ಲಡ್ಡುಗಳನ್ನ ತೆಗೆದುಕೊಳ್ಳಲು ಹೊಸ ನಿಯಮ ಜಾರಿ ಯಾಕೆ..?
ವಿಶ್ವವಿಖ್ಯಾತ ತಿರುಮಲ ತಿರುಪತಿ ದೇವಸ್ಥಾನದ ಲಡ್ಡುಗಳು
ತಿಮ್ಮಪ್ಪನ ಲಡ್ಡುಗಳನ್ನ ಬೇರೆ ಕಡೆ ಮಾರಾಟ ಮಾಡಲಾಗುತ್ತಿದೆ?
ಹೈದರಾಬಾದ್: ವಿಶ್ವವಿಖ್ಯಾತ ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ)ದಲ್ಲಿ ಇನ್ಮುಂದೆ ಲಡ್ಡುಗಳನ್ನು ಪಡೆಯಬೇಕೆಂದರೆ ಆಧಾರ್ ಕಾರ್ಡ್ ಅನ್ನು ಕಡ್ಡಾಯ ಮಾಡಲಾಗಿದೆ. ಟೋಕನ್ ರಹಿತ ಭಕ್ತರಿಗೆ ಲಡ್ಡುಗಳ ಮಾರಾಟಕ್ಕೆ ಆಧಾರ್ ದೃಢೀಕರಣ ಪರಿಚಯಿಸಲಾಗಿದ್ದು ಇದರಿಂದ ಕಾಳಸಂತೆಯಲ್ಲಿ ಲಡ್ಡುಗಳನ್ನು ಮಾರಾಟ ಮಾಡುತ್ತಿರುವ ಮಧ್ಯವರ್ತಿಗಳ ಹಾವಳಿ ತಪ್ಪಿಸಬಹುದು ಎಂದು ಟಿಟಿಡಿ ತಿಳಿಸಿದೆ.
ಇದನ್ನೂ ಓದಿ: ಜೈಲಲ್ಲಿ ದರ್ಶನ್ ಭೇಟಿ ಮಾಡಿದ್ದೇಕೆ? ಪೊಲೀಸರಿಗೆ ಸಿನಿಮಾ ಡೈಲಾಗ್ ಹೊಡೆದ ಚಿಕ್ಕಣ್ಣ; ಆಮೇಲೇನಾಯ್ತು?
ಟಿಟಿಡಿ ಹೆಚ್ಚುವರಿ ಕಾರ್ಯನಿರ್ವಾಹಕ ಅಧಿಕಾರಿ ಸಿ.ವೆಂಕಯ್ಯ ಚೌಧರಿ ಮಾತನಾಡಿ, ಲಡ್ಡುಗಳನ್ನು ಕೆಲವು ಮಧ್ಯವರ್ತಿಗಳು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದಾರೆ. ಇದರಿಂದ ದೇವಾಲಯಕ್ಕೆ ದಕ್ಕೆಯಾಗುತ್ತಿದೆ. ಅಲ್ಲದೇ ದೂರದ ಊರುಗಳಿಂದ ಬರುವ ವಕ್ತರಿಗೆ ಲಡ್ಡುಗಳು ಕೊರತೆಯಾಗುತ್ತವೆ. ಸಾಮಾನ್ಯ ಭಕ್ತರ ಹಿತದೃಷ್ಟಿಯಿಂದ ಆಧಾರ್ ಕಾರ್ಡ್ ದೃಢೀಕರಣ ಪರಿಚಯಿಸಲಾಗಿದೆ. ಲಡ್ಡು ವಿತರಣೆ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಹೆಚ್ಚಿಸಲು ಇದನ್ನು ಜಾರಿ ಮಾಡಲಾಗಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: 8 ಗಂಡಂದಿರ ಮುದ್ದಿನ ಹೆಂಡತಿ.. 6 ತಿಂಗಳಿಗೆ 1 ಮದುವೆಯಾಗಿ ನಾಟಕ; ಊಸರವಳ್ಳಿ ಬಣ್ಣ ಬಯಲಾಗಿದ್ದು ಹೇಗೆ?
ದರ್ಶನಕ್ಕೆ ಟಿಕೆಟ್ ತೆಗೆದುಕೊಳ್ಳದೇ 48 ಹಾಗೂ 62ನೇ ಕೌಂಟರ್ನಿಂದ ಬರುವ ಭಕ್ತರಿಗೆ ಇದು ಅನ್ವಯ ಆಗಲಿದೆ. ತಮ್ಮ ಆಧಾರ್ ದೃಢೀಕರಣ ಮಾಡಿ, ಒಬ್ಬ ಭಕ್ತರು 2 ಲಡ್ಡುಗಳನ್ನು ಪಡೆದುಕೊಳ್ಳಬಹುದು. ಹಿಂದಿನಂತೆ ಒಂದು ಲಡ್ಡು ಉಚಿತವಾಗಿ ಪಡೆದು ಹೆಚ್ಚುವರಿ ಲಡ್ಡುಗಳನ್ನು ಹಣ ಕೊಟ್ಟು ಖರೀದಿ ಮಾಡಬಹುದು. ಭಕ್ತರ ಹಿತದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಚೌಧರಿ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ