newsfirstkannada.com

×

ಕೇವಲ 500 ರೂ ಇಂದ ಫ್ಯಾಶನ್​ ಡಿಸೈನಿಂಗ್​ ಶುರು ಮಾಡಿದ ಈತ 230 ಕೋಟಿ ಒಡೆಯ; ಬೆಳೆದಿದ್ದೇ ರೋಚಕ!

Share :

Published September 24, 2024 at 6:22am

    ಇದು ಫ್ಯಾಶನ್ ಡಿಸೈನ್ ಜಗತ್ತಿನಲ್ಲಿ ಮೈಲಿಗಲ್ಲು ನೆಟ್ಟ ಸಾಧಕನ ಜರ್ನಿ

    ಕೋರ್ಸ್​ ಕಲಿತಿಲ್ಲ, ಕಾಲೇಜಿಗೆ ಹೋಗಿಲ್ಲ, ಆದರೂ ಕಲಿತದ್ದು ಸಾಗರದಷ್ಟು

    ಬಾಲಿವುಡ್​ನ 4 ತಲೆಮಾರುಗಳಿಗೆ ಡ್ರೆಸ್ ಡಿಸೈನ್ ಮಾಡಿದ ಕೀರ್ತಿ ಇವರದ್ದು

ಮುಂಬೈ:  ಫ್ಯಾಶನ್ ಡಿಸೈನಿಂಗ್​ ಅನ್ನುವುದು ಒಂದು ಮಿತಿಯೇ ಇಲ್ಲದೇ ಸದಾ ಹೊಸತನವನ್ನು ಹುಟ್ಟುಹಾಕುವ ಕ್ಷೇತ್ರ . ಇಲ್ಲಿ ಹೊಸ ಹೊಸ ಐಡಿಯಾಗಳಿಗೆ ಆಕಾಶವೇ ಮಿತಿ. ಕಲ್ಪನೆಗಳಿಗೆ ತಕ್ಕಂತೆ ರಂಗು ತುಂಬಿ ಅದಕ್ಕೂ ಸರಿಯಾದ ಕಸೂತಿ ಹಾಕಿ, ವೈಯ್ಯಾರಕ್ಕೆ ಮತ್ತಷ್ಟು ಬೆರಗನ್ನು ಬಳಿದು ಕ್ಯಾಮರಾ ಎಂಬ ಕಪ್ಪು ಸುಂದರಿಯ ಮುಂದೆ ಚೆಲುವ ಚೆಲುವೆಯರನ್ನು ತಂದು ನಿಲ್ಲಿಸುವುದಿದೆಯಲ್ಲಾ ಆ ಕಲೆ ಎಲ್ಲರಿಗೂ ಸಿದ್ಧಿಸುವುದಿಲ್ಲ. ಸಿದ್ಧಿಸಿದವರು ಬೆಳೆದ ಎತ್ತರಕ್ಕೆ ಸಾಟಿಯೇ ಇಲ್ಲ. ಈ ಫ್ಯಾಶನ್ ದುನಿಯಾದಲ್ಲಿ ಕೇವಲ 500 ರೂಪಾಯಿಂದ ತಮ್ಮ ಜರ್ನಿಯನ್ನು ಶುರು ಮಾಡಿ ಈಗ ಬಹುಬೇಡಿಕೆಯ ಡಿಸೈನರ್ ಆಗಿ ಗುರುತಿಸಿಕೊಂಡವ ಕಥೆಯನ್ನು ನಾವು ನಿಮಗೆ ಹೇಳಲು ಹೊರಟಿದ್ದೇವೆ.

ಮನೀಶ್ ಮಲ್ಹೋತ್ರಾ. ಸದ್ಯ ಫ್ಯಾಶನ್ ಜಗತ್ತಿನಲ್ಲಿಯೇ ಅತಿದೊಡ್ಡ ಹೆಸರು ಮಾಡಿದವರು. ಮುಖೇಶ್ ಅಂಬಾನಿ ಪತ್ನಿ ನೀತಾ ಅಂಬಾನಿಯವರ ಧರಿಸಿಗಳನ್ನು ಡಿಸೈನ್ ಮಾಡುವುದರಿಂದ ಹಿಡಿದು ದೊಡ್ಡ ದೊಡ್ಡ ನಟ ನಟಿಯರ ಡ್ರೆಸ್​ಗಳ ಸ್ಟೈಲಿಂಗ್ ಡಿಸೈನಿಂಗ್ ಮಾಡೋದು ಇದೇ ಮನೀಶ್ ಮಲ್ಹೋತ್ರಾ. 30 ವರ್ಷಗಳ ಅವರ ಜರ್ನಿಯಲ್ಲಿ 4 ತಲೆಮಾರುಗಳ ನಟ ನಟಿಯರಿಗೆ ಇವರು ಡಿಸೈನರ್ ಆಗಿ ಕೆಲಸ ಮಾಡಿದ್ದಾರೆ.

ಹಾಗಂತ ಮನೀಶ್ ಮಲ್ಹೋತ್ರಾ ಯಾವುದೇ ಫ್ಯಾಶನ್ ಡಿಸೈನಿಂಗ್ ಕೋರ್ಸ್ ಮಾಡಿದವರಲ್ಲ. ಅಸಲಿಗೆ ಶಾಲೆಯನ್ನೇ 6ನೇ ಕ್ಲಾಸಿಗೆ ನಿಲ್ಲಿಸಿದರು ಅವರ ತಾಯಿ ಮಾಡುತ್ತಿದ್ದ ವ್ಯಾಪಾರಲ್ಲಿಯೇ ನುರಿತು ಸಿನಿಮಾಗಳನ್ನು ನೋಡಿ ಕಲಿತವರು. ಪೇಟಿಂಗ್ ಕ್ಲಾಸಿಗೆ ಅಂತ ಹೋಗುತ್ತಿದ್ದ ಹುಡುಗ ಮುಂದೆ ಅದಕ್ಕೆ ಆಕರ್ಷಿತನಾಗಿ ಬಟ್ಟೆಗಳಿಗೆ ರಂಗು ತುಂಬುವ ಕಾರ್ಯಕ್ಕೆ ನಿಂತುಬಿಡುತ್ತಾರೆ. ಅವರು ತಾಯಿ ಮಾಡುತ್ತಿದ್ದ ಟೇಲರಿಂಗ್​ನ್ನ ಗಮನಿಸುತ್ತಾ ಬೆಳೆದ ಮನೀಶ್ ಮಲ್ಹೋತ್ರಾ ಫ್ಯಾಶನ್ ಜಗತ್ತಿನತ್ತ ಆಕರ್ಷಿತರಾಗಿ ಮಾಡಲಿಂಗ್ ಶುರು ಮಾಡುತ್ತಾರೆ.

ಇದನ್ನೂ ಓದಿ: ಬಿಗ್‌ಬಾಸ್‌ ಸೀಸನ್ 11: ಶೋಗೂ ಮೊದಲೇ 5 ಸ್ಪರ್ಧಿಗಳ ಹೆಸರು ಫೈನಲ್‌! ಸ್ವರ್ಗಕ್ಕೆ ಯಾರು? ನರಕಕ್ಕೆ ಯಾರು?

ಹೀಗೆ ಬೆಳೆದ ಈ ಪಂಜಾಬಿ ಹುಡುಗನಿಗೆ ಜೂಹಿ ಚಾವ್ಲಾ ನಟನೆ ಸ್ವರ್ಗ್ ಅನ್ನೋ ಸಿನಿಮಾದಲ್ಲಿ ಸ್ಟೈಲ್ ಮತ್ತು ಡಿಸೈನಿಂಗ್​ ಮಾಡುವ ಅವಕಾಶ ದೊರಕುತ್ತದೆ. ಅಂದು ಸಿನಿಮಾ ಕ್ಷೇತ್ರಕ್ಕೆ ಕಾಲಿಟ್ಟ ಮನೀಶ್​ ತಿರುಗಿ ನೋಡುವುದೇ ಇಲ್ಲ. ಸ್ವರ್ಗ ಸಿನಿಮಾ ಮನೀಶ್​ಗೆ ದೊಡ್ಡ ಹೆಸರನ್ನೆನು ತಂದು ಕೊಡದಿದ್ದರು ಸಿನಿಮಾ ಕ್ಷೇತ್ರದಲ್ಲಿ ಇವರನ್ನು ಕೆಲವರು ಗುರುತಿಸುತ್ತಾರೆ. ಅಂದಿನ ಜನಪ್ರಿಯತೆಯ ತುತ್ತತುದಿಯಲ್ಲಿದ್ದ ಶ್ರೀದೇವಿಯಂತ ನಟಿಯರು ಸನ್ನಿ ಡಿಯೋಲ್​ರಂತಹ ನಟರು ಇವರ ಸಂಪರ್ಕಕ್ಕೆ ಬರುತ್ತಾರೆ. ಯಾವಾಗ ಇವರು ರಾಮಗೋಪಾಲ್ ವರ್ಮಾರ ರಂಗೀಲಾ ಸಿನಿಮಾದಲ್ಲಿ ಕೆಲಸ ಮಾಡುತ್ತಾರೋ ಅಲ್ಲಿಂದ ಬಾಲಿವುಡ್ ಜಗತ್ತಿನಲ್ಲಿ ಪ್ರಖ್ಯಾತ ಫ್ಯಾಶನ್ ಡಿಸೈನರ್ ಆಗಿ ಗುರುತಿಸಿಕೊಳ್ಳುತ್ತಾರೆ.

ಇದನ್ನೂ ಓದಿ: ಆಲಿಯಾ ಭಟ್​​ಗೆ ಇದ್ಯಾ ಈ ಮನೋರೋಗ? ಮದುವೆಯ ವೇಳೆ ಮೇಕಪ್​ ಮ್ಯಾನ್​ಗೆ ಬಿಗ್​ ಶಾಕ್​!

ಅಲ್ಲಿಂದ ದಿಲ್ ತೋ ಪಾಲಲ್ ಹೈ, ಕುಚ್​ ಕುಚ್ ಹೋತಾ ಹೈ, ಮೊಹಬ್ಬತೆ, ಕಭಿ ಖುಷಿ ಕಭಿ ಗಮ್, ಸ್ಟುಡೆಂಟ್ ಆಫ್ ದಿ ಇಯರ್ ಹೀಗೆ ಹಲವು ಸಿನಿಮಾಗಳಿಗೆ ಕೆಲಸ ಮಾಡಿ ಅವಾರ್ಡ್​ ಕೂಡ ಪಡೆಯುತ್ತಾರೆ. 30 ವರ್ಷದ ಹಿಂದೆ 500 ರೂಪಾಯಿಂದ ಸಿನಿಮಾ ಫ್ಯಾಶನ್ ಡಿಸೈನ್ ಜರ್ನಿ ಶುರು ಮಾಡಿದ್ದ ಮನೀಶ್​ ಮಲ್ಹೋತ್ರಾ ಈಗ 230 ಕೋಟಿ ರೂಪಾಯಿ ಒಡೆಯ. ತಮ್ಮದೇ ಆದ ಫಿಲ್ಮ್​ ಪ್ರೊಡಕ್ಷನ್​ ಕೂಡ ಶುರು ಮಾಡಿರುವ ಮನೀಶ್, ಮನೀಶ್, ಮಲ್ಹೋತ್ರಾ ಬ್ಯೂಟಿ, ಮನೀಶ್ ಮಲ್ಹೋತ್ರಾ ಜ್ಯುವೆಲರ್ಸ್ ಅನ್ನೋ ಉದ್ಯಮವನ್ನು ಕೂಡ ಶುರು ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೇವಲ 500 ರೂ ಇಂದ ಫ್ಯಾಶನ್​ ಡಿಸೈನಿಂಗ್​ ಶುರು ಮಾಡಿದ ಈತ 230 ಕೋಟಿ ಒಡೆಯ; ಬೆಳೆದಿದ್ದೇ ರೋಚಕ!

https://newsfirstlive.com/wp-content/uploads/2024/09/manish-malhotra-1.jpg

Load More