newsfirstkannada.com

4 ತಿಂಗಳಲ್ಲಿ 15 ಕೆಜಿ ತೂಕ.. ಸೂರ್ಯನ ಫಿಟ್ನೆಸ್​ ಬೇರೆಯದ್ದೇ ಕತೆ ಹೇಳ್ತಿದೆ..!

Share :

Published June 3, 2024 at 2:32pm

  ಕಟ್ಟುನಿಟ್ಟಿನ ಡಯಟ್​..! ಏನೆಲ್ಲಾ ಫಾಲೋ ಮಾಡ್ತಿದ್ದರು..?

  ಫಿಟ್ ಆಗಿ ಕಾಣಿಸ್ತಿರುವ ಸೂರ್ಯ WCನಲ್ಲಿ ಅಬ್ಬರಿಸ್ತಾರಾ..?

  ಅಭ್ಯಾಸ ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್ ಸೂಚನೆ

ಬಾಂಗ್ಲಾ ಎದುರಿನ ಅಭ್ಯಾಸ ಪಂದ್ಯದಲ್ಲಿ ಎಲ್ಲರ ಗಮನ ಸೆಳೆದಿದ್ದು ಸೂರ್ಯಕುಮಾರ್ ಯಾದವ್. ಬ್ಯಾಟಿಂಗ್​ನಲ್ಲಿ ಜಬರ್ದಸ್ತ್​ ಪರ್ಪಾಮೆನ್ಸ್ ನೀಡದಿದ್ದರು. ಸೂರ್ಯಕುಮಾರ್​ ಯಾದವ್​ರ ಹ್ಯಾಂಡ್ಸಮ್​​ ಲುಕ್ಸ್​, ಕಣ್ಮನ ಸೆಳೆಯಿತು. ಚಿರ ಯುವಕನಂತೆ ಕಾಣ್ತಿರುವುದು ನಿಜಕ್ಕೂ ಸೂರ್ಯನಾ ಎಂಬ ಅನುಮಾನ ಒಂದು ಕ್ಷಣ ಫ್ಯಾನ್ಸ್​ ಮನದಲ್ಲಿ ಮೂಡಿತ್ತು.

ಸೂರ್ಯಕುಮಾರ್​​ ಯಾದವ್​​​​..! ಟಿ20 ಲೋಕದ ಅಧಿಪತಿ..! ಬೌಲರ್​ಗಳ ಪಾಲಿನ ರಿಯಲ್ ಕಿಲ್ಲರ್​​. ಈತನ ಅದ್ಭುತ ಬ್ಯಾಟಿಂಗ್, ಅಸಾಮಾನ್ಯ ಶಾಟ್ಸ್​​, ಮೈದಾನದಲ್ಲಿ ಬೌಂಡರಿ, ಸಿಕ್ಸರ್​ಗಳ ಸುನಾಮಿ. ಕ್ರೀಸ್​​​ನಲ್ಲಿ ಸೂರ್ಯಕುಮಾರ್ ಯಾದವ್​ ಇದ್ರೆ, ರುದ್ರತಾಂಡವ ಫಿಕ್ಸ್​. ಅಂಥಹ ಸೂರ್ಯಕುಮಾರ್, ಈಗ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ:ಕರುಳ ಕುಡಿಯ ಒಂದು ಮಾಡಿದ ಪಾಠಶಾಲಾ.. 20 ವರ್ಷದ ನಂತರ ಪ್ರತ್ಯಕ್ಷನಾದ ಮಗನ ತಬ್ಬಿ ಕಣ್ಣೀರಿಟ್ಟ ಅವ್ವ..

ಏಕದಿನ ವಿಶ್ವಕಪ್​ ಬಳಿಕ ಕ್ರಿಕೆಟ್​ನಿಂದ ದೂರ ಉಳಿದಿದ್ದ ಸೂರ್ಯ, ಟಿ20 ವಿಶ್ವಕಪ್​​ನಲ್ಲಿ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಫುಲ್​ ಫಿಟ್​​ ಆ್ಯಂಡ್ ಫೈನ್ ಆಗಿದ್ದಾರೆ. ಆದ್ರೆ, ಚಿರ ಯುವಕನಂತೆ ಕಾಣಿಸಿಕೊಳ್ಳುತ್ತಿರುವ ಹಿಂದೆ ಕಠಿಣ ಪರಿಶ್ರಮದ ಕಥೆ ಇದೆ.

ಸರ್ಜರಿ ಬಳಿಕ ತೂಕ ಹೆಚ್ಚಾಗಿದ್ದ ಸೂರ್ಯಕುಮಾರ್..!
ಗಂಭೀರ ಇಂಜುರಿಗೆ ತುತ್ತಾಗಿದ್ದ ಸೂರ್ಯ, 2023ರ ಡಿಸೆಂಬರ್​ನಲ್ಲಿ ಶಸ್ತ್ರ ಚಿಕೆತ್ಸೆಗೆ ಒಳಗಾಗಿದ್ರು. ಕ್ರಿಕೆಟ್​ನಿಂದಲೂ ದೂರ ಉಳಿದಿದ್ರು. ಈ ವೇಳೆ ಕೆಲ ಔಷಧಿಗಳನ್ನ ಸೇವಿಸಿದ್ದ ಸೂರ್ಯ, 12ರಿಂದ 14 ಕೆಜಿ ಹೆಚ್ಚಾಗಿದ್ರು. ಫಿಟ್ನೆಸ್ ಕೂಡ​ ಕಳೆದುಕೊಂಡಿದ್ದರು. ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್​ ಅಕಾಡಮಿ ಕಸರತ್ತು ಆರಂಭಿಸಿದ್ದ ಸೂರ್ಯಗೆ, ಎನ್​ಸಿಎನಲ್ಲಿದ್ದ ಡೆಕ್ಸಾ ಮಷಿನ್​ ಕೊಂಬಿನಾಂಶ ಇರುವುದು ಸೂಚಿಸಿತ್ತು.

ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಆಟಗಾರನ ದೇಹ ಸಂಯೋಜನೆ ನಿರ್ಣಯಿಸಲು ಡೆಕ್ಸಾ ಯಂತ್ರ ಬಳಸಲಾಗುತ್ತೆ. ಇದೇ ಮಷಿನ್​, ಕಿಬ್ಬೊಟ್ಟೆಯ ಕೊಬ್ಬಿನ ಪ್ರಮಾಣದ ಬಗ್ಗೆ ವಿವರವಾದ ಮಾಹಿತಿ ನೀಡಿತ್ತು. 15 ಕೆಜಿಯಲ್ಲಿ 13 ಕೆಜಿ ಕೊಬ್ಬಿನ ಪ್ರಮಾಣ ಇರುವುದಾಗಿ ಹೇಳಿತ್ತು. ಈ ಬಳಿಕ ಸೂರ್ಯ ಮಾಡಿದ್ದು ಕಟ್ಟುನಿಟ್ಟಿನ ಡಯಟ್​.

ಇದನ್ನೂ ಓದಿ:ಎಲ್ಲರ ಕಣ್ಣು ಹಾರ್ದಿಕ್ ಮೇಲೆ.. ಒಂದೇ ಕಲ್ಲಿನಲ್ಲಿ 5 ಹಕ್ಕಿ ಹೊಡೆಯಲು ಪಾಂಡ್ಯ ಪ್ಲಾನ್​​​..!

ಕಟ್ಟುನಿಟ್ಟಿನ ಡಯಟ್​.. ಏನೆಲ್ಲಾ ಡಯಟ್ ಫಾಲೋ..?
ಇಂಜುರಿಯಿಂದ ಕಮ್​ಬ್ಯಾಕ್ ಮಾಡಿದ್ದ ಸೂರ್ಯ, ಟಿ20 ವಿಶ್ವಕಪ್​ ಟೂರ್ನಿಯನ್ನೇ ದೃಷ್ಟಿಯಲ್ಲಿಟ್ಟುಕೊಂಡಿದ್ದರು. ಇದಕ್ಕಾಗಿ ಕಟ್ಟು ನಿಟ್ಟಿನ ವರ್ಕೌಟ್​ ಮಾಡ್ತಿದ್ದ ಸೂರ್ಯ ಕುಮಾರ್, ಆಹಾರದ ವಿಚಾರದಲ್ಲಿ ಸ್ಟ್ರಿಕ್ಟ್​ ಡಯಟ್ ಪಾಲಿಸಿದ್ರು. ಪರಿಣಾಮ ಬರೋಬ್ಬರಿ 15 ಕೆಜಿ ತೂಕ ಇಳಿಸಿಕೊಂಡರು.

ಸೂರ್ಯ​ ಡಯಟ್ ಪ್ಲಾನ್​.!

 • ನಿರ್ದಿಷ್ಟ ಪ್ರಮಾಣದ ಪ್ರೋಟೀನ್ ಆಹಾರ
 • ಅನ್ನ ಬದಲಿಗೆ ಗೋಧಿ ಹಿಟ್ಟಿನ ರೊಟ್ಟಿ ಸೇವನೆ
 • ಮಾಂಸ, ಮೀನು, ತರಕಾರಿ, ನಟ್ಸ್ ಸೇವನೆ
 • ಡೈರಿ ಉತ್ಪನ್ನ ಆಹಾರಗಳಿಂದ ದೂರ
 • ಊಟದ ವೇಳೆ ಮೊಟ್ಟೆ ಮತ್ತು ಸಲಾಡ್​ ಫಿಕ್ಸ್
 • ಜಂಕ್​ಫುಡ್​​ಗೆ ಕಂಪ್ಲೀಟ್​​ ಬ್ರೇಕ್

ಈ ಕಟ್ಟು ನಿಟ್ಟಿನ ಡಯಟ್​ನಿಂದಾಗಿಯೇ ಸೂರ್ಯ, 15 ಕೆಜಿ ತೂಕ ಇಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಟಿ20 ವಿಶ್ವಕಪ್​ ಟೂರ್ನಿಗಾಗಿ ಸಂಪೂರ್ಣ ಫಿಟ್​ ಆಗಿ ಎಂಟ್ರಿ ನೀಡಿದ್ದಾರೆ. ಯಂಗ್ ಲುಕ್​​ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಒಟ್ನಲ್ಲಿ.! ಸಂಪೂರ್ಣ ಫಿಟ್ ಆಗಿ ಕಾಣಿಸುತ್ತಿರುವ ಸೂರ್ಯ, ಟಿ20 ವಿಶ್ವ ಚುಟುಕು ಸಮರದಲ್ಲಿ ಅಬ್ಬರಿಸ್ತಾರಾ ಕಾದುನೋಡಬೇಕಿದೆ.

ಇದನ್ನೂ ಓದಿ:ಟೀಂ ಇಂಡಿಯಾಗೆ ದೊಡ್ಡ ಹಿನ್ನಡೆ.. ಆತಂಕ ಹುಟ್ಟಿಸಿದ ಮೂವರು ಸ್ಟಾರ್ ಪ್ಲೇಯರ್ಸ್..!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

4 ತಿಂಗಳಲ್ಲಿ 15 ಕೆಜಿ ತೂಕ.. ಸೂರ್ಯನ ಫಿಟ್ನೆಸ್​ ಬೇರೆಯದ್ದೇ ಕತೆ ಹೇಳ್ತಿದೆ..!

https://newsfirstlive.com/wp-content/uploads/2024/06/SURYA-KUMAR-YADAV.jpg

Load More