/newsfirstlive-kannada/media/post_attachments/wp-content/uploads/2024/10/bigg-boss-2-1.jpg)
ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್ 10 ಮೂರನೇ ವಾರಕ್ಕೆ ಕಾಲಿಟ್ಟಿದೆ. ಕಳೆದ ಸೀಸನ್​ಗಿಂತ ಈ ಬಾರಿ ವಿಭಿನ್ನವಾಗಿ ಮೂಡಿ ಬರ್ತಿದೆ ಬಿಗ್​ಬಾಸ್​ 11. ಬಿಗ್​ಬಾಸ್​ಗೆ ಬಂದ ಮೂರೇ ವಾರಕ್ಕೆ ಮನೆಯಲ್ಲಿ ಸ್ಪರ್ಧಿಗಳ ಮನಸ್ಥಿತಿ ಬದಲಾಗಿ ಬಿಟ್ಟಿದೆ. ಮೊನ್ನೆಯ ಸಂಚಿಕೆಯಲ್ಲಿ ಸ್ವರ್ಗ, ನರಕದ ಬೇಲಿಯನ್ನು ಇದ್ದಕ್ಕಿದ್ದಂತೆ ತೆಗೆದು ಹಾಕಲಾಗಿತ್ತು. ಎಲ್ಲಾ ಸ್ಪರ್ಧಿಗಳು ಒಂದೇ ಮನೆಯಲ್ಲಿ ಇದ್ದಾರೆ.
ಇದನ್ನೂ ಓದಿ:BBK11: ನರಕದ ವಿವಾದ.. ಮಹಿಳಾ ಸ್ಪರ್ಧಿಗಳಿಂದಲೇ ಉತ್ತರ ಕೊಡಿಸಿದ ಕಿಚ್ಚ ಸುದೀಪ್; ಕಾರಣವೇನು?
/newsfirstlive-kannada/media/post_attachments/wp-content/uploads/2024/10/bigg-boss-3-3.jpg)
ಆದರೆ 2 ವಾರ ಮುಗಿದು ಮೂರನೇ ವಾರಕ್ಕೆ ನಾಮಿನೇಷನ್​ ವಿಚಾರಕ್ಕೆ ಬಿಗ್​ಬಾಸ್​​ ಮನೆಯಲ್ಲಿ ಸ್ಪರ್ಧಿಗಳ ಮಧ್ಯೆ ಮತ್ತೆ ಕಿಚ್ಚು ಹೆಚ್ಚಾಗಿದೆ.​ ಹೌದು, ಸದ್ಯ ರಿಲೀಸ್​ ಆದ ಹೊಸ ಪ್ರೋಮೋದಲ್ಲಿ ಕ್ಯಾಪ್ಟನ್ ಶಿಶಿರ್​ ಅನುಷಾ ಅವರನ್ನು ನೇರವಾಗಿ ನಾಮಿನೇಟ್​ ಮಾಡಿದ್ದಾರೆ. ಅದಕ್ಕಾಗಿ ​ಅನುಷಾ ನಮಗೆ ಅವರ ತರ ಬಕೆಟ್​ ಹಿಡಿಯೋದಕ್ಕೆ ಬರಲ್ಲ, ನಾವು ಇರೋದೇ ಹಿಂಗೆ ಅಂತ ಹೇಳಿದ್ದಾರೆ.
View this post on Instagram
ಬಳಿಕ ಮಗುವನ್ನು ಚಿವುಟಿ ತೊಟ್ಟಿಲು ತೂಗುವ ಕೆಲಸ ಮಾಡ್ತಾ ಇದ್ದಾರೆ ಇಲ್ಲಿ. ನೇರವಾಗಿ ಐಶ್ವರ್ಯಗೆ ಬಕೆಟ್​ ಹಿಡಿಯೋದನ್ನು ಬಿಡ್ರಿ ಅಂತ ಅನುಷಾ ಹೇಳಿದ್ದಾರೆ. ಅದಕ್ಕೆ ಸಿಡಿದೆದ್ದ ಐಶ್ವರ್ಯ ನನಗೆ ಬಕೆಟ್​ ಹಿಡಿಯೋ ಅವಶ್ಯಕತೆನೆ ಇಲ್ಲ ಅಂತ ಸಿಟ್ಟು ಮಾಡಿಕೊಂಡು ಅಲ್ಲಿಂದ ಹೊರಟು ಹೋಗಿದ್ದಾರೆ. ಸದ್ಯ ಬಿಗ್​ಬಾಸ್​ ಮನೆಯಲ್ಲಿ ಒಟ್ಟು 16 ಮಂದಿ ಉಳಿದುಕೊಂಡಿದ್ದಾರೆ. ಮುಂದಿನ ವಾರ ಯಾವ ಸ್ಪರ್ಧಿ ಬಿಗ್​ಬಾಸ್​ ಮನೆಯಿಂದ ಆಚೆ ಬರಬಹುದು ಎಂದು ಕಾದು ನೋಡಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us