರಿ ಲಡ್ಡುಗಳ ಗುಣಮಟ್ಟ ಮತ್ತು ಪರಿಮಳದ ಕೊರತೆಗೆ ತುಪ್ಪದಲ್ಲಿ ಗುಣಮಟ್ಟದ ಕೊರತೆಯೇ ಪ್ರಮುಖ ಕಾರಣ ಎಂದು ಕಂಡುಬಂದಿದೆ. ಇದಕ್ಕಾಗಿ ಕ್ರಮ ಕೈಗೊಂಡ ಟಿಟಿಡಿ ಶ್ರೀವಾರಿ ಲಡ್ಡು ಪ್ರಸಾದಕ್ಕೆ ಕರ್ನಾಟಕ ಸರ್ಕಾರದ ಬ್ರಾಂಡ್ ಆದ ನಂದಿನಿ ತುಪ್ಪದ ಬಳಕೆಯನ್ನ ಮತ್ತೆ ಆರಂಭಿಸಿದೆ. ಟ್ಯಾಂಕರ್ ಮೂಲಕ ನಂದಿನಿ ತುಪ್ಪವನ್ನ ತಿರುಪತಿ ತಿರುಮಲಕ್ಕೆ ಸಾಗಿಸಲು ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದ್ದಾರೆ. ಟಿಟಿಡಿ ಅಧಿಕಾರಿಗಳು ಇತ್ತೀಚೆಗೆ ಕರ್ನಾಟಕ ಹಾಲು ಒಕ್ಕೂಟ ಜೊತೆ ಸಮಾಲೋಚನೆ ನಡೆಸಿದ್ದರು.

Advertisment


">September 4, 2024

ಇದನ್ನೂ ಓದಿ: ಬಿಗ್​ಬಾಸ್​ ಬೆಡಗಿ ಸಂಗೀತಾ ಶೃಂಗೇರಿಗೆ ಒಲಿದ ಅವಾರ್ಡ್; ಅನುಬಂಧದಲ್ಲಿ ಗಿಟ್ಟಿಸಿಕೊಂಡ ಬಿರುದೇನು?

publive-image

ಪ್ರತಿ ಕೆಜಿಗೆ 470 ರೂಪಾಯಿಯಂತೆ 350 ಟನ್ ತುಪ್ಪ ಪೂರೈಕೆಗೆ ಟೆಂಡರ್ ಅಂತಿಮಗೊಳಿಸಲಾಗಿದೆ. ಎರಡು ಟ್ಯಾಂಕರ್‌ಗಳಲ್ಲಿ ಮೂರು ದಿನಗಳ ಹಿಂದೆ 20 ಸಾವಿರ ಕೆಜಿ ತುಪ್ಪ ತಿರುಮಲ ತಲುಪಿದೆ. ತುಪ್ಪದ ಮಾದರಿಗಳನ್ನು ಪರೀಕ್ಷೆಗಾಗಿ ಟಿಟಿಡಿ ಲ್ಯಾಬ್‌ಗೆ ಕಳುಹಿಸಲಾಗಿದೆ. ಲಡ್ಡು ಮತ್ತು ಇತರ ಪ್ರಸಾದಗಳನ್ನು ತಯಾರಿಸಲು ಟಿಟಿಡಿ ದಿನಕ್ಕೆ 10,000 ಕೆಜಿ ತುಪ್ಪವನ್ನು ಬಳಸುತ್ತಿದೆ. ಪ್ರಸ್ತುತ ಯುಪಿಯ ಆಲ್ಫಾ ಎಂಬ ಕಂಪನಿಯು ಟಿಟಿಡಿಗೆ ಅದೇ ಬೆಲೆಗೆ ತುಪ್ಪವನ್ನು ಪೂರೈಸುತ್ತಿದೆ. ಈ ಯುಪಿ ಕಂಪನಿಯನ್ನ ಹಿಂದಿಕ್ಕಿ ತನ್ನ ಸ್ವಚ್ಛ ಗುಣಮಟ್ಟದಿಂದ ನಂದಿನಿ ಬ್ರ್ಯಾಂಡ್ ಮಟ್ಟವನ್ನ ಹೆಚ್ಚಿಸಿಕೊಂಡಿದೆ. ಈ ಮೂಲಕ ಮತ್ತೆ ತಿಮ್ಮಪ್ಪನ ಭಕ್ತರು ನಂದಿನಿ ತುಪ್ಪದಲ್ಲಿ ಮಾಡಿದ ಲಡ್ಡು ಪ್ರಸಾದವನ್ನು ಸವಿಯಲಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment