newsfirstkannada.com

ಪುಣೆ ಮಾದರಿಯಲ್ಲೇ ಮತ್ತೊಂದು ಅಪಘಾತ.. ಅಪ್ಪನ SUV ಕಾರು ಓಡಿಸಿ ವಿದ್ಯಾರ್ಥಿನಿಗೆ ಗುದ್ದಿದ 17 ವರ್ಷದ ಬಾಲಕ

Share :

Published June 2, 2024 at 11:32am

  ಪೋರ್ಷೆ ಕಾರಿನಲ್ಲಿ ವೇಗವಾಗಿ ಬಂದು ಇಬ್ಬರ ಸಾವಿಗೆ ಕಾರಣನಾಗಿದ್ದ ಅಪ್ರಾಪ್ತ

  SUV ಕಾರನ್ನು ಚಲಾಯಿಸಿ 16 ವರ್ಷದ ವಿದ್ಯಾರ್ಥಿನಿ ಡಿಕ್ಕಿ ಹೊಡೆದ ಯುವಕ

  ಗಂಭೀರವಾಗಿ ಗಾಯಗೊಂಡ ವಿದ್ಯಾರ್ಥಿನಿ ಸಾವು ಬದುಕಿನ ಮಧ್ಯೆ ಹೋರಾಟ

ಮುಂಬೈ: ಮೊನ್ನೆಯಷ್ಟೇ ಪುಣೆಯಲ್ಲಿ ಅಪ್ರಾಪ್ತನೊಬ್ಬ ಪೋರ್ಷೆ ಕಾರಿನಲ್ಲಿ ವೇಗವಾಗಿ ಬಂದು ಬೈಕ್​ಗೆ ಡಿಕ್ಕಿ ಹೊಡೆದು ಇಬ್ಬರು ಸಾವಿಗೆ ಕಾರಣನಾಗಿದ್ದ. ಈ ಪ್ರಕರಣ ಸಂಬಂಧಿಸಿ ಕ್ರೈಂ ಬ್ರ್ಯಾಂಚ್ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಈ ದುರಂತ ಮಾಸುವ ಮುನ್ನವೇ ಇಂತಹದ್ದೇ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ.

ಇದನ್ನೂ ಓದಿ: Rain Alert: ಸಿಲಿಕಾನ್​ ಸಿಟಿ ಜನರೇ ಎಚ್ಚರ.. ಹವಾಮಾನ ಇಲಾಖೆ ಕೊಟ್ಟ ಮುನ್ಸೂಚನೆ ಏನು?

ಅಹಮದಾಬಾದ್‌ನಲ್ಲಿ ತನ್ನ ತಂದೆಯ ಎಸ್‌ಯುವಿ ಕಾರನ್ನು ಚಲಾಯಿಸುತ್ತಿದ್ದ 17 ವರ್ಷದ ಅಪ್ರಾಪ್ತ 16 ವರ್ಷದ ಹುಡುಗಿಗೆ ಡಿಕ್ಕಿ ಹೊಡೆದಿದ್ದಾನೆ. ಥಾಲ್ತೇಜ್ ಶಾಲೆಯ 10ನೇ ತರಗತಿ ವಿದ್ಯಾರ್ಥಿನಿ ದಿಯಾ ಪ್ರಜಾಪತಿ ಸಾಂದೀಪನಿ ಸೊಸೈಟಿ ಮನೆಯ ಬಳಿ ನಡೆದುಕೊಂಡು ಹೋಗುತ್ತಿದ್ದಾಗ ವೇಗವಾಗಿ ಬಂದು ಏಕಾಏಕಿ ಡಿಕ್ಕಿ ಹೊಡೆಸಿದ್ದಾನೆ.

ಇದನ್ನೂ ಓದಿ: ಪುಣೆ ಪೋರ್ಶ್​ ಕಾರು ಆಕ್ಸಿಡೆಂಟ್​​ ಕೇಸ್​ಗೆ ಬಿಗ್​ ಟ್ವಿಸ್ಟ್​.. ಇಬ್ಬರು ವೈದ್ಯರು ಅರೆಸ್ಟ್​; ಯಾಕೆ?

ಕಾರು ಡಿಕ್ಕಿ ಹೊಡೆದ ಪರಿಣಾಮ ವಿದ್ಯಾರ್ಥಿನಿ ಗಂಭೀರವಾಗಿ ಗಾಯಗೊಂಡಿದ್ದಾಳೆ. ಕೂಡಲೇ ಇದನ್ನು ಗಮನಿಸಿದ ಸ್ಥಳೀಯರು ವಿದ್ಯಾರ್ಥಿನಿಯನ್ನು ಖಾಸಗಿ ಆಸ್ಪತ್ಸೆಗೆ ದಾಖಲಿಸಿದ್ದಾರೆ. ಗಂಭೀರವಾಗಿ ಗಾಯಗೊಂಡ ವಿದ್ಯಾರ್ಥಿನಿ ಆಸ್ಪತ್ಸೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದಾಳೆ.

ಅಪ್ರಾಪ್ತನ ಪೋಷಕರು ಯಾರೆಂದು ಈವರೆಗೂ ತಿಳಿದು ಬಂದಿಲ್ಲ. ಹೀಗೆ ಪೊಲೀಸರು ಅಪ್ರಾಪ್ತನ ಸಂಬಂಧಿಕರನ್ನು ಕರೆಸಿದ್ದಾರೆ ಮೂಲಗಳು ತಿಳಿಸಿವೆ. ವಿದ್ಯಾರ್ಥಿನಿಗೆ ಡಿಕ್ಕಿ ಹೊಡೆದ ಅಪ್ರಾಪ್ತನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪುಣೆ ಮಾದರಿಯಲ್ಲೇ ಮತ್ತೊಂದು ಅಪಘಾತ.. ಅಪ್ಪನ SUV ಕಾರು ಓಡಿಸಿ ವಿದ್ಯಾರ್ಥಿನಿಗೆ ಗುದ್ದಿದ 17 ವರ್ಷದ ಬಾಲಕ

https://newsfirstlive.com/wp-content/uploads/2024/06/accident8.jpg

Load More