newsfirstkannada.com

×

Paris Fashion Weekನಲ್ಲಿ ಧೂಳೆಬ್ಬಿಸಿದ ಐಶು, ಆಲೂ; ಬ್ಯೂಟಿಫುಲ್ ವಿಡಿಯೋ ಇಲ್ಲಿದೆ ನೋಡಿ!

Share :

Published September 24, 2024 at 3:39pm

Update September 24, 2024 at 3:54pm

    ಪ್ಯಾರಿಸ್ ಫ್ಯಾಶನ್ ವೀಕ್​ನಲ್ಲಿ ಮಿರಿಮಿರಿ ಮಿಂಚಿದ ಐಶ್ವರ್ಯ, ಆಲಿಯಾ

    ಮೊಟ್ಟ ಮೊದಲ ಬಾರಿಗೆ ಈ ವೇದಿಕೆಯಲ್ಲಿ ಹೆಜ್ಜೆ ಹಾಕಿದ ಆಲಿಯಾ ಭಟ್​

    ಪ್ಯಾರಿಸ್​ನಲ್ಲಿ ಎಲ್ ಓರಿಯಲ್ ಬ್ರ್ಯಾಂಡ್​ನ್ನು ಪ್ರತಿನಿಧಿಸಿದ ಉಭಯ ನಟಿಯರು

ಪ್ಯಾರಿಸ್ ಫ್ಯಾಶನ್ ವೀಕ್​ನಲ್ಲಿ ಒಂದು ಕಡೆ ಆಲಿಯಾ ಮತ್ತೊಂದು ಕಡೆ ಐಶ್ವರ್ಯ ರೈ ಬಚ್ಚನ್ ಱಂಪ್ ವಾಕ್ ಮಾಡುತ್ತಾ ನಡೆದು ಬರುತ್ತಿದ್ದರೆ. ಅಲ್ಲಿ ಕುಳಿತವರ ಹಾರ್ಟ್​ನಲ್ಲಿ ಏಕಕಾಲಕ್ಕೆ ಸಾವಿರ ಹಾರ್ಮೋನಿಯಂ ಒಟ್ಟಿಗೆ ಬಾರಿಸಿದಂತ ಫೀಲ್ ಆಗುತ್ತಿತ್ತು. ಸೋಮವಾರ ರಾತ್ರಿ ನಡೆದ ಪ್ಯಾರಿಸ್ ಫ್ಯಾಷನ್ ವೀಕ್​​ನಲ್ಲಿ ಬಾಲಿವುಡ್ ಬ್ಯೂಟಿ ಐಶ್ವರ್ಯ ರೈ ಹಾಗೂ ಹಾಲುಗಲ್ಲದ ಚೆಲುವೆ ಆಲಿಯಾ ಭಟ್​​ ವೇದಿಕೆಯ ಮೇಲೆ ಮಾರ್ಜಾಲದ ನಡಿಗೆಯ ಮೂಲಕ ಬಂದು ಅಭಿಮಾನಿಗಳ ಹೃದಯದ ಬಡಿತ ಮತ್ತೊಮ್ಮೆ ಹೆಚ್ಚಿಸಿದ್ದಾರೆ. ಈ ಇಬ್ಬರೂ ಬಾಲಿವುಡ್ ಸ್ಟಾರ್​​ಗಳು ಎಲ್ ಓರಿಯಲ್ ಬ್ರ್ಯಾಂಡ್​ನ್ನು ಪ್ರತಿನಿಧಿಸುತ್ತಾ ಱಂಪ್ ವಾಕ್ ಮಾಡಿದ್ದಾರೆ. ಇದೇ ಮೊಟ್ಟ ಮೊದಲ ಬಾರಿಗೆ ಆಲಿಯಾ ಭಟ್ ಪ್ಯಾರಿಸ್ ಫ್ಯಾಷನ್ ವೀಕ್​ನಲ್ಲಿ ಭಾಗವಹಿಸಿದ್ದರು. ಐಶು ಈ ಹಿಂದೆ ಈ ವೇದಿಕೆಯ ಮೇಲೆ ಅನೇಕ ಬಾರಿ ಹೆಜ್ಜೆ ಹಾಕಿದ್ದಾರೆ.

ಇದನ್ನೂ ಓದಿ: ಬಿಗ್​ಬಿ ಫಿಟ್ನೆಸ್​ ಗುಟ್ಟು! ಈ ಪದಾರ್ಥಗಳನ್ನ ತಿನ್ನೋದೇ ಇಲ್ಲ, ಎಷ್ಟು ಗಂಟೆ ನಿದ್ದೆ ಮಾಡ್ತಾರೆ..?

ದೀರ್ಘಕಾಲದಿಂದಲೂ ಈ ಫ್ಯಾಷನ್ ವೀಕ್​ನ ರಾಯಭಾರಿಯಾಗಿರುವ ಐಶ್ವರ್ಯ ರೈ ಬಚ್ಚನ್ ಸ್ಯಾಟೀನ್ ರೆಡ್​ ಗೌನ್​ನಲ್ಲಿ ಸ್ಟನ್ನಿಂಗ್​ ಆಗಿ ಮಿಂಚುತ್ತಿದ್ದರು.ಗೌನ್​ಗೆ ಹೊಂದುವಂತೆ ಬ್ರೈಟ್ ರೆಡ್​ ಲಿಪ್ಸ್​ಟಿಕ್ ಹಾಕಿಕೊಂಡಿದ್ದ ಐಶು, ಧಿರಿಸಿಗೆ ತಕ್ಕಂತೆ ಹೇರ್​ಸ್ಟೈಲ್ ಕೂಡ ಮಾಡಿಕೊಂಡಿದ್ದು, ನೋಡುವವರ ಎದೆ ಬಡಿತ ಜೋರಾಗುವಂತೆ ಮಾಡಿದ್ದರು. ಎಲ್ ಓರಿಯಲ್ ರಾಯಭಾರಿಯಾಗಿ ವೇದಿಕೆ ಮೇಲೆ ಬಂದ ಐಶ್ವರ್ಯ ರೈ ತಮ್ಮ ಡ್ರೆಸ್ ಹಾಗೂ ತಮ್ಮ ಬ್ಯೂಟಿಯಿಂದಲೇ ಎಲ್ಲರ ಗಮನವನ್ನು ಸೆಳೆದರು.

ಇನ್ನು ಐಶು ವೇದಿಕೆಯ ಮೇಲೆ ಱಂಪ್ ವಾಕ್ ಮಾಡಿಕೊಂಡು ಬರುತ್ತಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ಅವರ ಫ್ಯಾನ್ಸ್​. ಅವರ ಆತ್ಮವಿಶ್ವಾಸ, ಅವರ ಕಾಲಾತೀತ ಸೌಂದರ್ಯ ಹಾಗೂ ಸೊಬಗು ಎಂದಿಗೂ ಮುಗಿಯುವಂತದ್ದಲ್ಲ ಎಂದು ಬಣ್ಣಿಸಿದ್ದಾರೆ.

ಇದನ್ನೂ ಓದಿ:ಕೇವಲ 500 ರೂ ಇಂದ ಫ್ಯಾಶನ್​ ಡಿಸೈನಿಂಗ್​ ಶುರು ಮಾಡಿದ ಈತ 230 ಕೋಟಿ ಒಡೆಯ; ಬೆಳೆದಿದ್ದೇ ರೋಚಕ!

ಇನ್ನು ಆಲಿಯಾ ಭಟ್ ಕೂಡ ಇದೇ ವೇದಿಕೆಯ ಮೇಲೆ ಮೊದಲ ಬಾರಿಗೆ ಹೆಜ್ಜೆ ಹಾಕಿದ್ದಾರೆ. ಸಿಲ್ವರ್ ಬಣ್ಣದ ಶೋಲ್ಡರ್ ಜಂಪ್​ಸೂಟ್​ನಲ್ಲಿ ಮಿಂಚಿನಂತೆ ವೇದಿಕೆಯ ಮೇಲೆ ನಡುವಿನ ಮೇಲೆ ಕೈಯಿಟ್ಟುಕೊಂಡು ಮಾರ್ಜಾಲ ನಡೆಗೆಯಿಡುತ್ತಾ ಬಂದ ಆಲಿಯಾ, ಎಲ್ಲರ ಕಣ್ಮನ ಸೆಳೆದರು. ಅವರು ಹಾಕಿಕೊಂಡಿದ್ದ ಗೌನ್ ಅವರ ಸೌಂದರ್ಯವನ್ನು ನೂರ್ಮಡಿಗೊಳಿಸಿತ್ತು. ಪಿಂಕ್ ಕಲರ್ ಲಿಪ್ಸ್​ಟಿಕ್ ಹಾಕಿಕೊಂಡು ಧಿರಿಸಿಗೆ ತಕ್ಕಂತ ಹೇರ್​ಸ್ಟೈಲ್​ನಲ್ಲಿ ಹೃದಯ ಪಾಲಕಿಯರನ್ನು ಕುಣಿಸುತ್ತಾ ವೇದಿಕೆಗೆ ಎಂಟ್ರಿ ಕೊಟ್ಟ ಆಲಿಯಾ ಎಲ್ಲರ ಚಿತ್ತವನ್ನ ತಮ್ಮತ್ತ ಸೆಳೆದಿದ್ದರು
ಆಲಿಯಾ ಪ್ಯಾರಿಸ್ ಫ್ಯಾಷನ್ ವೀಕ್​ನಲ್ಲಿ ಭಾಗವಹಿಸಿದ ವಿಡಿಯೋವನ್ನು ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿರುವ ಅವರ ಫ್ಯಾನ್ಸ್ ಆಲಿಯಾರನ್ನು ಹಾಡಿ ಹೊಗಳಿದ್ದಾರೆ.ಅವಳ ಫೇಸ್​ಕಾರ್ಡ್ ಎಂದಿಗೂ ಮುಕ್ಕಾಗುವಂತದಲ್ಲ ಎಂದು ಬಣ್ಣಿಸುತ್ತಿದ್ದಾರೆ. ಜಬರದಸ್ತ್​ ಲುಕ್​ ಹಾಗೂ ಅವರಲ್ಲಿರುವ ಆತ್ಮವಿಶ್ವಾಸ ಇಡೀ ಫ್ಯಾಷನ್ ವೀಕನ್ನೇ ನುಂಗಿಹಾಕಿದೆ ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ. ಒಟ್ಟಾರೆ ಐಶು ಆಲೂ ಅವರ ಱಂಪ್ ವಾಕ್​ನಿಂದಾಗಿ ಪ್ಯಾರಿಸ್ ಫ್ಯಾಷನ್​ ವೀಕ್​​ನ ಕಳೆ ನೂರ್ಮಡಿ ಹೆಚ್ಚಾಗಿದ್ದಂತೂ ಸುಳ್ಳಲ್ಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Paris Fashion Weekನಲ್ಲಿ ಧೂಳೆಬ್ಬಿಸಿದ ಐಶು, ಆಲೂ; ಬ್ಯೂಟಿಫುಲ್ ವಿಡಿಯೋ ಇಲ್ಲಿದೆ ನೋಡಿ!

https://newsfirstlive.com/wp-content/uploads/2024/09/AISH-AND-ALIA-1.jpg

Load More