newsfirstkannada.com

HD ರೇವಣ್ಣಗೆ ಆಘಾತದ ಮೇಲೆ ಆಘಾತ.. ಇದೀಗ ಮತ್ತೊಂದು ದೊಡ್ಡ ಬೆಳವಣಿಗೆ..!

Share :

Published May 5, 2024 at 12:11pm

Update May 5, 2024 at 12:49pm

    ರೇವಣ್ಣ ವಿರುದ್ಧ ದೂರು ನೀಡಲು ಬಂದ ಮೂವರು ಸಂತ್ರಸ್ತೆಯರು

    ಎಸ್​ಐಟಿ ಸಂಪರ್ಕದಲ್ಲಿ ಮೂವರು ಮಹಿಳೆಯರು.. ರೇವಣ್ಣಗೆ ಸಂಕಷ್ಟ ಪಕ್ಕಾ?

    ಬಂಧನದ ಬೆನ್ನಲ್ಲೇ ರೇವಣ್ಣನವರ ಮೊಬೈಲನ್ನು ಸೀಜ್ ಮಾಡಿದ ಎಸ್​ಐಟಿ ಅಧಿಕಾರಿಗಳು

ಹಾಸನ ಅಶ್ಲೀಲ ವಿಡಿಯೋ ಪ್ರಕರಣ ಮತ್ತು ಮಹಿಳೆ ಕಿಡ್ನಾಪ್​​ ಕೇಸ್​ಗೆ ಸಂಬಂಧಿಸಿದಂತೆ ಮಾಜಿ ಸಚಿವ ಎಚ್​ ಡಿ ರೇವಣ್ಣನವರ ಬಂಧನವಾಗಿದೆ. ಸದ್ಯ ಅವರನ್ನು ಎಸ್​ಐಟಿ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.

ಈಗಾಗಲೇ ರೇವಣ್ಣ ವಿರುದ್ಧ ಎರಡು ಕೇಸ್​ ದಾಖಲಾಗಿದೆ. ಸಂತ್ರಸ್ತೆಯಿಂದಲೇ ಹೊಳೆನರಸೀಪುರ ಠಾಣೆಯಲ್ಲಿ ಮೊದಲ ಕೇಸ್​ ದಾಖಲಾದ್ರೆ, ಸಂತ್ರಸ್ತೆ ಕಿಡ್ನ್ಯಾಪ್ ಮಾಡಿರೋ ಆರೋಪದಡಿ ಮೈಸೂರಿನ ಕೆ.ಆರ್​ ನಗರದಲ್ಲಿ ಎರಡನೇ ಕೇಸ್​ ದಾಖಲಾಗಿದೆ. ಇದರ ಹಿನ್ನಲೆ ತೀವ್ರ ತನಿಖೆ ನಡೆಯುತ್ತಿದೆ. ರೇವಣ್ಣ ಬಂಧನ ಬಳಿಕ ಇದೀಗ ಮತ್ತೆ ಮೂವರು ಸಂತ್ರಸ್ತೆಯರು ದೂರು ನೀಡಲು ಮುಂದೆ ಬಂದಿದ್ದಾರೆ.

ಈಗಾಗಲೇ ಮೂವರು ಸಂತ್ರಸ್ತೆಯರು ಎಸ್​ಐಟಿ ಸಂಪರ್ಕಕ್ಕೆ ಬಂದಿದ್ದಾರೆ. ಸದ್ಯ ಎಸ್ಐಟಿಯಿಂದ ಪರಿಶೀಲನೆ ನಡೆಯುತ್ತಿದೆ. ಮತ್ತೆ ಮೂರು ಪ್ರತ್ಯೇಕ‌ ಪ್ರಕರಣ ದಾಖಲಾಗುವ ಸಾಧ್ಯತೆ ಇದೆ. ಹೀಗಾಗಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣಗೆ ಮತ್ತಷ್ಟು ಸಂಕಷ್ಟ ಎದುರಾಗುವ ಸಾಧ್ಯತೆಯಿದೆ.

ಇದನ್ನೂ ಓದಿ: 100 ರೂಪಾಯಿಗೆ ಮಗು ಮಾರಾಟ.. ಮದ್ಯವ್ಯಸನಿ ತಾಯಿಯಿಂದ 4 ತಿಂಗಳ ಮಗುವಿನ ರಕ್ಷಣೆ

ರೇವಣ್ಣ ಮೊಬೈಲ್​ ಸೀಜ್​

ಇನ್ನು ಬಂಧನದ ಬೆನ್ನಲ್ಲೇ ರೇವಣ್ಣನವರ ಮೊಬೈಲನ್ನು ಸೀಜ್ ಮಾಡಲಾಗಿದೆ. ಎಸ್.ಐ.ಟಿ ಅಧಿಕಾರಿಗಳು ರೇವಣ್ಣನವರ ಮೊಬೈಲ್ ಸೀಜ್ ಮಾಡಿದ್ದಲ್ಲದೆ ಡೇಟಾ ಪರಿಶೀಲನೆ ಮಾಡಿದ್ದಾರೆ. ಮೊಬೈಲ್ ಚಾಟಿಂಗ್, ಕಾಲ್, ಸಿಡಿಆರ್ ಪರಿಶೀಲನೆಗೆ ಮುಂದಾಗಿರೋ ಎಸ್.ಐ.ಟಿ ಅಧಿಕಾರಿಗಳು ಮುಂದಾಗಿದ್ದಾರೆ. ಕಿಡ್ನಾಪ್ ಕೇಸ್ ಆಗಿರುವ ಕಾರಣದಿಂದ ಟೆಕ್ನಿಕಲ್ ಎವಿಡೆನ್ಸ್​ಗಾಗಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಇನ್ನು ಅಧಿಕಾರಿಗಳು ಮೊಬೈಲ್​ ಪರಿಶೀಲನೆ ನಡೆಸುತ್ತಿದ್ದಾರೆ. ಪೂರ್ಣ ತನಿಖೆಯ ಬಳಿಕ ಮೊಬೈಲ್​ನಲ್ಲಿ ಏನೆಲ್ಲಾ ಸಿಕ್ತು ಎಂಬ ಸಂಗತಿ ಬಹಿರಂಗಪಡಿಸಲಿದ್ದಾರೆ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

HD ರೇವಣ್ಣಗೆ ಆಘಾತದ ಮೇಲೆ ಆಘಾತ.. ಇದೀಗ ಮತ್ತೊಂದು ದೊಡ್ಡ ಬೆಳವಣಿಗೆ..!

https://newsfirstlive.com/wp-content/uploads/2024/05/Revanna-3.jpg

Load More