newsfirstkannada.com

ಚಂದನ್​, ನಿವೇದಿತಾ ವಯಸ್ಸಿನ ಅಂತರವೆಷ್ಟು? ಇಷ್ಟು ಚಿಕ್ಕ ಹುಡುಗಿ ಮದ್ವೆ ಆಗಿದ್ದೇ ದುಬಾರಿ ಆಯ್ತಾ?

Share :

Published June 7, 2024 at 6:17pm

Update June 7, 2024 at 6:19pm

  ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಕೆ ಮಾಡಿದ್ರಾ ಸ್ಟಾರ್​ ದಂಪತಿ

  ಮದುವೆ ಆಗಿ 4 ವರ್ಷಗಳ ಬಳಿಕ ಡಿವೋರ್ಸ್​ ಮಾಡಿಕೊಂಡ ಸುಂದರ ಜೋಡಿ

  ಕರುನಾಡ ಜನತೆ ಶಾಕಿಂಗ್​ ಸುದ್ದಿ ಕೊಟ್ಟ ಬಿಗ್​ಬಾಸ್ ಶೋನ​ ಮಾಜಿ ಸ್ಪರ್ಧಿಗಳು

ಸಾಮಾಜಿಕ ಜಾಲತಾಣದಲ್ಲಿ ಒಂದಲ್ಲಾ ಒಂದು ವಿಚಾರಕ್ಕೆ ಚಂದನ್​ ಶೆಟ್ಟಿ ಹಾಗೂ ನಿವೇದಿತಾ ಗೌಡ ಸುದ್ದಿಯಾಗುತ್ತಿದ್ದರು. ಆದರೆ ಇದೀಗ ಕರುನಾಡ ಜನತೆ ಶಾಕ್​ ಆಗುವಂತಹ ದೊಡ್ಡ ಸುದ್ದಿಯೊಂದು ಹೊರ ಬಿದ್ದಿದೆ. ಹೌದು, ಇಷ್ಟು ದಿನ ಅನ್ಯೋನ್ಯವಾಗಿದ್ದ ಈ ಸ್ಟಾರ್​ ಜೋಡಿಯ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದೆ.

ಇದನ್ನೂ ಓದಿ: 8 ವರ್ಷದ ತಂಗಿಯ ಕುತ್ತಿಗೆಗೆ ದುಪ್ಪಟ್ಟ ಬಿಗಿದು ಕೊಂದ ಸ್ವಂತ ಅಣ್ಣ.. ತನಿಖೆ ವೇಳೆ ಕೊಲೆ ರಹಸ್ಯ ರಿವೀಲ್..

ಚಂದನ್ ಶೆಟ್ಟಿ ಅವರು 17 ಸೆಪ್ಟೆಂಬರ್ 1989ರಲ್ಲಿ ಜನಿಸಿದ್ದರು. ಚಂದನ್​ ಶೆಟ್ಟಿಗೆ ಈಗ 34 ವರ್ಷ ವಯಸ್ಸಾಗಿದೆ. ಚಂದನ್ ಅವರು ನಿವೇದಿತಾ ಗೌಡ ಅವರಿಗಿಂತ ದೊಡ್ಡವರಾಗಿದ್ದಾರೆ. ನಿವೇದಿತಾ ಗೌಡ ಅವರು 2000 ಮೇ 17ರಂದು ಹುಟ್ಟಿದ್ದಾರೆ. ಈಗ ನಿವೇದಿತಾ ಗೌಡ ವಯಸ್ಸು 24 ವರ್ಷ. ಈ ಜೋಡಿಯ ಮಧ್ಯೆ 10 ವರ್ಷ ಅಂತರ ಇದೆ.

ಇದನ್ನೂ ಓದಿ: 6 ದಿನದ ಹಿಂದೆ ಒಟ್ಟಿಗೆ ಕಾಣಿಸಿಕೊಂಡಿದ್ದ ನಿವೇದಿತಾ, ಚಂದನ್​​.. ಡಿವೋರ್ಸ್​ಗೆ ಕಾರಣ ಇದೇನಾ?

ನಿವೇದಿತಾ ಗೌಡ ಬಿಗ್​​ಬಾಸ್, ರಾಜಾ ರಾಣಿ, ಗಿಚ್ಚಿ ಗಿಲಿಗಿಲಿ ಶೋ ಮೂಲಕ ಖ್ಯಾತಿ ಪಡೆದುಕೊಂಡಿದ್ದರು. ಚಂದನ್ ಶೆಟ್ಟಿ ಅವರ ಜೊತೆ ಮದುವೆಯಾದ ನಿವೇದಿತಾ ಗೌಡ ಅವರು ಸ್ಯಾಂಡಲ್​ವುಡ್​ನ ಕ್ಯೂಟ್ ಜೋಡಿಗಳಲ್ಲಿ ಒಬ್ಬರಾದರು. ಬಿಗ್​ಬಾಸ್ ಸೀಸನ್​ 5ರಲ್ಲಿ ಕ್ಯೂಟ್​​ ಜೋಡಿಯಾದ ಈ ಕಪಲ್ ಸಿಕ್ಕಾಪಟ್ಟೆ ಸುದ್ದಿಯಾಗಿದ್ದರು. ಬಿಗ್​ಬಾಸ್ ಶೋ ಮುಕ್ತಾಯಗೊಳ್ಳುತ್ತಿದ್ದಂತೆ 2019ರಂದು ಮೈಸೂರು ದಸರಾ ಈವೆಂಟ್‌ನಲ್ಲೇ ಬಹಿರಂಗವಾಗಿ ನಿವೇದಿತಾ ಗೌಡಗೆ ಚಂದನ್ ಶೆಟ್ಟಿ ಲವ್ ಪ್ರಪೋಸ್ ಮಾಡಿದ್ದರು.

ಈ ವಿಚಾರ ದೇಶವ್ಯಾಪಿ ಆಕ್ರೋಶಕ್ಕೆ ಕಾರಣವಾಯಿತು. ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದಲ್ಲಿ ಚಂದನ್ ಶೆಟ್ಟಿ ಸಾರ್ವಜನಿಕವಾಗಿ ನಿವೇದಿತಾ ಗೌಡಗೆ ಲವ್ ಪ್ರಪೋಸ್ ಮಾಡಿ ಸಖತ್​ ಕಾಂಟ್ರೋವರ್ಸಿ ಮಾಡಿಕೊಂಡಿದ್ದರು. ಆದರೆ ಇದಾದ ಬಳಿಕ ಈ ಇಬ್ಬರು ಬಹಳ ಅದ್ಧೂರಿಯಾಗಿ ಗುರು ಹಿರಿಯರ ಸಮ್ಮುಖದಲ್ಲಿ 2020ರ ಫೆಬ್ರವರಿ ತಿಂಗಳಿನಲ್ಲಿ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.

ಇನ್ನು, ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಈ ಇಬ್ಬರು ಸಖತ್​ ರೀಲ್ಸ್​ ಮಾಡುತ್ತಿದ್ದರು. ಅದರಲ್ಲೂ ನಿವೇದಿತಾ ಗೌಡ ರೀಲ್ಸ್​ ಮಾಡಿ ಸಖತ್​ ಟ್ರೋಲ್​ ಆಗುತ್ತಿದ್ದರು. ಆದರೆ ಇದೀಗ ಮದುವೆಯಾಗಿ ನಾಲ್ಕು ವರ್ಷದ ಬಳಿಕ ಈ ಇಬ್ಬರು ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಲು ಮುಂದಾಗಿದ್ದಾರೆ. ಈ ಸಂಬಂಧ ವಿಚ್ಛೇದನಕ್ಕಾಗಿ ಕೋರ್ಟ್​ ಮೆಟ್ಟಿಲೇರಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಚಂದನ್​, ನಿವೇದಿತಾ ವಯಸ್ಸಿನ ಅಂತರವೆಷ್ಟು? ಇಷ್ಟು ಚಿಕ್ಕ ಹುಡುಗಿ ಮದ್ವೆ ಆಗಿದ್ದೇ ದುಬಾರಿ ಆಯ್ತಾ?

https://newsfirstlive.com/wp-content/uploads/2024/06/niveditha2.jpg

Load More