/newsfirstlive-kannada/media/post_attachments/wp-content/uploads/2024/05/Aishwarya-Rai2.jpg)
ಮಾಜಿ ವಿಶ್ವ ಸುಂದರಿ, ಬಾಲಿವುಡ್ ಖ್ಯಾತ ನಟಿ ಐಶ್ವಯಾ ರೈ ಸದ್ಯ ವಿಶ್ವಪ್ರಸಿದ್ಧ ಕೇನ್ಸ್ ಚಲನಚಿತ್ರೋತ್ಸದಲ್ಲಿ ಬ್ಯುಸಿಯಾಗಿದ್ದಾರೆ. ಇಂದು ವಿಶ್ವಪ್ರಸಿದ್ಧ ಕೇನ್ಸ್ ಚಲನಚಿತ್ರೋತ್ಸ ಫ್ರಾನ್ಸ್ ರಿವೇರಿಯಾದಲ್ಲಿ ಅದ್ಧೂರಿಯಾಗಿ ನಡೆಯುತ್ತಿದೆ.
ಇದನ್ನೂ ಓದಿ: ಅಯ್ಯೋ.. ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ ಕೈಗೆ ಏನಾಯ್ತು? ವಿಡಿಯೋ ವೈರಲ್!
Aishwarya Rai Bachchan at Cannes Film Festival 2024 ??✨ 1/n#AishwaryaRai#AishwaryaRaiBachchan#Cannes2024pic.twitter.com/SWy3YohE2f
— WV - Media (@wvmediaa) May 16, 2024
ಮಾಜಿ ವಿಶ್ವ ಸುಂದರಿ ಐಶ್ವರ್ಯ ರೈ ಬಚ್ಚನ್ ಅವರು ಕಳೆದ ಬಾರಿಯಂತೆ ಈ ಬಾರಿಯೂ ಕೇನ್ಸ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಪಾಲ್ಗೊಂಡಿದ್ದಾರೆ. ಕೈಗೆ ಪೆಟ್ಟಾಗಿದ್ದರೂ ರೆಡ್ ಕಾರ್ಪೆಟ್ ಮೇಲೆ ಐಶ್ವರ್ಯಾ ರೈ ಹೆಜ್ಜೆ ಹಾಕುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಕೇನ್ಸ್ ಚಲನಚಿತ್ರೋತ್ಸವದ 77ನೇ ಆವೃತ್ತಿಯು ಮೇ 14ರಂದು ಶುರುವಾಗಿದೆ. ಹೀಗಾಗಿ ಈ ಮಧ್ಯೆ ಬಾಲಿವುಡ್ ನಟಿ ಐಶ್ವರ್ಯಾ ರೈ ಬಚ್ಚನ್ ಅವರು ತಮ್ಮ ಮಗಳು ಆರಾಧ್ಯ ಬಚ್ಚನ್ ಅವರೊಂದಿಗೆ ಈ ಪ್ರತಿಷ್ಠಿತ ಕಾರ್ಯಕ್ರಮಕ್ಕೆ ತೆರಳಿದ್ದಾರೆ.
ಇನ್ನು, ಕೇನ್ಸ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಬಾಲಿವುಡ್ ನಟಿ ಐಶ್ವರ್ಯಾ ರೈ ಕಪ್ಪು, ಬಿಳಿ ಮತ್ತು ಗೋಲ್ಡನ್ ಬಣ್ಣಗಳಿಂದ ವಿನ್ಯಾಸಗೊಂಡ ಗೌನ್ ಧರಿಸಿ ಮಿರ ಮಿರ ಮಿಂಚಿದ್ದಾರೆ. ಫಲ್ಗುಣಿ ಮತ್ತು ಶೇನ್ ವಿನ್ಯಾಸಗೊಳಿಸಿದ ಬೃಹತ್ ಗೌನ್ ರಫಲ್ಡ್ ಸ್ಲೀವ್ಸ್ ಮುಂಭಾಗದಲ್ಲಿ ಗೋಲ್ಡನ್ ಮಾದರಿಯನ್ನು ಹೊಂದಿದೆ. ಜೊತೆಗೆ ನಟಿಯೂ ಗೋಲ್ಡನ್ ಕಿವಿಯೋಲೆಗಳನ್ನು ಧರಿಸಿ ರೆಟ್ರೋ ಫೀಲ್ ನೀಡಿದರು. ಇದನ್ನು ನೋಡಿದ ಅಭಿಮಾನಿಗಳು ವಾವ್ ವಾವ್ ಅಂತ ಕಾಮೆಂಟ್ ಮಾಡುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಸದ್ಯ ಐಶ್ವರ್ಯಾ ರೈ ಅವರ ಮಸ್ತ್ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿವೆ. ನಟಿ ಐಶ್ವರ್ಯಾ ರೈ ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಕೇನ್ಸ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಭಾಗಿಯಾಗಿದ್ದ ಫೋಟೋಗಳನ್ನು ಶೇರ್ ಮಾಡುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ