/newsfirstlive-kannada/media/post_attachments/wp-content/uploads/2024/08/Airtel.jpg)
ಖಾಸಗಿ ಟೆಲಿಕಾಂ ಕಂಪನಿಯಾದ ಏರ್​ಟೆಲ್​ ತನ್ನ ಗ್ರಾಹಕರಿಗೆ ಇದ್ದಕ್ಕಿದ್ದಂತೆಯೇ ಶಾಕ್​ ನೀಡಿದೆ. ವಿಂಕ್​​ ಮ್ಯೂಸಿಕ್​ ಅಪ್ಲಿಕೇಶನ್​ ಅನ್ನು ಸ್ಥಗಿತಗೊಳಿಸಲು ಮುಂದಾಗಿದೆ.
ಆ್ಯಪಲ್​​ಟಿವಿ+ ಮತ್ತು ಆ್ಯಪಲ್​ ಮ್ಯೂಸಿಕ್​​ ಸೇವೆಗಳನ್ನು ತನ್ನ ಬಳಕೆದಾರರಿಗೆ ನೀಡಲು ಆ್ಯಪಲ್​​ ಜೊತೆಗಿನ ಪಾಲುದಾರಿಕೆ ಅನುಸರಿಸಿ ಏರ್​ಟೆಲ್​​ ವಿಂಕ್​ ಮ್ಯೂಸಿಕ್​​ ಅನ್ನು ಸ್ಥಗಿತಗೊಳಿಸಲು ಸಿದ್ಧತೆ ಮಾಡಿದೆ. ಮುಂದಿನ ಕೆಲವೇ ತಿಂಗಳಲ್ಲಿ ವಿಂಕ್​ ಮ್ಯೂಸಿಕ್​​ ಸ್ಥಗಿತವಾಗಲಿದೆ.
ಇನ್ನು ವಿಂಕ್​​ ಮ್ಯೂಸಿಕ್​​ ಸ್ಥಗಿತಗೊಂಡರು ಅದರಿಂದ ಉದ್ಯೋಗಿಗಳ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಏರ್​ಟೆಲ್​ ತಿಳಿಸಿದೆ. ವಜಾಗೊಳಿಸುವ ಬದಲು ಏರ್​ಟೆಲ್​ ಎಲ್ಲಾ ವಿಂಕ್​​ ಮ್ಯೂಸಿಕ್​​ನಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಯನ್ನು ತನ್ನ ಪ್ರಮುಖ ತಂಡಕ್ಕೆ ಸೇರಿಸಲು ಮುಂದಾಗಿದೆ.
ಈಗಾಗಲೇ ವಿಂಕ್​​ ಮ್ಯೂಸಿಕ್​ ಪ್ರೀಮಿಯಂಗೆ ಚಂದಾದಾರರಾಗಿರುವವರಿಗೆ ಆ್ಯಪಲ್​ ಮ್ಯೂಸಿಕ್​​ನಲ್ಲಿ ವಿಶೇಷ ಕೊಡುಗೆಗಳನ್ನು ನೀಡಲು ಏರ್​ಟೆಲ್​ ಮುಂದಾಗಿದೆ. ವಿಂಕ್​ ಮ್ಯೂಸಿಕ್​​ನ ಎಲ್ಲಾ ಉದ್ಯೋಗಿಗಳನ್ನು ಏರ್​ಟೆಲ್​ ಉಳಿಸಿಕೊಳ್ಳುವ ಭರವಸೆ ನೀಡಿದೆ.
ಏರ್​​ಟೆಲ್​​ ಆ್ಯಪಲ್​ ಜೊತೆಗೆ ಪಾಲುದಾರಿಕೆ ಹೊಂದಿದ್ದು, ವಿಶೇಷವಾದ ಪ್ರವೇಶವನ್ನು ಪಡೆಯಲಿದ್ದಾರೆ. ಗ್ರಾಹಕರು ಆ್ಯಪಲ್​ ಟಿವಿ+ ಮತ್ತು ಆ್ಯಪಲ್​ ಮ್ಯೂಸಿಕ್​ ಆನಂದಿಸಲಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us