newsfirstkannada.com

Jio, Airtel, Vi; ನಿಮ್ಮ ಸಿಮ್ ಸಕ್ರಿಯವಾಗಿ ಇಡಲು ಕನಿಷ್ಠ ಎಷ್ಟು ರೀಚಾರ್ಜ್​ ಮಾಡಬೇಕು?

Share :

Published July 6, 2024 at 10:37am

    ಬರೀ ಸಿಮ್​ ಸಕ್ರಿಯವಾಗಿಡಲು ಮಾಡಬೇಕು ದುಪ್ಪಟ್ಟು ರೀಚಾರ್ಜ್

    Jio, Airtel, Vi ಬಳಕೆದಾರರ ಜೇಬಿಗೆ ಕತ್ತರಿ, ಭಾರೀ ಜನಾಕ್ರೋಶ

    ಪ್ರಿಪೇಯ್ಡ್ ಮತ್ತು ಪೋಸ್ಟ್‌ಪೇಯ್ಡ್ ರೀಚಾರ್ಜ್ ದರದಲ್ಲಿ ಏರಿಕೆ​

Jio, Airtel, Vi ಕಂಪನಿಗಳು ತಮ್ಮ ರೀಚಾರ್ಜ್​​ ಯೋಜನೆಗಳನ್ನು ಪರಿಷ್ಕರಿಸಿವೆ. ಬದಲಾವಣೆಯ ನಂತರ ಯೋಜನೆಗಳು 600 ರೂಪಾಯಿವರೆಗೆ ದುಬಾರಿಯಾಗಿವೆ. ಕಂಪನಿಗಳು ಎಲ್ಲಾ ಯೋಜನೆಗಳನ್ನು ಅಲ್ಪಾವಧಿಯಿಂದ ದೀರ್ಘಾವಧಿಯವರೆಗೆ ಪರಿಷ್ಕರಿಸಿವೆ. ಹೀಗಾಗಿ ನೀವು ಸಿಮ್ ಸಕ್ರಿಯವಾಗಿಡಲು ಹೆಚ್ಚು ಖರ್ಚು ಮಾಡಬೇಕಾಗುತ್ತದೆ.

ರಿಲಯನ್ಸ್​ ಜಿಯೋ ತನ್ನ ರೀಚಾರ್ಜ್​ ಯೋಜನೆಗಳ ಬೆಲೆಯನ್ನು ಹೆಚ್ಚಿಸಿದೆ. ಜಿಯೋ ಸಿಮ್ ಬಳಕೆದಾರರು ಸಕ್ರಿಯವಾಗಿಡಲು 149 ರೂಪಾಯಿ ಖರ್ಚು ಮಾಡಬೇಕಾಗುತ್ತದೆ. ಈ ಯೋಜನೆಯಲ್ಲಿ 1 ಜಿಬಿ ದೈನಂದಿನ ಡೇಟಾ, ಅನಿಯಮಿತ ಕರೆ ಹಾಗೂ 100 ಎಸ್​ಎಂಎಸ್​ ಸೌಲಭ್ಯ ಪಡೆಯುತ್ತಾರೆ. ಜೊತೆಗೆ ಗ್ರಾಹಕರು ಜಿಯೋ ಕ್ಲೌಡ್​, ಜಿಯೋ ಸಿನಿಮಾ, ಜಿಯೋ ಟಿವಿ ಪ್ರವೇಶವನ್ನು ಪಡೆಯುತ್ತಾರೆ. ರಿಲಯನ್ಸ್​ ಜಿಯೋದ ಈ ಯೋಜನೆಯು 14 ದಿನಗಳ ಮಾನ್ಯತೆ ಇದೆ.

ಇದನ್ನೂ ಓದಿ:Jio ಪ್ರಿಪೇಯ್ಡ್ & ಪೋಸ್ಟ್‌ಪೇಯ್ಡ್ ದರದಲ್ಲಿ ಭಾರೀ ಏರಿಕೆ; ಹಿಂದೆ ಎಷ್ಟಿತ್ತು? ಈಗ ಎಷ್ಟಾಗುತ್ತೆ?

Vodafone Idea ಅಂದರೆ Vi ತನ್ನ ಯೋಜನೆಯಲ್ಲಿ ಕನಿಷ್ಠ 99 ರೂಪಾಯಿ ರೀಚಾರ್ಜ್​ ಮಾಡಬೇಕಾಗುತ್ತದೆ. 99 ರೂಪಾಯಿ ಟಾಕ್ ಟೈಮ್ ಮತ್ತು 15 ದಿನಗಳ ಮಾನ್ಯತೆಯೊಂದಿಗೆ ದಿನಕ್ಕೆ 200 ಎಂಬಿ ಡೇಟಾ ನೀಡುತ್ತಿದೆ. ಗ್ರಾಹಕರು ಪ್ರತಿ ಸೆಕೆಂಡ್​ಗೆ 2.5 ಪೈಸೆ ದರದಲ್ಲಿ ಕರೆಗಳನ್ನು ಮಾಡಬಹುದಾಗಿದೆ.

ಇನ್ನು ಏರ್​ಟೆಲ್ 199 ರೂಪಾಯಿ ರೀಚಾರ್ಜ್​ ಯೋಜನೆಯನ್ನು ಪರಿಚಯಿಸುತ್ತಿದೆ. ಇದು 28 ದಿನಗಳ ವ್ಯಾಲಿಡಿಟಿ ಹೊಂದಿದೆ. ಈ ಪ್ಲಾನ್​​ನಡಿ ಅನಿಯಮಿತ ಫೋನ್ ಕರೆ, 100 ಎಸ್​ಎಂಎಸ್​ ಹಾಗೂ 2 ಜಿಬಿ ಡೇಟಾ ಸಿಗಲಿದೆ.

ಇದನ್ನೂ ಓದಿ:ಪ್ರೇಯಸಿ ಜೊತೆ ಲಾಡ್ಜ್​ಗೆ ಬಂದು ಉಸಿರು ನಿಲ್ಲಿಸಿದ ವಿವಾಹಿತ.. ಸಾವಿನ ಹಿಂದೆ ಹಲವು ಅನುಮಾನ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Jio, Airtel, Vi; ನಿಮ್ಮ ಸಿಮ್ ಸಕ್ರಿಯವಾಗಿ ಇಡಲು ಕನಿಷ್ಠ ಎಷ್ಟು ರೀಚಾರ್ಜ್​ ಮಾಡಬೇಕು?

https://newsfirstlive.com/wp-content/uploads/2024/06/jio3.jpg

Load More