newsfirstkannada.com

ಶಾಕ್​ ಕೊಟ್ಟ ಏರ್​ಟೆಲ್​​! ವಿಂಕ್​​ ಮ್ಯೂಸಿಕ್​ ಸ್ಥಗಿತ ಬಹುತೇಕ ಖಚಿತ.. ಉದ್ಯೋಗಿಗಳ ಗತಿಯೇನು?

Share :

Published August 29, 2024 at 6:53am

    ಏರ್​ಟೆಲ್​ ಈ ನಿರ್ಧಾರ ತೆಗೆದುಕೊಂಡಿದ್ದೇಕೆ?

    ವಿಂಕ್​​ ಮ್ಯೂಸಿಕ್​ ಪ್ರೀಮಿಯಂ ಚಂದಾದಾರರ ಕತೆ?

    ಏರ್​ಟೆಲ್​ನ ಮುಂದಿನ ಪ್ಲಾನ್​ ಏನು? ಇಲ್ಲಿದೆ ಮಾಹಿತಿ

ಖಾಸಗಿ ಟೆಲಿಕಾಂ ಕಂಪನಿಯಾದ ಏರ್​ಟೆಲ್​ ತನ್ನ ಗ್ರಾಹಕರಿಗೆ ಇದ್ದಕ್ಕಿದ್ದಂತೆಯೇ ಶಾಕ್​ ನೀಡಿದೆ. ವಿಂಕ್​​ ಮ್ಯೂಸಿಕ್​ ಅಪ್ಲಿಕೇಶನ್​ ಅನ್ನು ಸ್ಥಗಿತಗೊಳಿಸಲು ಮುಂದಾಗಿದೆ.

ಆ್ಯಪಲ್​​ಟಿವಿ+ ಮತ್ತು ಆ್ಯಪಲ್​ ಮ್ಯೂಸಿಕ್​​ ಸೇವೆಗಳನ್ನು ತನ್ನ ಬಳಕೆದಾರರಿಗೆ ನೀಡಲು ಆ್ಯಪಲ್​​ ಜೊತೆಗಿನ ಪಾಲುದಾರಿಕೆ ಅನುಸರಿಸಿ ಏರ್​ಟೆಲ್​​ ವಿಂಕ್​ ಮ್ಯೂಸಿಕ್​​ ಅನ್ನು ಸ್ಥಗಿತಗೊಳಿಸಲು ಸಿದ್ಧತೆ ಮಾಡಿದೆ. ಮುಂದಿನ ಕೆಲವೇ ತಿಂಗಳಲ್ಲಿ ವಿಂಕ್​ ಮ್ಯೂಸಿಕ್​​ ಸ್ಥಗಿತವಾಗಲಿದೆ.

ಇನ್ನು ವಿಂಕ್​​ ಮ್ಯೂಸಿಕ್​​ ಸ್ಥಗಿತಗೊಂಡರು ಅದರಿಂದ ಉದ್ಯೋಗಿಗಳ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಏರ್​ಟೆಲ್​ ತಿಳಿಸಿದೆ. ವಜಾಗೊಳಿಸುವ ಬದಲು ಏರ್​ಟೆಲ್​ ಎಲ್ಲಾ ವಿಂಕ್​​ ಮ್ಯೂಸಿಕ್​​ನಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಯನ್ನು ತನ್ನ ಪ್ರಮುಖ ತಂಡಕ್ಕೆ ಸೇರಿಸಲು ಮುಂದಾಗಿದೆ.

ಇದನ್ನೂ ಓದಿ: ಜಿಯೋ ಪರಿಚಯಿಸಿದೆ 2 ಹೊಸ ಪ್ರಿಪೇಯ್ಡ್​ ಪ್ಲಾನ್​;​ಇದರಲ್ಲಿದೆ ಉಚಿತ ನೆಟ್​ಫ್ಲಿಕ್ಸ್ ವೀಕ್ಷಿಸುವ ಅವಕಾಶ

ಈಗಾಗಲೇ ವಿಂಕ್​​ ಮ್ಯೂಸಿಕ್​ ಪ್ರೀಮಿಯಂಗೆ ಚಂದಾದಾರರಾಗಿರುವವರಿಗೆ ಆ್ಯಪಲ್​ ಮ್ಯೂಸಿಕ್​​ನಲ್ಲಿ ವಿಶೇಷ ಕೊಡುಗೆಗಳನ್ನು ನೀಡಲು ಏರ್​ಟೆಲ್​ ಮುಂದಾಗಿದೆ. ವಿಂಕ್​ ಮ್ಯೂಸಿಕ್​​ನ ಎಲ್ಲಾ ಉದ್ಯೋಗಿಗಳನ್ನು ಏರ್​ಟೆಲ್​ ಉಳಿಸಿಕೊಳ್ಳುವ ಭರವಸೆ ನೀಡಿದೆ.

ಇದನ್ನೂ ಓದಿ: ಡೆಡ್ಲಿ ಸೋಮ, ಹನುಮಂತ ನಾಯ್ಕ್.. ನಟೋರಿಯಸ್​ ರೌಡಿಗಳನ್ನು ಕಂಡ ಬಳ್ಳಾರಿ ಜೈಲಿಗೆ ಹೋಗಲ್ಲ ಎಂದ ದರ್ಶನ್​

ಏರ್​​ಟೆಲ್​​ ಆ್ಯಪಲ್​ ಜೊತೆಗೆ ಪಾಲುದಾರಿಕೆ ಹೊಂದಿದ್ದು, ವಿಶೇಷವಾದ ಪ್ರವೇಶವನ್ನು ಪಡೆಯಲಿದ್ದಾರೆ. ಗ್ರಾಹಕರು ಆ್ಯಪಲ್​ ಟಿವಿ+ ಮತ್ತು ಆ್ಯಪಲ್​ ಮ್ಯೂಸಿಕ್​ ಆನಂದಿಸಲಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಶಾಕ್​ ಕೊಟ್ಟ ಏರ್​ಟೆಲ್​​! ವಿಂಕ್​​ ಮ್ಯೂಸಿಕ್​ ಸ್ಥಗಿತ ಬಹುತೇಕ ಖಚಿತ.. ಉದ್ಯೋಗಿಗಳ ಗತಿಯೇನು?

https://newsfirstlive.com/wp-content/uploads/2024/08/Airtel.jpg

Load More