ಮದುವೆಯಾಗಿ ಆರು ತಿಂಗಳಿಗೆ ಒಬ್ಬರಂತೆ ಗಂಡಂದಿರ ಬದಲಾವಣೆ
ಮದುವೆ ಆದ್ರೆ ಸಾಕು ಅವನ ಪಾಡು ಬೇರೆ ಯಾರಿಗೂ ಬೇಡವೇ ಬೇಡ
ಯು.ಟಿ ಖಾದರ್ ಹೆಸರು ಕೂಡ ದುರ್ಬಳಕೆ ಮಾಡಿಕೊಂಡ ಆರೋಪ
ಎಂಟು ಗಂಡಂದಿರ ಮೋಸದ ಮಡದಿಯ ಮದುವೆ ಮಸಲತ್ತು ಈಗ ಬಟಾ ಬಯಲಾಗಿದೆ. ಆದ್ರೆ ಈಕೆ ಮದುವೆ ಅನ್ನೋದನ್ನೆ ಬ್ಯುಸಿನೆಸ್ ಮಾಡಿಕೊಂಡಿದ್ದರು ಅನ್ನೋ ದೂರು ದಾಖಲಾಗಿದೆ. ಮದುವೆಯಾಗದ ಪುರಷರನ್ನೇ ಟಾರ್ಗೆಟ್ ಮಾಡಿ ಪಂಗನಾಮ ಹಾಕ್ತಿದ್ದರು. ಬೆಂಗಳೂರು, ಶಿವಮೊಗ್ಗ, ತುಮಕೂರು ಅಂತೆಲ್ಲ ಊರು ತುಂಬಾ ಗಂಡಂದಿರನ್ನು ಮಾಡ್ಕೊಂಡಿದ್ದಳು. ಆದ್ರೆ ಮದುವೆಯಾಗದ ಪುರುಷರು ಈಕೆ ಬಲೆಗೆ ಬೀಳ್ತಿದ್ದೀಗೆ? ಮದುವೆ ಆದ ಮೇಲೆ ಈಕೆ ಮಾಡ್ತಿದ್ದ ನಾಟಕ ಎಂತಾದ್ದು? ಅವ‘ನಲ್ಲ‘ ಇವ‘ನಲ್ಲ‘ ಅಂತಿದ್ದವಳು ತಗ್ಲಾಕೊಂಡಿದ್ದು ಹೇಗೆ? ಅನ್ನೋದೇ ಇಂಟ್ರೆಸ್ಟಿಂಗ್.
ಇದನ್ನೂ ಓದಿ: 8 ಗಂಡಂದಿರಿಗೆ ಒಬ್ಬಳೇ ಮಡದಿ.. ಒಬ್ಬೊಬ್ಬರಿಗೂ ಒಂದೊಂದು ರೀತಿ ಮಕ್ಮಲ್ ಟೋಪಿ; ಅಸಲಿ ಕಹಾನಿ ಇಲ್ಲಿದೆ ನೋಡಿ!
ತಬಸುಮಾ ಕ್ಷಣಕ್ಕೊಂದು ಬಣ್ಣ ಬದಲಾಯಿಸುವ ಉಸರವಳ್ಳಿಯೇ. ಯಾಕಂದ್ರೆ ಉಸರವಳ್ಳಿ ಬಣ್ಣ ಬದಲಾಯಿಸದಂತೆ. ಈ ತಬಸುಮಾ ಗಂಡಂದಿರನ್ನ ಬದಲಾಯಿಸಿದ್ದಾಳಂತೆ. ಆದ್ರೀಗ ಈ ಉಸರವಳ್ಳಿಯ ಬಣ್ಣ ಬಯಲಾಗಿ ಹೋಗಿದೆ. ಹೊಸಪೇಟೆಯ ಮಾಜಿ ಪತಿ ಈಕೆಯ ಮುಖವಾಡವನ್ನ ಬಯಲು ಮಾಡಿದ್ದಾರೆ.
ಮದುವೆಯಾದ ಮುಸ್ಲಿಂ ಪುರುಷರೇ ಈಕೆಯ ಟಾರ್ಗೆಟ್
ತಬಸುಮ್ ಮದುವೆಯಾಗಿದ್ದ ಮುಸ್ಲಿಂ ಪುರುಷರನ್ನೆ ಟಾರ್ಗೆಟ್ ಮಾಡ್ತಿದ್ದಳು. ಅಂತವರನ್ನೇ ತನ್ನ ಬಲೆಗೆ ಹಾಕೊಂಡು ಆಮೇಲೆ ತನ್ನ ವರಸೆ ಬದಲಾಯಿಸಿಬಿಡ್ತಿದ್ದಳು. ಮದುವೆಗೂ ಮುಂಚೆ ತಾನು ತುಂಬಾ ಸೈಲೆಂಟ್ ಅಂತ ಬಿಂಬಿಸಿಕೊಳ್ತಿದ್ದಳು. ಒಮ್ಮೆ ಮದುವೆಯಾದ್ರೆ ಸಾಕು ಈಕೆ ಮದುವೆಯಾದವನ ಪಾಡು ದೇವರಿಗೆ ಗೊತ್ತು. ಯಾಕಂದ್ರೆ ಮದುವೆಯಾದ ಆರು ತಿಂಗಳಿಗೆ ಈ ಚಾಲಾಕಿ ಅಸಲಿ ಆಟ ಆರಂಭಿಸ್ತಿದ್ಳು. ಮದುವೆಯಾದ ಪುರುಷರನ್ನ ಸಂಪರ್ಕ ಮಾಡಿ ನಮ್ಮ ಮನೆಗೆ ಬನ್ನಿ ನನ್ನ ಬಳಿಯೇ ಇರಿ ಅಂತ ನಾಟಕ ಮಾಡೋದು. ಬಳಿಕ 2 ತಿಂಗಳಿಗೊಮ್ಮೆ ನನ್ನ ನನ್ನತ್ರ ಬಂದ್ರೆ ಸಾಕು ಅಂತ ಮದುವೆಗೆ ಒಪ್ಪಿಸೋದು. ಮದುವೆಯಾದ್ಮೇಲೆ ನಾನು ಗರ್ಭಿಣಿ ಅಂತೆಲ್ಲ ಸುಳ್ಳು ಕತೆ ಕಟ್ಟಿ ಹಣ ಪೀಕೋದಕ್ಕೆ ಶುರು ಮಾಡ್ತಿದ್ದಳು.
ಒಂದ್ವೇಳೆ ಈಕೆಯನ್ನ ಮದುವೆಯಾದ ಬಡಪಾಯಿ ಈಕೆ ನಾಟಕಕ್ಕೆ ಬಗ್ಗದೇ ಇದ್ರೆ. ಅವರ ಹೆಂಡತಿಗೆ ಹೇಳ್ತೀನಿ ಅಂತ ಬ್ಲಾಕ್ ಮೇಲ್ ಮಾಡ್ತಿದ್ಳಂತೆ. ಅದಕ್ಕೂ ಬಗ್ಗದೇ ಇದ್ರೆ ರೇಪ್ ಕೇಸ್ ಹಾಕ್ತೀನಿ ಅಂತ ಗಂಡಂದಿರಿಂದ ಹಣ ಪೀಕುವ ಕೆಲಸ ಮಾಡ್ತಿದ್ಲಂತೆ. ಗಲಾಟೆ ಜಗಳ ಮಾಡಿ ಕೊನೆ ರಾಜಿ ಪಂಚಾಯ್ತಿ ಮಾಡೋ ಮೂಲಕ ಬಂದಷ್ಟು ಬರಲಿ ಅಂತ ಲಕ್ಷ ಲಕ್ಷ ಹಣ ಕಿತ್ಕೊಂಡು ಮಕ್ಕರ್ ಮಾಡ್ತಿದ್ಳಂತೆ. ಹೀಗೆ ಮಕ್ಕರ್ ಮಾಡಿ ಈ ಐನಾತಿ ತಬಸುಮ ಒಂದಲ್ಲ ಎರಡಲ್ಲ ಬರೋಬ್ಬರಿ 10 ರಿಂದ 15 ಜನರಿಗೆ ಮಕ್ಮಲ್ ಟೋಪಿ ಹಾಕಿದ್ದಾಳೆ. ಮದುವೆಯಾಗಿ 6 ತಿಂಗಳಿಗೊಬ್ಬರಂತ ಗಂಡಂದಿರನ್ನ ಚೇಂಜ್ ಮಾಡಿ, ಅವರ ಬಳಿಕ ಲಕ್ಷ ಲಕ್ಷ ಹಣ ವಸೂಲಿ ಮಾಡಿರುವ ಆರೋಪ ಕೇಳಿ ಬಂದಿದೆ.
ಇದನ್ನೂ ಓದಿ: Avani Lekhara: ಚಿನ್ನದ ಪದಕ ಗೆದ್ದು ದಾಖಲೆ ಬರೆದ ಪ್ಯಾರಾ ಒಲಿಂಪಿಯನ್.. ಯಾರು ಈ ಅವನಿ ಲೇಖರ?
30 ಕೋಟಿಗೂ ಅಧಿಕ ಹಣ ಲೋನ್ ಕೊಡಿಸ್ತೀನಿ ಅಂತ ವಂಚನೆ
ಅಸಲಿಗೆ ಈ ತಬಸುಮ್ ಸಾಮಾನ್ಯ ಮಹಿಳೆಯಂತ ಅಲ್ಲಾ.. ಯಾಕಂದ್ರೆ ಈಕೆ ಜೆಡಿಎಸ್ನ ಕಾರ್ಯಕರ್ತೆ. ಜೆಡಿಎಸ್ನ ಮಹಿಳಾ ಘಟಕದ ಕಾರ್ಯದರ್ಶಿಯಾಗಿಯೂ ಕೆಲಸ ಮಾಡಿದ್ದಾಳೆ. ಇದೇ ಕಾರಣಕ್ಕೆ ಏನೋ ಈಕೆ ಬೀಸಿದ ಬಲೆಗೆ ಅಮಾಯಕರು ಬಿದ್ದು ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ದುರಂತ ಏನಂದ್ರೆ ಕರ್ನಾಟಕದ ಮೂಲೆ ಮೂಲೆಯಲ್ಲಿರುವ ಸಾವಿರಾರು ಜನರಿಗೆ ಈಕೆ ಪಂಗನಾಮ ಹಾಕಿದ್ದಾಳೆ ಎನ್ನಲಾಗಿದೆ. ಉಡುಪಿಯಲ್ಲಿ ಇಬ್ಬರನ್ನ ಮದುವೆಯಾಗಿದ್ರೆ, ಶಿವಮೊಗ್ಗ, ಬೆಂಗಳೂರು, ತುಮಕೂರು, ಹೊಸಪೇಟೆ, ಕೋಲಾರ, ಹಾವೇರಿಯಲ್ಲಿ ತಲಾ ಒಬ್ಬರನ್ನ ಬಲೆ ಹಾಕೊಂಡು ಮದುವೆಯಾಗಿದ್ದಳು. ಇದೀಗ ಈಕೆ ಮೋಸದಾಟಕ್ಕೆ ಬೇಸತ್ತು 5 ಜನ ಹೈಕೋರ್ಟ್ ಮೊರೆ ಹೋಗಿದ್ದಾರೆ. ನ್ಯಾಯಾಲಯದಲ್ಲಿ ಕೇಸ್ಗಳು ನಡೀತಾ ಇದ್ರೂ ಈಕೆ ಮೋಸದ ಮದುವೆಯನ್ನ ಮಾತ್ರ ನಿಲ್ಲಿಸಿರಲಿಲ್ಲ.
ಖತರ್ನಾಕ್ ತಬುಸುಮ್!
ಅಧಿಕೃತ ದಾಖಲೆಯ ಪ್ರಕಾರವೇ ತಬಸುಮ್ ಎಂಟು ಜನರನ್ನ ಮದುವೆಯಾಗಿದ್ದಾಳೆ. ಇನ್ನು ದಾಖಲೆ ಇಲ್ಲದೇ ಅನೇಕರನ್ನ ಮದುವೆಯಾಗಿರೋದಾಗಿ ತಬಸುಮ್ ಮುಖವಾಡವನ್ನು ಹೊಸಪೇಟೆಯ ಮಾಜಿ ಪತಿ ಜೀ ರಾಜಾಹುಸೇನ್ ಮರಳಿ ಕಳಚಿ ಹಾಕಿದ್ದಾರೆ. ತಬಸುಮ್ ಮಾಡಿದ ಮೋಸವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.
ಇದನ್ನೂ ಓದಿ: ಬಳ್ಳಾರಿಯಲ್ಲಿ ದರ್ಶನ್ ಇರಲಿರುವ ಹೈ ಸೆಕ್ಯೂರಿಟಿ ಸೆಲ್ ಹೇಗಿದೆ.. 3 ದಶಕಗಳ ಹಿಂದೆ ನಿರ್ಮಿಸಿದ ಇದರ ಇತಿಹಾಸ ಗೊತ್ತಾ?
ಮನೆ ಬಾಡಿಗೆಗೆ ತಬಸುಮ್ 25 ಸಾವಿರ ರೂ.
ಈ ರಾಜಾಹುಸೇನ್ ಕೂಡ ತಬಸುಮ್ ಹೇಳಿದ್ದ ಕಾಗಕ್ಕ ಗುಬ್ಬಕ್ಕನ ಕತೆಗೆ ಮರುಳಾಗಿ ಆಕೆಯನ್ನ ಮದುವೆಯಾಗಿದ್ದರು. ಆದ್ರೆ ಆಕೆ ಅಸಲಿ ಮುಖದ ಪರಿಚಯವಾದ ತಬಸುಮ್ಳಿಂದ ದೂರವಾಗಿದ್ರು. ರಾಜಾಹುಸೇನ್ ಮೇಲೆ ಕೇಸ್ ಕೂಡ ಹಾಕಿದ್ಳು. ಆದ್ರೀಗ ಈ ತಬಸುಮ್ ಮಾಡಿದ್ದ ವಂಚನೆಯನ್ನ ಆಕೆಯ ಮಾಜಿ ಪತಿಯೇ ಬಯಲು ಮಾಡಿದ್ದಾರೆ. ವಿಚಿತ್ರ ಏನಂದ್ರೆ ಉಡುಪಿಯಲ್ಲಿ ಈ ತಬಸುಮ್ ಐಷಾರಾಮಿ ಬಂಗಲೆಯಲ್ಲಿದ್ದಾಳಂತೆ. ಮನೆ ಬಾಡಿಗೆಯನ್ನೆ ತಬಸುಮ್ 25 ಸಾವಿರ ಕಟ್ತಿದ್ಲಂತೆ. ಮನೆ ಮುಂದೆ ಕಾರು ಬೈಕ್. 4 ಜನ ಕೆಲಸಗಾರರು ಎಲ್ಲ ಇದ್ರಂತೆ ಇದನ್ನೆಲ್ಲ ನೋಡಿದ್ದ ರಾಜಾಹುಸೇನ್ ಅಕ್ಷರಶಃ ಬೆಚ್ಚಿ ಬಿದ್ದಿದ್ರು. ಆದ್ರೆ ಯಾವಾಗ ಈ ತಬಸುಮ್ ಜಾತಕವನ್ನ ರಾಜಾಹುಸೇನ್ ಜಾಲಾಡೋದಕ್ಕೆ ಶುರು ಮಾಡಿದ್ರು. ಆಗ್ಲೇ ನೋಡಿ ಈ ಐನಾತಿ ಮಹಿಳೆಯ ಮಸಲತ್ತು ರಿವೀಲ್ ಆಗಿದೆ.
ಹೀಗೆ ಈ ಉಸರವಳ್ಳಿ 10 ರಿಂದ 15 ಜನರಿಗೆ ಮಕ್ಮಲ್ ಟೋಪಿ ಹಾಕಿದ್ದಾಳೆ. ಸದ್ಯ ತಬಸುಮ್ ವಿರುದ್ಧ ಪ್ರಕರಣ ದಾಖಲಾಗಿದ್ದುಮ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಮಳ್ಳಿ ಮಳ್ಳಿ ಮಂಚಕ್ಕೆ ಎಷ್ಟು ಕಾಲು ಅಂದ್ರೆ ಮೂರು ಮತ್ತೊಂದು ಅನ್ನೋ ಹಾಗೆ.. ಇವಳು ಕೂಡ ಮಳ್ಳಿ ಮಳ್ಳಿ ಮದುವೆ ಎಷ್ಟು ಅಂದ್ರೆ 10 ಮೇಲೆ ಇನ್ನೊಂದು ಅಂತ ಮಕ್ಮಲ್ ಟೋಪಿ ಹಾಕಿದ್ದಾಳೆ. ಇನ್ನಾದ್ರೂ ಇತ್ತ ಚಾಲಾಕಿಗಳಿಂದ ಹುಷಾರಾಗಿದ್ರೆ ಒಳ್ಳೆದು. ಸ್ವಲ್ಪ ಯಾಮಾರಿದ್ರೂ 2 ವೈಟ್ ಒಂದು ರೆಡ್ ಗ್ಯಾರಂಟಿ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ