newsfirstkannada.com

ಟಿ20 ವಿಶ್ವಕಪ್​ ವೀಕ್ಷಕರಿಗೆ ಭರ್ಜರಿ ಸುದ್ದಿಕೊಟ್ಟ Airtel..!

Share :

Published June 6, 2024 at 8:58am

Update June 6, 2024 at 9:21am

    ವಿಶ್ವಕಪ್ ಹಿನ್ನೆಲೆಯಲ್ಲಿ ಮೂರು ಹೊಸ ಪ್ಲಾನ್ ಆರಂಭ

    ಅಮೆರಿಕ, ವೆಸ್ಟ್​ ವಿಂಡೀಸ್​ನಲ್ಲಿ ಟಿ20 ವಿಶ್ವಕಪ್ ನಡೀತಿದೆ

    ಜಿಯೋಗೆ ಗ್ರಾಹಕರ ಸೆಳೆಯಲು ಏರ್​ಟೆಲ್ ಮೆಗಾ ಪ್ಲಾನ್

ಕ್ರಿಕೆಟ್ ಅಭಿಮಾನಿಗಳಿಗಾಗಿ ಏರ್‌ಟೆಲ್ ದೊಡ್ಡ ನಿರ್ಧಾರ ಪ್ರಕಟಿಸಿದೆ. ತನ್ನ ಗ್ರಾಹಕರಿಗೆ ಅಗ್ಗದ ಮತ್ತು ಕೈಗೆಟುಕುವ ಯೋಜನೆಗಳನ್ನು ಪ್ರಾರಂಭಿಸಿದೆ. ಟಿ-20 ವಿಶ್ವಕಪ್ ಗಮನದಲ್ಲಿಟ್ಟುಕೊಂಡು ಕಂಪನಿಯು ಮೂರು ಯೋಜನೆಗಳನ್ನು ಪ್ರಾರಂಭಿಸಿದೆ. ಕ್ರಿಕೆಟ್ ಪಂದ್ಯಗಳನ್ನು ವೀಕ್ಷಿಸುವಾಗ ಯಾವುದೇ ತೊಂದರೆ ಆಗದಂತೆ ಏರ್‌ಟೆಲ್ ಪ್ರಿಪೇಯ್ಡ್ ಬಳಕೆದಾರರಿಗೆ 3 ಹೊಸ ಪ್ಲಾನ್ ಬಿಡುಗಡೆ ಮಾಡಿದೆ.

28 ದಿನಗಳ ವ್ಯಾಲಿಡಿಟಿ 499 ರೂ.ಗೆ ಲಭ್ಯ
ಹೊಸ ಪ್ಲಾನ್ ಪ್ರಕಾರ.. ಬಳಕೆದಾರರು 499 ರೂಪಾಯಿ ರಿಚಾರ್ಜ್​​ ಮಾಡಿಕೊಂಡರೆ 28 ದಿನಗಳ ವ್ಯಾಲಿಡಿಟಿ ಸಿಗಲಿದೆ. ಹೆಚ್ಚುವರಿಯಾಗಿ ಬಳಕೆದಾರರು ಪ್ರತಿದಿನ 3GB ಡೇಟಾವನ್ನು ಬಳಸಬಹುದು. ಅನಿಯಮಿತ ಕರೆ ಸೌಲಭ್ಯವೂ ಲಭ್ಯವಿದೆ. ಈ ಯೋಜನೆಯೊಂದಿಗೆ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ನ ಉಚಿತ ಚಂದಾದಾರಿಕೆಯನ್ನು 3 ತಿಂಗಳವರೆಗೆ ವಿಸ್ತರಿಸಲಾಗುತ್ತದೆ. ಜೊತೆಗೆ ಬಳಕೆದಾರರು ಏರ್‌ಟೆಲ್ ಸ್ಟ್ರೀಮ್ ಪ್ಲೇನೊಂದಿಗೆ 20ಕ್ಕೂ ಹೆಚ್ಚು OTT ಪ್ಲಾಟ್‌ಫಾರ್ಮ್‌ಗಳನ್ನು ಉಚಿತವಾಗಿ ಪ್ರವೇಶಿಸಬಹುದು.

ಇದನ್ನೂ ಓದಿ:ಮೊದಲ ಪಂದ್ಯದಲ್ಲೇ ಕೈಕೊಟ್ಟ ಸ್ಟಾರ್​.. ಟೀಂ ಇಂಡಿಯಾದ ಮೊದಲ ಪ್ರಯೋಗ ಫೇಲ್..!

869 ರೂಗಳಿಗೆ 84 ದಿನಗಳ ವ್ಯಾಲಿಡಿಟಿ..!
869 ರೂಪಾಯಿ ಮೊತ್ತದ ಮತ್ತೊಂದು ಹೊಸ ಪ್ಲಾನ್ ಒಂದನ್ನೂ ರಿಲೀಸ್ ಮಾಡಿದೆ. ಇದು ಗ್ರಾಹಕರಿಗೆ 84 ದಿನಗಳ ವ್ಯಾಲಿಡಿಟಿ ನೀಡುತ್ತಿದೆ. ಬಳಕೆದಾರರು ಪ್ರತಿದಿನ 2 GB ಡೇಟಾ ಪಡೆಯುತ್ತಾರೆ. ಯಾವುದೇ ನೆಟ್‌ವರ್ಕ್‌ನಲ್ಲೂ ಅನಿಯಮಿತ ಕರೆ ಸೌಲಭ್ಯ ಲಭ್ಯವಿದೆ. ಬಳಕೆದಾರರು 3 ತಿಂಗಳವರೆಗೆ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ನ ಚಂದಾದಾರಿಕೆಯನ್ನು ಪಡೆಯುತ್ತಾರೆ.

ಇದನ್ನೂ ಓದಿ:4 ತಿಂಗಳಲ್ಲಿ 15 ಕೆಜಿ ತೂಕ.. ಸೂರ್ಯನ ಫಿಟ್ನೆಸ್​ ಬೇರೆಯದ್ದೇ ಕತೆ ಹೇಳ್ತಿದೆ..!

ವಾರ್ಷಿಕ ಯೋಜನೆ
ಏರ್‌ಟೆಲ್ ತನ್ನ ಗ್ರಾಹಕರಿಗಾಗಿ ವಾರ್ಷಿಕ ಯೋಜನೆ ಕೂಡ ಆರಂಭಿಸಿದೆ. ಇದಕ್ಕಾಗಿ ಗ್ರಾಹಕರು 3359 ರೂಪಾಯಿ ರಿಚಾರ್ಜ್​ ಮಾಡಿಕೊಳ್ಳಬೇಕು. ಇದರಲ್ಲಿ ಗ್ರಾಹಕರು 365 ದಿನಗಳ ದೀರ್ಘಾವಧಿ ಸೇವೆಯನ್ನು ಪಡೆಯುತ್ತಾರೆ. ದಿನಕ್ಕೆ 2.5 GB ಡೇಟಾದೊಂದಿಗೆ ಒಂದು ವರ್ಷದವರೆಗೆ Disney Plus Hotstar ನ ಉಚಿತ ಚಂದಾದಾರಿಕೆ ಪಡೆಯುತ್ತೀರಿ.

ಇದನ್ನೂ ಓದಿ:ಪಾಕ್ ವಿರುದ್ಧದ ಪಂದ್ಯಕ್ಕೂ ಮೊದಲೇ ದೊಡ್ಡ ಆಘಾತ.. ಕ್ಯಾಪ್ಟನ್ ರೋಹಿತ್ ಆಡೋದು ಡೌಟ್..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಟಿ20 ವಿಶ್ವಕಪ್​ ವೀಕ್ಷಕರಿಗೆ ಭರ್ಜರಿ ಸುದ್ದಿಕೊಟ್ಟ Airtel..!

https://newsfirstlive.com/wp-content/uploads/2023/06/IND_PAK.jpg

Load More